ಪ್ರಮಾಣಪತ್ರ ವಿತರಣೆ ಲೇಖಕರಿಗೆ ಸನ್ಮಾನ
ಮುನವಳ್ಳಿ,ಏ.1: ಪಟ್ಟಣದ ಶ್ರೀ ಸೋಮಶೇಖರ ಮಠದಲ್ಲಿ ಮುನವಳ್ಳಿ ಸಿರಿ ಗ್ರಂಥದ ಲೇಖಕಿಗೆ ಸನ್ಮಾನ, ಮಹಿಳಾ ದಿನಾಚರಣೆ ಹಾಗೂ ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಶ್ರೀ ಮುರುಘೇಂದ್ರ ಶ್ರೀಗಳು ಮಾತನಾಡಿದರು ದಿವ್ಯಸಾನಿಧ್ಯ ವಹಿಸಿ ಉಪ್ಪಿನಬೆಟಗೇರಿ ಶ್ರೀ ಕುಮಾರ ವಿರೂಪಾಕ್ಷ ಶ್ರೀಗಳು ಮಾತನಾಡಿ ಜೀವನಕ್ಕೊಂದು ಅರ್ಥ ಬೆಲೆ ಬರಬೇಕಾದರೆ ಸಾಕಷ್ಟು ಪೆಟ್ಟುಗಳು ಬೀಳುತ್ತವೆ ಪೆಟ್ಟುಗಳು ಮನುಷ್ಯನನ್ನು ಉನ್ನತ ಬದುಕಿನತ್ತ ಸಾಗಿಸುತ್ತವೆ ಮುರುಘೇಂದ್ರ ಶ್ರೀಗಳು ಲೇಖಕರು ಕಲಾವಿದರನ್ನು ಪ್ರೋತ್ಸಾಹಿಸಿ ಅವರಲ್ಲಿರುವ ಕಲೆ ಬರವಣಿಗೆ ಹೊರ ಜಗತ್ತಿಗೆ ಪರಿಚಯಿಸುತ್ತಿರುವುದು ಶ್ಲ್ಯಾಘನಿಯ ಎಂದರು.
ಪಂಚನಗೌಡ ದ್ಯಾಮನಗೌಡರ, ಡಾ|| ವೈ.ಎಂ. ಯಾಕೊಳ್ಳಿ, ಯ.ರು.ಪಾಟೀಲ, ಶಾರದಾ ದ್ಯಾಮನಗೌಡರ ಮಾತನಾಡಿದರು ಮುರಘೇಂದ್ರ ಶ್ರೀಗಳ ಸಾನಿಧ್ಯದಲ್ಲಿ ನಮ್ಮ ಪಟ್ಟಣದ ಅನೇಕ ಅಭಿವೃದ್ದಿಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ವಿವಿಧ ಸಂಘ ಸಂಸ್ಥೆಗಳು ಇವರ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಅಭಿವೃದ್ದಿ ಗೊಂಡಿವೆ ಎಂದರು.
ಹಿರಿಯರ ವಿಭಾಗದ ಕ್ರೀಡಾಪಟು ಗಂಗಮ್ಮ ಬೆಳಗಾವಿ, ಪಿ.ಎಂ. ಗೋಮಾಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಗ್ರಂಥ ಸಂಪಾದಕ ರಮೇಶ ಮುರಂಕರ, ಸಾಮಾಜಿಕ ಸೇವಾ ಸಂಸ್ಥೆ ಇನ್ನರವ್ಹೀಲ ಕ್ಲಬ್ ಅಧ್ಯಕ್ಷೆ ಗೌರಿ ಜಾವೂರ, ಅನುರಾಧಾ ಬೆಟಗೇರಿ, ರುದ್ರಮ್ಮ ಶಿರಸಂಗಿ, ರಾಜೇಶ್ವರಿ ಬಾಳಿ, ವಿಜಯಲಕ್ಷ್ಮೀ ಕರೀಕಟ್ಟಿ, ಭಾರತಿ ಕಟಗೆನ್ನವರ, ಅಶ್ವಿನಿ ಬಾಳಿ, ಉಷಾ ಗೋಪಶೆಟ್ಟಿ, ಮಂಜುನಾಥ ಭಂಡಾರಿ, ಗಂಗಾಧರ ಗೊರಾಬಾಳ, ಶಂಕರ ಗಯ್ಯಾಳಿ, ವೈ.ಪಿ.ಮಾದರ, ಮೋಹನ ಕಾಮಣ್ಣವರ, ಸುಧೀರ ವಾಘೇರಿ, ಮೋಹನ ಸರ್ವಿ, ವಿವಿದ ಮಹಿಳಾ ಸಂಘಗಳ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.
ಗಂಗಾದರ ಗೊರಾಬಾಳ ಸ್ವಾಗತಿಸಿದರು, ಬಿ.ಬಿ.ಹೂಲಿಗೊಪ್ಪ ನೀರೂಪಿಸಿದರು, ಮಂಜು ಭಂಡಾರಿ ವಂದಿಸಿದರು.
ಲೇಖಕರಿಗೆ ಹಾಗೂ ಸಾಹಿತಿಗಳಿಗೆ ಹಾಗೂ ಪತ್ರಕರ್ತರಿಗೆ ಸನ್ಮಾನ ಜರುಗಿತು.