ಆರೋಗ್ಯ ತಪಾಸಣಾ ಕಿಟ್ ವಿತರಣೆ
ಗದಗ, ಏ1: ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಸಮೀಕ್ಷಾ ಘಟಕ ಹಾಗೂ ಎಮ್.ಆರ್.ಪಿ.ಸಿ.ಎಲ್. (ಮಂಗಳೂರು ರಿಫೈನರಿ ಆ್ಯಂಡ ಪೆಟ್ರೋ ಕೆಮಿಕಲ್ಸ ಲಿಮಿಟೆಡ್ )ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಗದಗ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಆರೋಗ್ಯ ತಪಾಸಣಾ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಥೋಡ್ ಅವರು ಮಾತನಾಡಿದರು.
ಎಮ್.ಆರ್.ಪಿ.ಸಿ.ಎಲ್. ಮಂಗಳೂರು ಕಂಪನಿಯ ಎಕ್ಸಿಕ್ಯೂಟಿವ್ ಸಿ.ಎಸ್.ಆರ್.ಸ್ಟೀವನ್ ಪಿಂಟೋ, ತಾಲೂಕಾ ಅರೋಗ್ಯಾಧಿಕಾರಿ ಡಾ.ಪ್ರೀತ್ ಖೋನ, ವೈದ್ಯಾಧಿಕಾರಿ ಡಾ.ಶರಣು ಗಾಣಗೇರ, ಡಾ. ಚೇತನ್.ಎಚ್.ಎಚ್. ಡಾ. ರವಿ ಕಡಗಾವಿ ಹಾಗೂ ಜಿಲ್ಲಾ ಸಮೀಕ್ಷಾ ಘಟಕದ ,ಪ್ರಾ.ಥಮಿಕ ಆರೋಗ್ಯ ಕೇಂದ್ರದ ,ಎನ್.ಸಿ.ಡಿ. ಕ್ಲಿನಿಕ್‍ನ ಸಿಬ್ಬಂದಿಗಳು ಭಾಗವಹಿಸಿದರು.