ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಕಲಿಸುವುದು ಶಿಕ್ಷಕನ ನೈತಿಕ ಜವಾಬ್ದಾರಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಏ.೧ : ಶಿಕ್ಷಕನಾದವನು ವೃತ್ತಿಯಿಂದ ನಿವೃತ್ತನಾಗಬಹುದು. ಆದರೆ ಅವನು ಜೀವನಪೂರ್ತಿ ಶಿಕ್ಷಕನೇ. ವಿದ್ಯಾರ್ಥಿಗಳಿಗೆ ಕೇವಲ ಪಠ್ಯಕ್ರಮವನ್ನು ಬೋಧಿಸುವುದಲ್ಲ, ಅದರೊಂದಿಗೆ ಬದುಕಿನ ಪಾಠವನ್ನು ಹೇಳುವುದು ಶಿಕ್ಷಕನ ನೈತಿಕ ಜವಾಬ್ದಾರಿಯಾಗಿದೆ ಎಂದು ಪ್ರಾಚಾರ್ಯರಾದ ಡಾ. ಎಸ್.ಹೆಚ್. ಪಂಚಾಕ್ಷರಿ ಹೇಳಿದರು.ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ  ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಪ್ರೊ. ಜಿ.ಎನ್. ಬಸವರಾಜಪ್ಪನವರಿಗೆ ಬೀಳ್ಕೊಡುಗೆ ಹಾಗು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಶಿಕ್ಷಕ ರಾಷ್ಟçದ ಬೆನ್ನೆಲುಬು. ಸಮಾಜದ ಅಂಕುಡೊAಕುಗಳನ್ನು ತಿದ್ದುವುದು ಆತನ ನೈತಿಕ ಹಾಗು ಸಾಮಾಜಿಕ ಜವಾಬ್ದಾರಿಯಾಗಿದೆ. ಉತ್ತಮ ಶಿಕ್ಷಕ ಉತ್ತಮ ನಾಗರೀಕನನ್ನು ಸೃಷ್ಟಿಸುತ್ತಾನೆ. ಆ ನಿಟ್ಟಿನಲ್ಲಿ ಇಂದು ನಿವೃತ್ತಿ ಹೊಂದುತ್ತಿರುವ ಜಿ.ಎನ್. ಬಸವರಾಜಪ್ಪನವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂಬುದಕ್ಕೆ ಇಂದು ಕಾಲೇಜು, ಅವರ ಸಹೋದ್ಯೋಗಿಗಳು, ಹಳೆಯ ಹಾಗು ಹಾಲಿ ವಿದ್ಯಾರ್ಥಿಗಳು, ಅಭಿಮಾನಿಗಳು ಹಮ್ಮಿಕೊಂಡಿರುವ ಈ ಸಮಾರಂಭವೇ ಸಾಕ್ಷಿಯಾಗಿದೆ ಎಂದು ಹೇಳಿದರು.ನಾನು ಅವರನ್ನು ಸಹೋದ್ಯೋಗಿಯಾಗಿ, ಮಿತ್ರನಾಗಿ ನೋಡದೆ ವೃತ್ತಿ ಬದುಕಿನಾಚೆ ಅವರ ವ್ಯಕ್ತಿತ್ವವನ್ನು ಕಂಡಿz್ದೆÃನೆ. ಸತತ ಪರಿಶ್ರಮ, ಆತ್ಮೀಯತೆ, ವೃತ್ತಿಬದ್ಧತೆ, ವಿದ್ಯಾರ್ಥಿಸ್ನೇಹಿ ವ್ಯಕ್ತಿತ್ವ ನಾನು ಅವರಲ್ಲಿ ಕಂಡುಕೊAಡ ಉತ್ತಮ ಗುಣಗಳು. ಅವರ ನಿವೃತ್ತಿ ಬದುಕು ಸುಂದರವಾಗಿರಲೆAದು ಮನದುಂಬಿ ಹಾರೈಸುತ್ತೇನೆ ಎಂದರು.ಮುಖ್ಯಅತಿಥಿ ರಾಣೇಬೆನ್ನೂರು ಎಸ್‌ಜೆಎಂವಿ ಬಿಎಜೆಎಸ್‌ಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಆರ್.ವಿ. ಹೆಗಡಾಳ್ ಮಾತನಾಡಿ, ನನ್ನ 30ವರ್ಷಗಳ ವೃತ್ತಿಜೀವನದಲ್ಲಿ ನೇರ ನಡೆನುಡಿಗಳನ್ನಾಡುವಂತಹ ಸಹೋದ್ಯೋಗಿ ಮಿತ್ರರಲ್ಲಿ ಪ್ರೊ. ಜಿ.ಎನ್.ಬಿ. ಅವಿಸ್ಮರಣೀಯರು. ಸುಮಾರು 15ವರ್ಷಗಳ ಅವರ ಒಡನಾಟದಲ್ಲಿ ಅವರಿಂದ ನಾನು ಕಲಿತ ಬದುಕಿನ ಪಾಠಗಳು ಬಹಳ. ಎಂತಹ ಕಠಿಣ ಸಂದರ್ಭದಲ್ಲೂ ಅವರು ಕೊಡುತ್ತಿದ್ದ ಸಲಹೆ, ಧೈರ್ಯ ನನ್ನ ಮೇಲೆ ಬಹಳಷ್ಟು ಪರಿಣಾಮ ಬೀರಿವೆ. ಯಾವುದೇ ಶೈಕ್ಷಣಿಕ ಕಾರ್ಯಕ್ರಮಗಳಾಗಲಿ ಶಿಸ್ತು ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವ ಇವರ ದೊಡ್ಡಗುಣವನ್ನು ನಾನು ಅವರಿಂದ ಕಲಿತೆ. ತಾತ್ಪೂರ್ತಿಕವಾಗಿ ಅದು ಬಹಳ ಜನರಿಗೆ ವೇದನೆ ಎನಿಸಿರಬಹುದು. ಆದರೆ ಅವರಿಂದ ಕಲಿತಿರುವುದೇ ಬಹಳ ಎಂದು ಅವರೊಂದಿಗಿನ ಒಡನಾಟದ ದಿನಗಳನ್ನು ಮೆಲುಕು ಹಾಕಿದರು.
ತಮ್ಮ ವೃತ್ತಿ ಬದುಕಿನಲ್ಲಿ ಬಡತನದ ಕಾರಣಕ್ಕೆ ಶಿಕ್ಷಣದಿಂದ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ನೀಡಿದ ನೆರವು ಇತ್ಯಾದಿಗಳನ್ನು ತೆರೆಮರೆಯಲ್ಲಿ ಮಾಡಿದ್ದಾರೆ. ನಿವೃತ್ತಿ ನಂತರದಲ್ಲಿ ಕಾಲೇಜು ಹಾಗು ವಿದ್ಯಾರ್ಥಿಗಳಿಗೆ ಅವರ ಮಾರ್ಗದರ್ಶನ, ಸಲಹೆ ಯಾವಾಗಲೂ ಇರಲಿ. ಅವರ ನಿವೃತ್ತಿ ಬದುಕು ಸುಖಕರವಾಗಿರಲಿ ಎಂದು ಹಾರೈಸಿದರು.ಮತ್ತೋರ್ವ ಅತಿಥಿ ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಕೆ. ಮಲ್ಲಿಕಾರ್ಜುನ ಮಾತನಾಡಿ, ಪದವಿ ಅಧ್ಯಯನ ಮಂಡಳಿ ಸದಸ್ಯರಾಗಿ, ಪಠ್ಯಕ್ರಮ ಹಾಗು ಪಠ್ಯಪುಸ್ತಕಗಳ ರೂಪುರೇಷೆ ಸಿದ್ಧಪಡಿಸುವಾಗ ಪ್ರೊ. ಬಸವರಾಜಪ್ಪನವರು ನೀಡಿದ ಸಹಕಾರ, ಹಿರಿಯ ಕಿರಿಯರೆನ್ನದೆ ಎಲ್ಲರನ್ನೂ ಸಮಾನ ಪ್ರೀತಿಯಿಂದ ಕಾಣುತ್ತಿದ್ದ ಅವರ ಮಾನವೀಯ ಅಂತಃಕರಣವನ್ನು ಪ್ರಶಂಸಿಸಿದರು.