ರಾಮ ರಾಜ್ಯದ ಬದಲು ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕು.

ಸಂಜೆವಾಣಿ ವಾರ್ತೆ
ಸಾಣೇಹಳ್ಳಿ, 1;; ಇಲ್ಲಿನ ಎಸ್ ಎಸ್ ರಂಗಮAದಿರದಲ್ಲಿ ಶ್ರೀ ಶಿವಕುಮಾರ ಕಲಾಸಂಘ ಹಾಗೂ ದೆಹಲಿಯ ಪ್ರಸಿದ್ಧ ಫೌಂಡೇಶನ್ ಅವರ ಸಂಯುಕ್ತಾಶ್ರಯದಲ್ಲಿ ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್ ಅವರ ಪರಿಕಲ್ಪನೆ, ನೃತ್ಯ ಸಂಯೋಜನೆ, ಕಲಾತ್ಮಕ ನಿರ್ದೇಶನದ ‘ಏಕಮ್ ಸತ್ ವಿಪ್ರಾ ಬಹುಧಾ ವದಂತಿ’ ಮತ್ತು ‘ಮಹಾತ್ಮರ ನಂತರ ಭಾರತ’ ಎಂಬ ಶಾಸ್ತಿçÃಯ ನೃತ್ಯಪ್ರದರ್ಶನವನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ ಶ್ರೀನಿವಾಸ್ ಕಪ್ಪಣ್ಣನವರು ತಿಳಿಸಿದಂತೆ ಈ ಹಿಂದೆ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದಿAದ ತುಮ್ಹಾರೆ ಸಿವಾ ಔರ್ ಕೋಯಿ ನಹೀ, ನೀನಲ್ಲದೆ ಮತ್ತಾರು ಇಲ್ಲವಯ್ಯ ಎನ್ನುವ ಬಸವಣ್ಣನವರ 44 ವಚನಗಳನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿಸಿ, ಹಾಡಿಸಿ ನುರಿತ ಶಾಸ್ತಿçÃಯ ಕಲಾವಿದರಿಂದ ವಚನ ನೃತ್ಯರೂಪಕವನ್ನು ದೇಶದ 16 ರಾಜ್ಯಗಳ ಪ್ರಮುಖ ನಗರಗಳಲ್ಲಿ 55 ಪ್ರದರ್ಶನಗಳನ್ನ ನೀಡಲಾಯಿತು. ಅದರಂತೆ ಇಂದು ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್ ಅವರ ಸಂಯೋಜನೆ ಹಾಗೂ ನಿರ್ದೇನದ ‘ಏಕಮ್ ಸತ್ ವಿಪ್ರಾ ಬಹುಧಾ ವದಂತಿ’ ಮತ್ತು ‘ಮಹಾತ್ಮರ ನಂತರ ಭಾರತ’ ಶಾಸ್ತಿçÃಯ ನೃತ್ಯ ಪ್ರದರ್ಶನ ತುಂಬಾ ಅಮೋಘವಾಗಿತ್ತು. ಈ ಎರಡು ನೃತ್ಯಗಳ ಆಶಯ ಒಂದೇ. ಇವರ ನೃತ್ಯ ರಾಮರಾಜ್ಯ ಆಗಬೇಕು ಎಂದು ಹೇಳಿದರೆ ಅದು ಕಲ್ಯಾಣ ರಾಜ್ಯವಾಗಬೇಕೆಂದನ್ನು ಹೇಳುತ್ತದೆ. ಇವನಾರವ, ಇವನರಾವ ಎನ್ನದೇ ಇವ ನಮ್ಮವ, ಇವ ನಮ್ಮವ ಎಂದು ಒಟ್ಟಾಗಿ ಬಾಳುವ ಮೂಲಕ ಬಸವಣ್ಣನವರ ಆಶಯಗಳನ್ನು ಸಾಕಾರಗೊಳಿಸಬೇಕಿದೆ.ಇತ್ತೀಚಿಗೆ ರಾಮನ ಹಿನ್ನೆಲೆಯಲ್ಲಿ ಎನೆಲ್ಲಾ ನಡೆಯುತ್ತಿದೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ನೃತ್ಯದಲ್ಲಿ ಕಲಾವಿದರು ಸಾಕಷ್ಟು ಪರಿಣಿತರಿದ್ದು ರಂಗವೇದಿಕೆಯನ್ನು ಬಳಸಿಕೊಂಡಿದ್ದು, ಅವರ ಆಂಗಿಕ ಚಲನವಲನಗಳು, ಅಭಿವ್ಯಕ್ತಿಗಳು ತುಂಬಾ ಮನೋಜ್ಞವಾಗಿ ಮೂಡಿಬಂದಿವೆ. ಭಾರತದ ತ್ರಿವರ್ಣ ಧ್ವಜದ ಸಂಕೇತವನ್ನು ಅಲ್ಲಲ್ಲಿ ಬಳಿಸಿದ್ದು ಎಲ್ಲ ಮತ-ಪಂಥದವರು ಸಂಘರ್ಷಗಳನ್ನು ಬಿಟ್ಟು ಒಟ್ಟಾಗಿ ನಡೆದರೆ ಭಾವೈಕ್ಯತೆಯಿಂದ ಬಾಳಲು ಸಾಧ್ಯ ಎಂಬುದನ್ನು ತೋರಿಸಲಾಗಿದೆ. ಹಿಂಸೆಯಿAದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಗಾಂಧಿಯವರ ಸತ್ಯ ಮತು ಅಹಿಂಸೆಯ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಭಾ ಕಲಾವಿದರೊಂದಿಗೆ ತಾವು ಅಭಿನಯಿಸಿದ್ದು ಸಂತೋಷವನ್ನು ತಂದಿದೆ. ಸಾಣೇಹಳ್ಳಿಯಲ್ಲಿ ಇಂತಹ ಅನೇಕ ರಂಗ ಚಟುವಟಿಗಳು ಸದಾ ನಡೆಯುತ್ತಿದ್ದು ಅದರಿಂದ ಸಾರ್ವಜನಿಕರು ಜಾಗೃತರಾಗಬೇಕಿದೆ. ಈ ನೃತ್ಯ ಪ್ರದರ್ಶನ ಆಯೋಜನೆ ಮಾಡಿದ ಕಪ್ಪಣ್ಣನವರಿಗೆ, ಪ್ರದರ್ಶನಕ್ಕೆ ತಮ್ಮ ತಂಡವನ್ನು ಕರೆತಂದ ಪ್ರತಿಭಾ ಪ್ರಹ್ಲಾದ್ ಅವರಿಗೆ, ನೃತ್ಯ ಪ್ರದರ್ಶಿಸಿದ ಎಲ್ಲ ಕಲಾವಿದರಿಗೆ ಅಭಿನಂದನೆಗಳು. ಸಾಣೇಹಳ್ಳಿಯ ರಂಗಚಟುವಟಿಕೆಗಳೊAದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವಂತೆ ಹೇಳಿದರು.