ನನಗೆ ಮತ ಹಾಕಿ  ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ- ಡಾ.ಪ್ರಭಾಮಲ್ಲಿಕಾರ್ಜುನ
ಸಂಜೆವಾಣಿವಾರ್ತೆ
ಹರಪನಹಳ್ಳಿ.ಮಾ.31 : ಲೋಕಸಭಾ ಚುನಾವಣೆಯಲ್ಲಿ ನನಗೆ ಮತ ಹಾಕಿ ಗೆಲ್ಲಿಸಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾಮಲ್ಲಿಕಾರ್ಜುನ ಮತದಾರರಿಗೆ ಮನವಿ ಮಾಡಿಕೊಂಡರು.
ಪಟ್ಟಣದ ತರಳ ಬಾಳು ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಶನಿವಾರ ಮಾತನಾಡಿದ ಅವರು ಬಿಜೆಪಿ ದೇಶದಲ್ಲಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಲಿದೆ, ಬರ ಅನುದಾನ ನಮ್ಮ ರಾಜ್ಯಕ್ಕೆ ನೀಡಿಲ್ಲ ಎಂದು ದೂರಿದರು. ನನಗೆ ಮತಹಾಕಿ ಗೆಲ್ಲಿಸಿದರೆ  ತ್ರಿಬಲ್ ಇಂಜಿನ ಸರ್ಕಾರವಾಗುತ್ತದೆ, ಇಲ್ಲಿ ಎಂ.ಪಿ.ಲತಾ ಶಾಸಕರಿದ್ದಾರೆ, ದಾವಣಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ ಇದ್ದಾರೆ, ನಾನು ಗೆದ್ದರೂ ಮೂರನೇ ಇಂಜಿನ್ ಆಗಿ ಕೆಲಸ ಮಾಡುತ್ತೇನೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಎಂದು ಹೇಳಿದರು.
ನಮ್ಮ ಮನೆ. ಮನಸ್ಸಿನ ಬಾಗಿಲು ಯಾವಾಗಲೂ ತೆಗೆದಿರುತ್ತೆ, ನಾನು ನಮ್ಮ ಮಾವ ಶಾಮನೂರು ಶಿವಶಂಕರಪ್ಪ ಹಾಗೂ ಪತಿ ಎಸ್‍ಎಸ್ ಮಲ್ಲಿಕಾರ್ಜುನರವರಿಂದ ಸಮಾಜಸೇವೆಯಿಂದ ಸಾಕಷ್ಟು ಕಲಿತಿದ್ದೇನೆ ಎಂದ ಅವರು ದಾವಣಗೆರೆಯಲ್ಲಿ ಎಸ್‍ಎಸ್ ಟ್ರಸ್ಟ್‍ನಿಂದ ಬಿಪಿಎಲ್‍ನವರಿಗೆ ಈಗಾಗಲೇ ಉಚಿತ ಡಯಾಲಿಸಿಸ್, ಮಹಿಳೆಯರಿಗೆ ಉಚಿತ ಡಿಲವರಿ, ಕಣ್ಣಿನ ಪೊರೆ ಚಿಕಿತ್ಸೆ ದಂತ ಚಿಕಿತ್ಸೆ ಹೀಗೆ ಅನೇಕ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಕ್ಕೂ ವಿಸ್ತರಿಸುತ್ತೇವೆ ಎಂದು ತಿಳಿಸಿದರು.
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿ ಮಾತನಾಡಿ  ತಳಮಟ್ಟದಿಂದ ಕಾರ್ಯಕರ್ತರು ಕೆಲಸ ಮಾಡಬೇಕು, ಮತ ಹಾಕಿ ನಂತರ ಕೆಲಸ ಕೇಳಿ, ಪಕ್ಷದ ಕೆಲಸ ಹಾಗೂ ನೀವು ಹೇಳಿದ ಕೆಲಸ ಮಾಡುತ್ತೇನೆ, ತಾಳ್ಮೆ ಇರಲಿ ಎಂದರು.
ಈಗಾಗಲೇ ಹರಪನಹಳ್ಳಿ ಕ್ಷೇತ್ರಕ್ಕೆ ನಾನು ಸಾಕಷ್ಟು ಅನುದಾನ ತಂದಿದ್ದೇನೆ, ಜೂನ್ತಿಂಗಳಲ್ಲಿ ಇನ್ನೂ 100 ಕೋಟಿ ಅನುದಾನ ಬರುತ್ತೆ ಎಂದು ಅವರು ತಿಳಿಸಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಮಾತನಾಡಿ ಕಾಂಗ್ರೆಸ್ಪಕ್ಷ 371 ಜೆ ಕೊಡಿಸಿದ್ದು ಸೇರಿದಂತೆ ಹರಪನಹಳ್ಳಿ ಅಭಿವೃದ್ದಿಗೆ ಶ್ರಮಿಸಿದೆ, ಎಂ.ಪಿ.ಲತಾ ಹಾಗೂ ಡಾ.ಪ್ರಭಾ ಅವರು ಅಕ್ಕ ತಂಗಿಯರಂತೆ ಕೆಲಸ ಮಾಡುತ್ತಾರೆ, ಪ್ರತಿ ಹಳ್ಳಿ, ಪ್ರತಿ ಪಂಚಾಯ್ತಿಯಲ್ಲೂ ಕಾಂಗ್ರೆಸ್ ಜೀವಂತ ವಿದೆ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು ಕೋರಿದರು.
ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿರಾಜ್ ಶೇಕ್ ಮಾತನಾಡಿ ದೇಶದಲ್ಲಿ ವೈರತ್ವದ ರಾಜಕಾರಣ ನಡೆಯುತ್ತಲಿದೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ವಿರುದ್ದ ಮಾತನಾಡುವವರ ಧ್ವನಿ ಹತ್ತಿಕ್ತುತ್ತಿದೆ ಎಂದ ಅವರು ಅದಕ್ಕಾಗಿ ಕಾಂಗ್ರೆಸ್ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಿ ಎಂದರು.
ಮುಖಂಡರಾದ ಸಿ.ಚಂದ್ರಶೇಖರಭಟ್, ಪಿ.ಮಹಾಬಲೇಶ್ವರಗೌಡ, ಡಿ.ಬಸವರಾಜ, ವೈ.ಕೆ,ಬಿ.ದುರುಗಪ್ಪ, ಎಂ.ರಾಜಶೇಖರ, ಅಬ್ದುಲ್ ರಹಿಮಾನ್ ಕೋಡಿಹಳ್ಳಿ ಭೀಮಣ್ಣ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅತಿ ಹೆಚ್ಚಿನ ಮತಗಳಿಂದ ಗೆಲ್ಸಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕೂಡ್ಲಿಗಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕೋಡಿಹಳ್ಳಿ ಭೀಮಪ್ಪ ಹಾಗೂ ತಾ.ಪಂ ಮಾಜಿ ಸದಸ್ಯ ವೆಂಕಟೇಶರೆಡ್ಡಿ ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆಯಾದರು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಕುಬೇರಪ್ಪ, ಕಂಬತ್ತಹಳ್ಳಿ ಮಂಜುನಾಥ,ತಾವರಗೊಂದಿ ಜಯಪ್ರಕಾಶ, ಆಲದಹಳ್ಳಿ ಷಣ್ಮೂಖಪ್ಪ, ಮಹಿಳಾ ಬ್ಲಾಕ್ ಅಧ್ಯಕ್ಷರಾದ ಕಂಚಿಕೇರಿ ಜಯಲಕ್ಷ್ಮಿ, ಬಾಗ್ಯಮ್ಮ, ಮುಖಂಡರಾದ ಬಿ.ಕೆ.ಪ್ರಕಾಶ, ಎಚ್.ಎಂ.ಮಲ್ಲಿಕಾರ್ಜುನ, ಬಿ.ಆರ್.ಕೃಷ್ಣನಾಯ್ಕ, ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಪುರಸಭಾ ಸದಸ್ಯರುಗಳಾzಲಾಟಿದಾದಾಪೀರ, ಗೊಂಗಡಿ ನಾಗರಾಜ, ಟಿ.ವೆಂಕಟೇಶ, ಉದ್ದಾರ ಗಣೇಶ, ಮುಖಂಡರಾದ ಬಂಡ್ರಿ ಗೋಣಿಬಸಪ್ಪ, ಬಿ.ಬಿ.ಹೊಸೂರಪ್ಪ, ಡಾ.ಕೆ.ಬಿ.ಕೊಟ್ರೇಶ,ವಗ್ಗಾಲಿ ನಜೀರ, ಉದಯಶಂಕರ, ಹಾಲೇಶಗೌಡ, ನಾಗರಾಜ, ಬಿ.ವೈ.ಕಾಶಿನಾಥ, ಗುಡಿಹಳ್ಳಿ ಹಾಲೇಶ, ಕಬ್ಬಳ್ಳಿ ಮೈಲಪ್ಪ, ಮೋತಿನಾಯ್ಕ, ಮತ್ತೂರು ಬಸವರಾಜ, ಎಲ್.ಮಂಜನಾಯ್ಕ, ಎನ್.ಶಂಕರ, ಸಾಸಿವಿಹಳ್ಳಿ ನಾಗರಾಜ ಇತರರು ಇದ್ದರು.
31ಎಚ್‍ಆರ್‍ಪಿ1: ಪಟ್ಟಣದ ತರಳ ಬಾಳು ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಲಾಯಿತು.