ದಿ ಬಲಿಜ ಸಂಘದ ಚುನಾವಣೆ: ಮೀನಾ ತೂಗುದೀಪ್ ಶ್ರೀನಿವಾಸ್ ಸೇರಿದಂತೆ 15 ಮಂದಿಗೆ ಜಯ
ಸಂಜೆವಾಣಿ ನ್ಯೂಸ್
ಮೈಸೂರು: ಏ.01:- ಜಯನಗರದ ಕೃಷ್ಣದೇವರಾಯ ರಸ್ತೆ ಯಲ್ಲಿರುವ ದಿ ಬಲಿಜ ಸಂಘಔದ 2024 -2029 ರ 5 ವರ್ಷಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಮೀನಾ ತೂಗುದೀಪ್ ಶ್ರೀನಿವಾಸ್ ಸೇರಿದಂತೆ 15 ಜನ ನಿರ್ದೇಶಕರಾಗಿ ಚುನಾವಣೆಯಲ್ಲಿ ಜಯಶೀಲರಾಗಿದ್ದಾರೆ.
ನಡೆದ ಚುನಾವಣೆಯಲ್ಲಿ 30 ಜನ ಚುನಾವಣೆ ಕಣದಲ್ಲಿ ಸ್ಪರ್ಧಿಸಿದ್ದು ಅದರಲ್ಲಿ 15 ಜನ ಅತಿ ಹೆಚ್ಚು ಮತವನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ, ಜಯಶೀಲರಾದ ಎಸ್ ಹೇಮಂತ್ ಕುಮಾರ್, ಕೆ ಲಿಂಗರಾಜು, ಎಂ ಎಸ್ ದಾಮೋದರ, ಜಿ ಮಹೇಶ್ ನಾಯ್ಡು, ಮಂಜುನಾಥ್ .ಆರ್, ಯತಿರಾಜ್, ಹೆಚ್ ವಿ ಗೋವಿಂದರಾಜ್, ಪಿ ಕಾಮರಾಜ್, ಯೋಗೀಶ್ ಎಂ.ಎಸ್, ರಾಘವೇಂದ್ರ ಎo .ಎಸ್, ಆರ್ ರವಿಕುಮಾರ್, ಕೆ ನಾಗರಾಜು ಸಾಮಾನ್ಯ ವರ್ಗದಲ್ಲಿ ಜಯಶೀಲರಾಗಿದ್ದಾರೆ ಮಹಿಳಾ ಮೀಸಲು ಮೀನಾ ತೂಗುದೀಪ್ ಶ್ರೀನಿವಾಸ್, ಸುನಿತಾ ಕೆ, ಪೂಜಾ ಈ, ರವರು ಚುನಾವಣೆಯಲ್ಲಿ ಜಯಶೀಲರಾಗಿದ್ದಾರೆ
ಇದೇ ಸಂದರ್ಭದಲ್ಲಿ ಜಯಶೀಲರಾದ ತಂಡಕ್ಕೆ ಶುಭ ಕೋರಿದ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ, ಎಸ್ ಎನ್ ರಾಜೇಶ್, ಹರೀಶ್ ನಾಯ್ಡು, ಲೀಲಾ ನಾಯ್ಡು, ಆನಂದ್, ಚಿತ್ರನಟರಾದ ವಿಜಯ್ ಸೂರ್ಯ, ರಾಕೇಶ್ ನಾಯ್ಡು, ಕಿರಣ್ ನಾಯ್ಡು,ಹಾಗೂ ಇನ್ನಿತರರು ಶುಭ ಹಾರೈಸಿದರು.