ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಆಲಮೇಲ :ಏ.01 ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೊಲ್ಲಾಪುರ ಸಿದ್ದರಾಮೇಶ್ವರ ಪ್ರವಚನವನ್ನು 10ನೇ ದಿನವಾಗಿ ಸಾಗಿಬರುತ್ತಿದ್ದು, ದಿ-02-04-2024ರವರೆಗೆ ಪುರಾಣ ಮಹಾಮಂಗಲವಾಗುವುದು, ಅಂದೇ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗುವುದು. ಇಂದು ಪ್ರವಚನ ಕಾರ್ಯಕ್ರಮಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪಿರ್‍ವಾಲಿಕಾರ, ಇಲ್ಲಿನ ಗಣ್ಯರೊಂದಿಗೆ ಸೇರಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು, 12 ನೇ ಶತಮಾನದ ಸಂತ ಸೊಲ್ಲಾಪುರದ ಸಿದ್ದರಾಮೇಶ್ವರ ಅವರ ಆದರ್ಶಗಳು, 12ನೇ ಶತಮಾನದ ಅನೇಕ ಶರಣರ ಚರಿತ್ರೆಯನ್ನು ತಿಳಿಸಿದರು. ಮತ್ತು ಕನ್ನಡ ನಾಡು ನುಡಿ, ಸಾಹಿತ್ಯ ಕ್ಷೇತ್ರದ ಬೆಳವಣಿಗೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿದರು.
ಬಳಿಕ ಶಾಸಕರ ಧರ್ಮಪತ್ನಿ ನಾಗರತ್ನ ಮನುಗೂಳಿ ಮಾತನಾಡಿ, ಶರಣರ ಅನುಭವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು , ಭಾರತೀಯ ಸಂಸ್ಕಾರ ಮತ್ತು ಹಿಂದಿನ ಆಹಾರ ಪದ್ದತಿಗಳನ್ನು ಅನುಸರಿಸಬೇಕು ಹಿಂದಿನ ಹಿರಿಯರು ಮಕ್ಕಳಿಗೆ ಕಥೆಗಳ ಮೂಲಕ ಅಗಾದವಾದ ಬೆಳಕನ್ನು ಚೆಲ್ಲುತ್ತಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯ ಪ್ರಶಸ್ತಿ ಪಡೆದ ರಮೇಶ ಭಂಟನೂರು, ನಾಗರಾಜ ಅಮರಗೊಂಡ, ಜಾತ್ರಾ ಕಮಿಟಿಯ ಆಡಳಿತ ಮಂಡಳಿಯವರು ಗೌರವಿಸಿದರು, ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದರಾದ ಶೃತಿ , ದಿವ್ಯಾ, ದೀಕ್ಷಾ ಬಿಸ್ಸೆ, ಐಶ್ವರ್ಯ ತಂಡದವರಿಂದ ವಿಶೇಷ ಮನರಂಜನೆ ಜರುಗಿತು. ಕಾರ್ಯಕ್ರಮದಲ್ಲಿ ಡಾ. ಸಂದೀಪ್ ಪಾಟೀಲ್, ಪತ್ರಕರ್ತರಾದ ಅಬ್ದುಲ್‍ಗನಿ, ಅಜಯಕುಮಾರ್ , ಅಮರ್ ನಾರಾಯಣಕರ್, ಹಿರಿಯರಾದ ಪಂಚಯ್ಯ ರಾಂಪುರ ಮಠ, ಕ. ಸಾ.ಪ. ತಾಲೂಕ ಅಧ್ಯಕ್ಷ ಶಿವಶರಣ ಗುಂದಗಿ ಇದ್ದರು.