ಲೋಕಾಯುಕ್ತದಲ್ಲಿ ೧೮,೮೮೬ ಕೇಸ್ ಬಾಕಿ
ಬೆಂಗಳೂರು,ಸೆ.೧೯- ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವ ರಾಜ್ಯ ಲೋಕಾಯುಕ್ತದಲ್ಲಿ ವಿಲೇವಾರಿಯಾಗದೇ ಸಾವಿರಾರು ಕೇಸ್‌ಗಳು ಬಾಕಿ ಉಳಿದಿವೆ.
ಲೋಕಾಯುಕ್ತದಲ್ಲಿ ೧೮ ಸಾವಿರಕ್ಕೂ ಹೆಚ್ಚು ಕೇಸ್‌ಗಳು ವಿಚಾರಣೆ ಆಗದೇ, ಕಡತಗಳು ಮೂಲೆ ಸೇರಿವೆ.
ಕಳೆದ ಜುಲೈ ತಿಂಗಳ ಅಂತ್ಯದವರೆಗೆ ೧೮ ಸಾವಿರ ಕೇಸ್‌ಗಳು ಲೋಕಾಯುಕ್ತದದಲ್ಲಿ ಬಾಕಿಯಿವೆ ಎಂದು ಪ್ರಕರಣ ವಿವರಗಳಿಂದ ತಿಳಿದುಬಂದಿದೆ.
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರದ್ದಾದ ಬಳಿಕ ಎಲ್ಲಾ ಕೇಸ್‌ಗಳು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ಹಾಗಾಗಿ ಎಸಿಬಿ + ಲೋಕಾಯುಕ್ತದಲ್ಲಿ ದಾಖಲಾದ ಕೇಸ್‌ಗಳ ಪೈಕಿ ಸುಮಾರು ೧೮ ಸಾವಿರ ಕೇಸ್‌ಗಳು ವಿಚಾರಣೆಯಾಗದೇ ಬಾಕಿ ಉಳಿದಿದೆ. ದೂರು ದಾಖಲಾಗಿದ್ದರೂ ಕೆಲವು ಕಾರಣಗಳಿಂದ ವಿಚಾರಣೆ ಬಾಕಿ ಉಳಿದಿದೆ ಅಂತ ಲೋಕಾಯುಕ್ತ ಅಧಿಕಾರಿ ಮೂಲಗಳು ತಿಳಿಸಿವೆ.
ಬಾಕಿ ಕೇಸ್ ವಿವರ:
ಲೋಕಾಯುಕ್ತ- ೫೪೯೫ ಕೇಸ್
ಉಪ ಲೋಕಾಯುಕ್ತ ೧- ೭೦೨೮ ಕೇಸ್
ಉಪ ಲೋಕಾಯುಕ್ತ ೨-೬೩೬೩ ಕೇಸ್
ಒಟ್ಟು ೧೮,೮೮೬ ಕೇಸ್ ಬಾಕಿ