ಫೈನಲ್ ಹಂತ ತಲುಪಿದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್‌

ಸಂಜೆವಾಣಿ ವಾರ್ತೆ
ದಾವಣಗೆರೆ, ಮಾ.31; ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆ ಜನಪ್ರಿಯ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಕಬಡ್ಡಿ ಪ್ರೀಮಿಯರ್ ಲೀಗ್‌(ಜೆಕೆಪಿಎಲ್)-2024ನ ಅಂತಿಮ ಪಂದ್ಯಗಳು ಇಂದು ಸಂಜೆ ನಡೆಯಲಿದೆ.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರದಿಂದ ಆರಂಭವಾಗಿರುವ ಜಿಲ್ಲಾ ಮಟ್ಟದ ಕಬಡ್ಡಿ ಪ್ರೀಮಿಯರ್ ಲೀಗ್‌ನ ಲೀಗ್ ಹಂತದ ಪಂದ್ಯಗಳು ಶನಿವಾರ ರಾತ್ರಿ ಮುಕ್ತಾಯವಾಗಿದ್ದು, ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ಮಾ.31ರಂದು ಸಂಜೆ 7ಕ್ಕೆ ಆರಂಭವಾಗಲಿವೆ ಎಂದು ಸಂಘಟನೆಯ ರೂವಾರಿ ಜಯಪ್ರಕಾಶ ಗೌಡ ತಿಳಿಸಿದ್ದಾರೆ.ಕಬಡ್ಡಿ ಪ್ರೇಮಿಗಳು, ಕ್ರೀಡಾಭಿಮಾನಿಗಳು, ಕ್ರೀಡಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಸೆಮಿಫೈನಲ್, ಫೈನಲ್ ಪಂದ್ಯಗಳಿಗೆ ಆಗಮಿಸಬೇಕು. ಲೀಗ್ ಪಂದ್ಯಗಳಿಂದಲೂ ಎಲ್ಲಾ ಪಂದ್ಯಗಳು ತೀವ್ರ ಕುತೂಹಲ ಕೆರಳಿಸಿದ್ದು, ಉಪಾಂತ್ಯ ಪಂದ್ಯಗಳು ಹಾಗೂ ಅಂತಿಮ ಪಂದ್ಯವು ಕಬಡ್ಡಿ ಪ್ರಿಯರಿಗೆ ಆಟದ ರಸಮಯ ಕ್ಷಣಗಳನ್ನು ಕಟ್ಟಿ ಕೊಡಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.