ಜೀವ ಬೆದರಿಕೆ : ದೂರು ದಾಖಲು
ಸಂಜೆವಾಣಿ ವಾರ್ತೆ ಸಿಂಧನೂರು.ಏ.೦೧- ನಗರದ ತಾಲೂಕು ಪಶು ಆಸ್ಪತ್ರೆಯ ಗಣಕಯಂತ್ರದಲ್ಲಿನ ಗೌಪ್ಯ ಮಾಹಿತಿಗಳನ್ನು ನಕಲು (ಕಾಪಿ) ಮಾಡಿಕೊಂಡು ಯಾರಿಗೇದರು ಹೇಳಿದರೆ ‘ನಿನ್ನ ಜೀವ ನನ್ನ ಕೈಯಲ್ಲಿ ಎಂದು ಜೀವ ಬೆದರಿಕೆ ಹಾಕಿದ್ದಾನೆ ನನಗೆ ರಕ್ಷಣೆ ಕೊಡಿ ಎಂದು ಅಮರೇಶ ದೂರು ದಾಖಲಿಸುವಂತೆ ನಗರ ಠಾಣೆಯಲ್ಲಿ ಅರ್ಜಿ ಸಲ್ಲಿಸಿದ್ದಾನೆ.ಸಿಂಧನೂರು ಪಶು ಆಸ್ಪತ್ರೆ ವೆಟರನರಿ ಇನ್ಸ್ಪೆಕ್ಟರ್ ರಾಮಾ ನಾಯಕ್ ಉಚಿತ ಔಷಧಿಗೆ ಹಣ ಪಡೆದು ಕುರಿಗಳ ಸಾವಿಗೆ ಕಾರಣ ನಾಗಿದ್ದಾನೆಂಬ ಆರೋಪ ದಡಿಯಲ್ಲಿ ಘಟನೆ ತರುವಾಯ ಕುಷ್ಟಗಿ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು. ನಿನ್ನೆ ರವಿವಾರ ರಾತ್ರಿ ೯-೩೦ ಸುಮಾರಿಗೆ ಸಿಂಧನೂರು ತಾಲೂಕು ಪಶು ಆಸ್ಪತ್ರೆಯಲ್ಲಿ ಕಂಪ್ಯೂಟರ್ ಆಪರೇಟರ್ ಹೊರ ಗುತ್ತಿಗೆ ಕೆಲಸಗಾರ ಅಮರೇಶ ತಂ.ಚಂದಪ್ಪ ಸಾ.ರೈತ ನಗರ ಕ್ಯಾಂಪ್ ಎಂಬಾತನನ್ನು ಮೊಬೈಲ್ ಕರೆ ಮಾಡಿ ಕರೆಯಿಸಿಕೊಂಡು ಕಂಪ್ಯೂಟರ್‌ನಲ್ಲಿನ ಗೌಪ್ಯ ಮಾಹಿತಿಗಳನ್ನು ಕಾಪಿ ಮಾಡಿಕೊಂಡು, ಬಳಗಾನೂರ ಠಾಣೆಯಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲು ಆಗಲು ನೀನೆ ಕಾರಣ ನಿನ್ನನ್ನು ಬಿಡುವುದಿಲ್ಲ ಎಂಬ ಜೀವ ಬೆದರಿಕೆಯನ್ನು ರಾಮಾ ನಾಯಕ್ ಮತ್ತು ಆತನ ಇಬ್ಬರು ಮಕ್ಕಳು ಹಾಕಿದ್ದಾರೆಂದು ದೂರು ದಾಖಲಿಸಲು ಅರ್ಜಿಯಲ್ಲಿ ಅರ್ಜಿದಾರ ತಿಳಿಸಿದ್ದಾನೆ.ರಾತ್ರಿ ಹೊತ್ತಲ್ಲಿ ತಾಲೂಕು ಆಸ್ಪತ್ರೆ ಬಾಗಿಲು ತೆಗೆದು ಹೋಗಿದ್ದು ಮೊದಲನೇ ತಪ್ಪು, ವರ್ಗಾವಣೆ ಆದ ಮೇಲೂ ಕಛೇರಿಯ ಮುಖ್ಯ ವೈದ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ವರ್ಗಾವಣೆ ಗೊಂಡ ಮೂಲ ಕಛೇರಿಯಲ್ಲಿ ಅಂತಹ ಮುಖ್ಯವಾದ ಕೆಲಸ ರಾತ್ರಿ ಹೊತ್ತಿನಲ್ಲಿ ಏನಿತ್ತು? ಎಂಬ ಅನುಮಾನದ ಹೊಗೆಯಾಡುತ್ತಿದೆ. ಮುಖ್ಯವಾಗಿ ತಾಲೂಕು ಕಛೇರಿ ಯಾದರೂ ಇದರಲ್ಲಿ ಸಿ.ಸಿ ಕ್ಯಾಮರಾ ಗಳಿಲ್ಲದಿರುವುದು ದೌರ್ಬಲ್ಯ ಸಂಗತಿ ಒಟ್ಟಾರೆ ಇದು ಒಂದು ರೀತಿಯ ದನದ ಕೊಂಡವಾಡ ಆಗಿದೆ ಎಂದರೂ ತಪ್ಪಾಗಲ್ಲ ಎಂದು ಸಾರ್ವಜನಿಕರು ಪತ್ರಿಕೆಯೊಂದಿಗೆ ಆಕ್ರೋಶ ಹೊರ ಹಾಕಿದರು.