ನ್ಯಾ. ಗೋಪಾಲಗೌಡರ ಅಭಿನಂದನಾ ಗ್ರಂಥಕ್ಕೆ ಹೆಸರು ಸೂಚಿಸಿ
ಬೆಂಗಳೂರು, ಸೆ, ೧೯; ರಾಜ್ಯದ ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದಲ್ಲಿ ಹುಟ್ಟಿಬೆಳೆದು ನ್ಯಾಯಾಂಗ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಜಸ್ಟಿಸ್ ವಿ. ಗೋಪಾಲಗೌಡರ ಅಭಿನಂದನಾ ಗ್ರಂಥ ಕ್ಕೆ ಸೂಕ್ತ ಹೆಸರು ಸೂಚಿಸುವಂತೆ ಅಭಿನಂದನಾ ಸಮಿತಿಯ ಸಂಚಾಲಕ ಎಂ.ಎನ್. ಪಿಳ್ಳಪ್ಪ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ಜಸ್ಟೀಸ್ ವಿ. ಗೋಪಾಲಗೌಡರು ೭೩ ವರ್ಷಗಳ ತುಂಬು ಜೀವನ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ೪೫ ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿದ್ದಾರೆ ಎಂದರು.
ಜಸ್ಟಿಸ್ ವಿ. ಗೋಪಾಲಗೌಡರ ಅಭಿನಂದನಾ ಗ್ರಂಥವನ್ನು ಬರಹಗಾರ ಡಾ. ನಂಜುಂಡಸ್ವಾಮಿ ಅವರ ಸಂಪಾದಕದಲ್ಲಿ ಬರಲಿದೆ. ಗ್ರಂಥ ಕನ್ನಡ, ಇಗ್ಲೀಷ್, ಹಿಂದಿ ಮೂರು ಭಾಷೆಗಳಲ್ಲಿ ಬರಲಿದೆ. ಕನ್ನಡ ಭಾಷೆಯಲ್ಲಿ ಬರೆದಿರುವ ಗ್ರಂಥ ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ.
ಅಭಿನಂದನಾ ಗ್ರಂಥದ ಹೆಸರನ್ನು ಈ ಮೊಬೈಲ್ ವಾಟ್ಸ್‌ಆಪ್ ನಂಬರ್‌ಗೆ ೯೯೪೫೪೩೧೯೨೬ ಅಥವಾ ಪತ್ರದ ಮೂಲಕ ಈ ವಿಳಾಸಕ್ಕೆ ಈ ತಿಂಗಳ ೩೦ರ ಒಳಗಾಗಿ ಬರೆದು ತಿಳಿಸಬೇಕು. #೫೨೦, ೮ನೇ ಮುಖ್ಯ ರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಸದಾಶಿವನಗರ, ಬೆಂಗಳೂರು ೫೬೦೦೮೦ ಗ್ರಂಥದ ಹೆಸರನ್ನು ಆಯ್ಕೆ ಮಾಡಿದವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದರು.