ನಿವೃತ್ತ ಐಎಎಸ್ ಅಧಿಕಾರಿ ಶಿವರಾಮ್‌ಗೆ ನುಡಿ ನಮನ
ಆನೇಕಲ್. ಏ. ೧ – ನಿವೃತ್ತ ಐಎಎಸ್ ಅದಿಕಾರಿಯಾದ ದಿ|| ಕೆ.ಶಿವರಾಮುರವರು ರಾಜ್ಯದಲ್ಲಿ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಸೃಷ್ಠಿಸಿಕೊಂಡು ಬಡವರ ಕಲ್ಯಾಣಕ್ಕಾಗಿ ನಿರಂತವಾಗಿ ಸೇವೆ ಮಾಡುತ್ತಿದ್ದರು ಎಂದು ಛಲವಾದಿ ಮಹಾ ಸಂಸ್ಥಾನ ಮಠದ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ ರವರು ತಿಳಿಸಿದರು.
ಅವರು ಚಂದಾಪುರ ಪುರಸಭೆ ವ್ಯಾಪ್ತಿಯ ಸೂರ್ಯ ನಗರ ಮೊದಲನೆ ಹಂತದಲ್ಲಿ ಛಲವಾದಿ ಮಹಾ ಸಭಾದ ವತಿಯಿಂದ ಆಯೋಜಿಸಿದ್ದ ನಿವೃತ್ತ ಐಎಎಸ್ ಅದಿಕಾರಿ ಕೆ,ಶಿವರಾಮ್ ರವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದರು. ದಿ|| ಕೆ.ಶಿವರಾಮುರವರು ಅಧಿಕಾರಿಯಾಗಿ ಮಾಡಿದ ಸೇವೆಯನ್ನು ವಿಸ್ತರಿಸಿ ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಬೇಕೆಂಬ ಅವರ ಕನಸು ನನಸಾಗಲಿಲ್ಲ ಎಂದರು. ಕೆ.ಶಿವರಾಮು ರವರು ಬಿಟ್ಟು ಹೋದ ರಥವನ್ನು ನಾವೆಲ್ಲರೂ ಸೇರಿ ಮುಂದೆ ಎಳೆದುಕೊಂಡು ಹೋಗ ಬೇಕಿದೆ. ಕೆ.ಶಿವರಾಮ್ ರವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಅವರು ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣ, ಶ್ರೀಮತಿ ವಾಣಿ ಕೆ.ಶಿವರಾಮ್, ಛಲವಾದಿ ಮಹಾ ಸಭಾದ ಜಯರಾಜ್, ಮಹದೇವ್, ಮುನಿಯಪ್ಪ, ಚೌಡಪ್ಪ. ಮೈಕೋ ನಾಗರಾಜ್, ಬಳ್ಳೂರು ಮುನಿವೀರಪ್ಪ. ಎಸ್.ಟಿ.ಡಿ.ರಮೇಶ್, ಪ್ಯಾನ್ಸಿ ರಮೇಶ್, ವೆಂಕಟಸ್ವಾಮಿ. ರಾಮಪ್ಪ, ಬಸವರಾಜು, ಪಟಾಪಟ್ ಪ್ರಕಾಶ್, ಯಂಗಾರೆಡ್ಡಿ,ದೊಡ್ಡಹಾಗಡೆ ಶಂಕರ್, ಟಿ.ವಿ.ಬಾಬು, ಬಂಡಾಪುರ ರಾಮಚಂದ್ರ, ಎಸ್.ಆರ್.ಟಿ.ಅಶೋಕ್, ಜಯಪ್ರಕಾಶ್, ಗುರು, ಬಸವರಾಜು, ಚಂದ್ರಶೇಖರ್ ಇದ್ದರು.