ಸಮಾಜದಲ್ಲಿ ಮೂಲಭೂತ ಬದಲಾವಣೆ ಯುವಕರಿಂದ ಮಾತ್ರ ಸಾಧ್ಯ: ರೂಪ ಹಾಸನ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.1:ಇಂದು ಸಮಾಜದಲ್ಲಿ ಮೂಲಭೂತ ಬದಲಾವಣೆ ತರಲು ಯುವಜನರಿಂದ ಮಾತ್ರ ಸಾಧ್ಯವಿದೆ. ಆ ನಿಟ್ಟಿನಲ್ಲಿ ಯುವಜನತೆ ಸಜ್ಜಾಗಬೇಕು. ಸಮಾಜವು ಸ್ವಸ್ಥವಾಗಿರಲು ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದೂ ಮುಖ್ಯವಾಗಿದೆ. ಆದ್ದರಿಂದ ಅರಣ್ಯ ರಕ್ಷಣೆಗೆ ನಾವು ಒತ್ತಾಯಿಸಬೇಕು. ಮಳೆಯ ಪ್ರತಿ ಹನಿ ನೀರೂ ಉಪಯೋಗವಾಗುವಂತೆ ನೋಡಿಕೊಳ್ಳಬೇಕು ಎಂದು ಖ್ಯಾತ ಲೇಖಕರು ಹಾಗೂ ಸಾಮಾಜಿಕ ಹೋರಾಟಗಾರ್ತಿ ರÀೂಪ ಹಾಸನ ಅವÀರು ಹೇಳಿದರು.
’13ನೇ ವಿಜಯಪುರ ಸಾಂಸ್ಕøತಿಕ ಜನೋತ್ಸವ’ದ ಅಂಗವಾಗಿ ನಡೆದ ‘ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಪಾತ್ರ’ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವೇಶ್ಯಾವಾಟಿಕೆಗೆ ಬಲಿಯಾಗಿರುವ ಹೆಣ್ಣುಮಕ್ಕಳು ಯಾರು ತಮ್ಮ ಇಚ್ಚೆಯಿಂದ ಆ ಕೆಲಸಕ್ಕೆ ಹೋಗಿರುವುದಿಲ್ಲ. ಪರಿಸ್ಥಿತಿ ಅವರನ್ನು ಅಲ್ಲಿಗೆ ನೂಕಿರುತ್ತದೆ. ಅವರಿಗೆ ಘನತೆಯ ಜೀವನವನ್ನು ರೂಪಿಸುವ ಸಮಾಜ ನಮ್ಮದಾಗಬೇಕು. ಇಂದು ಎಲ್ಲಾ ಆಳ್ವಿಕರು ಹಾಗೂ ಅವರ ಪಕ್ಷಗಳು ಉಳ್ಳವರ ಸೇವೆ ಮಾಡುತ್ತಿವೆ. ಆದ್ದರಿಂದ ಜನರೇ ವಿರೋಧ ಪಕ್ಷವಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಎಐಡಿಎಸ್‍ಒದ ಜಿಲ್ಲಾ ಅಧ್ಯಕ್ಷೆ ಸುರೇಖಾ ಕಡಪಟ್ಟಿ ಅವರು ಮಾತನಾಡಿ, ಯಂಗ್ ಇಂಡಿಯಾ ಎಂದು ಹೇಳಲಾಗುವ ನಮ್ಮ ದೇಶದಲ್ಲಿ ಶೇ.80ರಷ್ಟು ಯುವಜನತೆ ಉದ್ಯೋಗಕ್ಕಾಗಿ ಅಲೆಯುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ನಿರುದ್ಯೋಗಕ್ಕೆ ಸಂಘಟಿತ ಹೋರಾಟವೊಂದೇ ಪರಿಹಾರ ಎಂದು ಹೇಳಿದರು.
ಎ.ಐ.ಎಮ್.ಎಸ್.ಎಸ್.ನ ಸಹ ಸಂಚಾಲಕಿ ಗೀತಾ ಎಚ್. ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಸುಭಾಸ ಯಾದವಾಡ, ವಿ. ಎ. ಪಾಟೀಲ, ನಾದ ಗ್ರಾಮದ ಮೆಹಬೂಬ ಮುಲ್ಲಾ, ಕನ್ನೊಳ್ಳಿಯ ಶೋಭಾ ವಾಲಿಕಾರ, ಪೂಜಾ ಹೊರಕೇರ, ಸಿಂದಗಿಯ ಸುಜಾತಾ ಅಗ್ನಿ, ಮೇಘಾ ವಾಲಿಕಾರ, ಕೊಕಟನೂರಿನ ಪ್ರೀತಿ ಹರಿಜನ ಸೇರಿದಂತೆ ಹಲವಾರು ಜನ ಆಸಕ್ತರು ಚರ್ಚೆಯಲ್ಲಿ ಭಾಗವಹಿಸಿದ್ದರು.