ಶಾಸಕ ಶಿವರಾಜ ಪಾಟೀಲ್ ಮೇಲೆ ಹಲ್ಲೆ ಯತ್ನ, ಬಂಧನ
(ಸಂಜೆವಾಣಿ ವಾರ್ತೆ)
ರಾಯಚೂರು,ಏ.೧-
ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಮೇಲೆ ಕತ್ತಿಯಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ಜರುಗಿದೆ.
ನಗರದ ಗದ್ವಾಲ್ ರಸ್ತೆಯ ಆಂಜನೇಯ ದೇವಸ್ಥಾನಕ್ಕೆ ಶಾಸಕ ಶಿವರಾಜ್ ಪಾಟೀಲ್ ಹೋಗಿದ್ದರು. ಈ ವೇಳೆ ಚಾಂದಪಾಷಾ ಎನ್ನುವರು ಶಾಸಕರನ್ನು ನೋಡಿ ಅವರ ಬಳಿಗೆ ಓಡೋಡಿ ಬಂದಿದ್ದಾನೆ. ನಂತರ ನಮ್ಮ ಮನೆಗೆನಲ್ಲಿ ಹಾಕಿಸಿಲ್ಲ ಅಂತ ಹೇಳಿದ್ದಾನೆ. ಚಾಂದ್?ಪಾಷಾ ೩-೪ ಕತ್ತಿಗಳನ್ನು ಹಿಡಿದಿದ್ದು, ಶಾಸಕರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ನಂತರ ಅಂಗರಕ್ಷಕರು ತಡೆದಿದ್ದಾರೆ. ಬಳಿಕ ಚಾಂದ್?ಪಾಷಾನನ್ನು ಮಾರ್ಕೆಟ್ ಯಾರ್ಡ್ ಠಾಣೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ, ಹಲ್ಲೆ ಮಾಡಲು ಹೋಗಿಲ್ಲ, ಅವರೊಂದಿಗೆ ಮಾತನಾಡಲು ಹೋಗಿದ್ದೆ ಎಂದು ಚಾಂದ್?ಪಾಷಾ ಹೇಳಿದ್ದಾನೆ. ಮಾರ್ಕೆಟ್ ಯಾರ್ಡ್ ಪೊಲೀಸ್?? ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.