ನವೋದಯ ಶಾಲೆಗೆ ಆಯ್ಕೆ
ತಾಳಿಕೋಟೆ:ಏ.1: ಪಟ್ಟಣದ ಶ್ರೀ ಕುಮಾರೇಶ್ವರ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿ ಶಾಶ್ವರಡ್ಡಿ ಶಂಕರಗೌಡ ಕಂತಲಗಾವಿ 2024ರ ಜವಾಹರ್ ನವೋದಯ ಅರ್ಹತಾ ಪರಿಕ್ಷೆಯಲ್ಲಿ ಮತ್ತು ಸೈನಿಕ್ ಶಾಲೆಯ ಅರ್ಹತಾ ಪರಿಕ್ಷೆಯಲ್ಲಿ ಉತ್ತೀರ್ಣವಾಗುವದರೊಂದಿಗೆ ಆಯ್ಕೆಯಾಗಿದ್ದಾನೆ.
ವಿಧ್ಯಾರ್ಥಿಯ ಆಯ್ಕೆ ಕುರಿತು ಶ್ರೀ ಕುಮಾರೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಅಲ್ಲದೇ ಪಾಲಕ ವೃಂದದವರು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.