ಶ್ರೀಸಿದ್ದೇಶ್ವರ ಸಂಸ್ಥೆ ಲಾಭಕ್ಕಾಗಿ ಅಲ್ಲ ಲೋಕ ಕಲ್ಯಾಣಕ್ಕಾಗಿ:ಬಸವನಗೌಡ ಪಾಟೀಲ
ಇಂಡಿ:ಏ.1: ಶ್ರೀಸಿದ್ದೇಶ್ವರ ಸಂಸ್ಥೆ ಹಾಗೂ ಸಿದ್ದಸಿರಿ ಯಾವುದೇ ಫಲಾಪೇಕ್ಷೆ ಲಾಭಕ್ಕಾಗಿ ಅಲ್ಲ ಲೋಕಕಲ್ಯಾಣಕ್ಕಾಗಿ ಬಡವರಿಗಾಗಿ ದೀನದುರ್ಬಲರ ಸೇವಾ ಮಾಡುವ ಉದ್ದೇಶದಿಂದ ಕಟ್ಟಲಾಗಿದೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ಶ್ರೀಸಿದ್ದೇಶ್ವರ ಮೆಡಿಕಲ್ಸ್ ಇಂಡಿ 247 ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಸಿ ಮಾತನಾಡಿದ ಅವರು ಲಾಭ ,ಹಾನಿ ನಿರೀಕ್ಷೆಗಾಗಿ ಈ ಸಂಸ್ಥೆಗಳು ಕಟ್ಟಿರುವುದಿಲ್ಲ ಸಮಾಜದ ಕಟ್ಟಕಡೆಯ ಜನಸಮುದಾಯಕ್ಕೆ ಒಳ್ಳೇಯದಾಗಲಿ ಎಂಬ ಉದ್ದೇಶ ಹೊಂದಲಾಗಿದೆ. ಬಂಗಾರೇಮ್ಮಾಗೌಡತಿ ಧಾನದ ರೂಪದಲ್ಲಿ ಭೂಮಿ ನೀಡಿದ್ದಾರೆ ಇಂದು ಜಿಲ್ಲೆಯಲ್ಲಿ ಅನೇಕ ಸಂಸ್ಥೆಗಳು ಸ್ಥಾಪಿಸಲಾಗಿದೆ, ಶ್ರೀಸಂಗನಬಸವ ವಸತಿ ಶಾಲೆಯಲ್ಲಿ ಸಾವಿರಾರು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಸಂಸ್ಥೆಯಿಂದ ಹಾಗೂ ಶ್ರೀಸಿದ್ದೇಶ್ವರ ಸಂಸ್ಥೆಯಿಂದ ವರ್ಷಕ್ಕೆ 65 ಕೋಟಿ ರೂ ಉಳಿತಾಯವಾಗುತ್ತದೆ.ಇಂದು ಕರ್ನಾಟಕ ರಾಜ್ಯದಲ್ಲಿ ಸುಮಾರು 160 ಸಿದ್ದಸಿರಿ ಬ್ಯಾಂಚ್‍ಗಳು ಕಾರ್ಯನಿರ್ವಹಿಸುತ್ತಿವೆ ಜನಸ್ನೇಹಿ ಹಾಗೂ ಭರವಸೆ ,ವಿಶ್ವಾಸದ ಮೂಲಕ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಶಾಸಕ ಶಿವಾನಂದ ಪಾಟೀಲ ಸಹಕಾರಿ ಸಚಿವ ರಾಜಣ್ಣಾ ಕೂಡಿ ಸಹಕಾರಿ ಸೌಹಾರ್ಧತಾಗಳ ಮೇಲೆ ಹೊಸವಿಧದ ನಿಯಮ ಜಾರಿಗೆ ತಂದಿದ್ದಾರೆ. ಇನ್ನು ಮುಂದೆ ಡಿ.ಸಿ.ಸಿ ಬ್ಯಾಂಕಿನಲ್ಲಿಯೇ ಠೇವಣಿ ಇಡಬೇಕು ಎಂಬ ನಿಯಮ ಜಾರಿ ಮಾಡಿದ್ದಾರೆ. ಡಿ.ಸಿ.ಸಿ ಬ್ಯಾಂಕ ನಲ್ಲಿ ಕುಟುಂಬದವರು ಅಪ್ಪ, ಮಗಳು ಸೇರಿ ನಾಟಕ ನಡೆಸಿದ್ದಾರೆ. ಜಿಲ್ಲೆಯಲ್ಲಿ 8 ಎಕರೆ ಪ್ರದೇಶದಲ್ಲಿ ಶ್ರೀಸಿದ್ದೇಶ್ವರ ಸೂಪರ್‍ಸ್ಪೇಶಾಲಿಟಿ ಆಸ್ಪತ್ರೆ ಪೂಜ್ಯರಿಂದ ಲೋರ್ಕಾಪಣೆಗೋಳಿಸಲಾಗಿದೆ. ಮುಂಬರುವ ದಿನಗಳಲ್ಲಿ ವಿಜಯಪೂರ ಜಿಲ್ಲೆಯಲ್ಲಿ ವಿಮಾನ ಹಾರಾಟವಾಗುವುದು 108 ಹಾಸಿಗೆಯುಳ್ಳ ವ್ಯವಸ್ಥೆ ಮಾಡಿ ವಿವಿಧ ಕಾಯಿಲೆಗಳಿಗೆ ಸಂಭಂದಿಸಿದಂತೆ ಬೆಂಗಳೂರಿನಿಂದ ತಜ್ಞ ವೈದ್ಯರನ್ನು ಕರೆಯಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. ಇಂದು ಶ್ರೀಸಿದ್ದೇಶ್ವರ ಆಸ್ಪತ್ರೆಯಲ್ಲಿ ಡಯಾಲೀಸಿಸ್ ಮಾಡಲಾಗುವುದು ಬಿಪಿಎಲ್ ಇದ್ದರೆ ಉಚಿತ ಚಿಕಿತ್ಸೆ ನೀಡಲಾಗುವುದು. ಕೇವಲ 5 ಲಕ್ಷ ರೂ ದಲ್ಲಿ ಕಿಡ್ನಿ ಕಸಿ ಮಾಡುವ ವ್ಯವಸ್ಥೆ ಮಾಡಲಾಗಿದೆ ಅನೇಕರು ಗುಣಮುಖರಾಗಿದ್ದಾರೆ. ಸಿದ್ದೇಶ್ವರ ಮೆಡಿಕಲ್ಸದಲ್ಲಿ ಹಿರಿಯ ನಾಗರೀಕರಿಗೆ ಔಷಧಿ ಗುಳಿಗೆ ಬೇಕಾದರೆ ಹೋಂಡಿಲೇವರಿ ಮಾಡಲಾಗುವುದು ಎಂದರು. ರಾಜಕಾರಣವೇ ಬೇರೆ ಸಮಾಜಿಕ ಸೇವೆ ಬೇರೆ ಹೀಗೆ ಶಾಸಕ ಬಸವನಗೌಡ ಪಾಟೀಲ ಬಡವರ ದೀನದುರ್ಬಲರಬಗ್ಗೆ ಚಿಂತನೆಯಳ್ಳ ರಾಜಕಾರಣಿ. ಜಿಲ್ಲೆಯಲ್ಲಿ ಅನೇಕ ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ ಸಿದ್ದಸಿರಿ ಬ್ಯಾಂಕ ಕರ್ನಾಟಕ ರಾಜ್ಯದಲ್ಲಿಯೇ ನಂ1. ಬ್ಕಾಂಕ್ ಎಂಬ ಹೆಗ್ಗಳಿಕೆ ಇದೆ. ಇಂಡಿಯಲ್ಲಿ ಮೆಡಿಕಲ್ಸ್ 247 ಸ್ಥಾಪಿಸಿರುವದರಿಂದ ತಾಲೂಕಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಹೇಳಿದರು.
ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ.ಬಿ.ಡಿ ಪಾಟೀಲ ಮಾತನಾಡಿದರು.
ತಾಲೂಕಾ ವೈಧ್ಯಾಧಿಕಾರಿ ಡಾ,. ಅರ್ಚನಾ ಕುಲಕರ್ಣಿ, ಖ್ಯಾತ ವೈದ್ಯ ಡಾ.ಎಂ.ಜಿ ಪಾಟೀಲ, ಉದ್ದೀಮೆದಾರ ರಮೇಶ ಗುತ್ತೇದಾರ, ನಿರ್ದೇಶಕ ಜಗದೀಶ ಕ್ಷತ್ರಿ ,ಖ್ಯಾತ ಉದ್ದಿಮೆದಾರ ಸಿ.ಎಂ ಶಹಾ ವೇದಿಕೆಯಲ್ಲಿದ್ದರು. ಯುವ ಸಾಹಿತಿ ಮಂಜುನಾಥ ಜುನಗೊಂಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇಂಡಿ ಮತಕ್ಷೇತ್ರದ ಜನತೆಗೂ ನನಗೂ ನಿಕಟ ಬಾಂಧವ್ಯ ಇದೆ. 2 ಬಾರಿ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಹೆಚ್ಚಿನ ಮತ ನೀಡಿ ಆರ್ಶೀವಾದ ನೀವು ಮಾಡಿದ್ದೀರಿ. ಇಂದು ರಾಜ್ಯದಲ್ಲಿ ಎನೇನು ನಡೆಯುತ್ತಿದೆ ಅಪ್ಪ ಮಕ್ಕಳಿಗೆ ಸೊಕ್ಕ ಮುರಿಯಬೇಕಾಗಿದೆ ಲೋಕಸಭಾ ಚುನಾವಣೆ ಮುಗಿದ ನಂತರ ಬೇತಾಳನಂತೆ ಬೆನ್ನು ಹತ್ತುತ್ತೇನೆ ತಕ್ಕಪಾಠಕಲಿಸುವುದಾಗಿ ಅಪರೋಕ್ಷವಾಗಿ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯಂದ್ರ ವಿರುಧ್ಧ ಹರಿಹಾಯ್ದರು.