ಪಾದಯಾತ್ರಿಗಳಿಗೆ ಹಣ್ಣು ಹಂಪಲು ವಿತರಣೆ
ದೇವದುರ್ಗ.ಏ.೦೧- ಯುಗಾದಿ ನಿಮಿತ್ತ ದೇವದುರ್ಗ ಮಾರ್ಗವಾಗಿ ಆಂಧ್ರದ ಶ್ರೀಶೈಲಂನ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಪಾದಯಾತ್ರೆ ಕೈಗೊಂಡ ಭಕ್ತರಿಗೆ ಪಟ್ಟಣದ ಹಗಲುವೇ? ಸಾಂಸ್ಕೃತಿಕ ವೇದಿಕೆಯಿಂದ ಹಣ್ಣು ಹಂಪಲು ವಿತರಿಸಲಾಯಿತು.
ಹಗಲುವೇಷ ಕಲಾವಿದ ಈರಣ್ಣ ರುದ್ರಾಕ್ಷಿ ಮಾತನಾಡಿ, ಚಂದ್ರಮಾನ ಯುಗಾದಿ ನಿಮಿತ್ತ ಲಕ್ಷಾಂತರ ಭಕ್ತರು ಶ್ರೀಶೈಲಂಗೆ ಪಾದಯಾತ್ರೆ ಕೈಗೊಂಡು ಭಕ್ತಿಭಾವ ಮೆರೆಯುತ್ತಾರೆ. ಅದರಲ್ಲಿ ನಮ್ಮ ತಾಲೂಕಿನಿಂದ ಸಾವಿರಾರು ಭಕ್ತರು ತೆರಳುತ್ತಾರೆ. ಅವರಿಗಾಗಿ ವಿವಿಧ ಗ್ರಾಮದಲ್ಲಿ ದಾಸೋಹ ಶಿಬಿರ ಆಯೋಜಿಸಿ ಭಕ್ತಿಭಾವ ಮೆರೆಯಲಾಗುತ್ತಿದೆ. ಹಗಲು ವೇಷ ಕಲಾವಿದರ ವೇದಿಕೆಯಿಂದ ಹಣ್ಣು ಹಂಪಲ, ತಂಪು ಪಾನಿಯಾ ವಿತರಣೆ ಮಾಡಲಾಗಿದೆ ಎಂದರು.
ಹಗಲು ವೇಷ ಕಲಾವಿದರಾದ ಶಿವರಾಜ ರುದ್ರಾಕ್ಷಿ, ಯಲ್ಲಪ್ಪ, ಗೋಪಾಲ್, ದುರ್ಗಪ್ಪ, ಶಿವರಾಜ್, ಕಸಾಪ ಅಜೀವ ಸದಸ್ಯ ರಂಗಪ್ಪ ಕೋತಿಗುಡ್ಡ, ಕನ್ನಡ ಸೇನೆ ತಾಲೂಕು ಅಧ್ಯಕ್ಷ ಜಯರಾಜ್, ಶಿವಲಿಂಗ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಇತರರಿದ್ದರು.