ಗೆಲುವಿನ ನಂತರ ಜಗಳೂರು ಕ್ಷೇತ್ರದಲ್ಲಿ ಕೈಗಾರಿಕೋದ್ಯಮ ಸ್ಥಾಪನೆಗೆ ಆದ್ಯತೆ :-
ಸಂಜೆವಾಣಿ ವಾರ್ತೆ
ಜಗಳೂರು.1:- ಕಳೆದ ಲೋಕಸಭಾ ಚುನಾವಣೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಡಬಲ್ ಇಂಜಿನ್ ಸರಕಾರದಲ್ಲಿ ಒಂದು ಇಂಜಿನ್ ಕಳಚಿದೆ.ಕ್ಷೇತ್ರದಲ್ಲಿ ಪ್ರಬುದ್ದ ಮತದಾರರು ಕಾಂಗ್ರೆಸ್ ಕೈ ಹಿಡಿದು ಗೆಲ್ಲಿಸಿದರೆ ನಾನು ಕ್ಷೇತ್ರದ ಸಮಸ್ಯೆಗಳ ಧ್ವನಿಯಾಗುವೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.ಪಟ್ಟಣದ ತರಳಬಾಳು ಭವನದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಅಧಿಕೃತ ಚುನಾವಣೆ ಪ್ರಚಾರದ ಅಂಗವಾಗಿ ಆಯೋಜಿಸಿದ್ದ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.’ಕ್ಷೇತ್ರದ ಕಕ್ಕರಗೊಳ್ಳ ಗ್ರಾಮದ ಮಗಳಾಗಿ,ಶಾಮನೂರು ಕುಟುಂಬದ ಸೊಸೆಯಾಗಿ ಕಳೆದ 25 ವರ್ಷಗಳಿಂದ ಜನತೆಯ ನಾಡಿಮಿಡಿತ ಅರ್ಥೈಸಿಕೊಂಡಿದ್ದು.ಕಾಂಗ್ರೆಸ್ ಪಕ್ಷದ ಗೆಲುವಿನ ನಿರೀಕ್ಷೆಯಲ್ಲಿದ್ದು ಗೆಲುವಿನ ನಂತರ ಜಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಮೂರು ಬಾರಿ ಆಗಮಿಸಿರುವೆ ಸ್ಥಳೀಯ ರೈತರ ಸಮ ಸ್ಯೆ ಮನಗಂಡು ಕನಸಿನ ನೀರಾವರಿ ಯೋಜನೆಗಳಾದ 57ಕೆರೆ ತುಂಬಿಸುವ ಯೋಜನೆ,ಭದ್ರಾಮೇಲ್ದಂಡೆ ಯೋಜನೆ ಸಾಕಾರಕ್ಕೆ ಕೈಜೋಡಿಸುವೆ.ಹಾಗೂ ಉದ್ಯೋಗ ಹರಸಿ ನಗರಪ್ರದೇಶದತ್ತ ಸಾಗುತ್ತಿರುವ ಮಹಿಳೆಯರಿಗೆ ಸ್ಥಳೀಯವಾಗಿ ಗಾರ್ಮೆಂಟ್ಸ್, ಯವಕರಿಗೆ ಕೈಗಾರಿಕೋದ್ಯಮ ಸ್ಥಾಪನೆಗೆ ಒತ್ತು ನೀಡಲಾಗು ವುದು ಎಂದು ಹೇಳಿದರು.ಮುಂಬರುವ ದಿನಗಳಲ್ಲಿ ಕ್ಯಾನ್ಸರ್,ಗರ್ಭಿಣಿ ಮಹಿಳೆಯರಿಗೆ ಸ್ಕ್ಯಾನಿಂಗ್,ಸೇರಿದಂತೆ ಎಸ್ ಎಸ್ ಟ್ರಸ್ಟ ಕೇರ್ ನಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗುವುದು.ನಮ್ಮ ಮೇಲಿನ ವಿಶ್ವಾಸಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು.ಮತದಾರರಿಗೆ ಚಿರ ಋಣಿ ಯಾಗಿರುವೆ ಎಂದರು.ಶಾಸಕ‌ ಬಿ.ದೇವೇಂದ್ರಪ್ಪ ಮಾತನಾಡಿ,57ಕೆರೆ ಏತ ನೀರಾವರಿ ಯೋಜನೆ ಚಾಲನೆಗೆ ಸ್ವಂತ ಖರ್ಚಿನಲ್ಲಿ ಮೋಟಾರ್ ಪೂರೈಕೆ ಮಾಡಿದ ಹೃದಯ ಶ್ರೀಮಂತಿಕೆ ಅವರದ್ದು.ಶಾಮನೂರು ಕುಟುಂಬದಲ್ಲಿ ರಾಜಕಾರಣಕ್ಕೆ ಬೆನ್ನೆಲುಬಾಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಸಂಸದರನ್ನಾಗಿ ಆಯ್ಕೆಮಾಡ ಬೇಕಿದೆ‌.ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ತೊರೆದು ಹೋದ ವರು ಇದೀಗ ಮರಳಿ ಪಕ್ಷಕ್ಕೆ‌ ಸೇರ್ಪಡೆಯಾಗಿದ್ದು.ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಋಣ ತೀರಿಸಬೇಕಿದೆ ಎಂದು ಕರೆ ನೀಡಿದರು.ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತ ನಾಡಿ,ದೇಶದಲ್ಲಿ ಲೋಕಸಭಾ ಚುನಾವಣೆ ಧರ್ಮ ಅಧರ್ಮದ ಮಧ್ಯೆ ನಡೆಯುವ ಸಮರವಾಗಿದೆ.ದೇವರು ಧರ್ಮದ ಹೆಸರಿನ ಲ್ಲಿ,ಹುಸಿ ಭರವಸೆಗಳ ರಾಜಕಾರಣ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ‌ ತಕ್ಕ ಪಾಠ ಕಲಿಸಬೇಕಿದೆ.ಸಂವಿಧಾನದ ಉಳಿವಿಗಾಗಿ, ಸುಭೀಕ್ಷೆಗಾಗಿ ಕಾಂಗ್ರೆಸ್ ಪಕ್ಷ ಅನಿವಾರ್ಯ.ಮುಖ್ಯಮಂತ್ರಿ ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಗೆಲುವಿಗೆ ಸಂಕಲ್ಪ‌ಅಗತ್ಯ.ಕಾರ್ಯ ಕರ್ತರು ವೈಮನಸ್ಸು ತೊರೆದು ವಿಧಾನ ಸಭಾ ಕ್ಷೇತ್ರದಿಂದ ಬಹುಮತ ಸಾಬೀತು ಪಡಿಸಿ ಜಿಲ್ಲೆಯನ್ನು ಅಭಿವೃದ್ದಿಗೊಳಿಸಿದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಕೈ ಬಲಪಡಿಸಬೇಕಿದೆ ಎಂದರು.ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಮಾತನಾಡಿ,ಮಾಜಿ ಸಂಸದ ಹಾಗೂ ಸಚಿವ ಜಿ.ಎಂ.ಸಿದ್ದೇಶ್ವರ್ ಅವರು ದಾವಣಗೆರೆ ಸ್ಮಾರ್ಟ್ ಸಿಟಿ ಹೆಸರಿನಲ್ಲಿ‌ ಕೋಟಿ ಕೋಟಿ ಲೂಟಿ ಹೊಡೆದರು. ಕೇಂದ್ರದ ವಿಮಾನ ಯಾನಖಾತೆ ಸವಿರಾಗಿದ್ದ ವೇಳೆ ಏರ್ ಪೋರ್ಟ್ ಇರಲಿ ಒಂದು ಸುಸಜ್ಜಿತ ರಸ್ತೆ ಕಾಮಗಾರಿ ಕೈಗೊಂಡಿ ಲ್ಲ.ಎಸ್.ಎಸ್.ಮಲ್ಲಿಕಾರ್ಜುನ್ ಸಚಿವರಾಗಿದ್ದ ವೇಳೆ ಕೈ ಗೊಂಡ ಕುಂದುವಾಡ ಕೆರೆ ನಿರ್ಮಾಣ ಕಾಮಗಾರಿ ವೆಚ್ಚದ 3ಕೋಟಿ ಅನುದಾನದಲ್ಲಿ ಅವ್ಯವಹಾರ ನಡೆದಿದೆ.ಇದೀಗ ಬಿಜೆಪಿ ಮನೆಯೊಂದು 6 ಬಾಗಿಲುಗಳಾಗಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರ ಒಗ್ಗಟ್ಟು ಕುಸಿತಗೊಂಡಿದೆ ಎಂದು ಆರೋಪಿಸಿದರು.
