೭೭ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನ, ಶ್ರೀ ಜಗದ್ಗುರು ವಿರಾಟ ವಿಶ್ವಕರ್ಮ ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ
ಹುಮನಾಬಾದ್:ಸೆ.೧೯: ತಾಲ್ಲೂಕಿನ ಹಳ್ಳಿಖೇಡ(ಬಿ)ನ್ ಬಸವತೀರ್ಥ ವಿದ್ಯಾಪೀಠ ಶಾಲೆಯಲ್ಲಿ ೭೭ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಹಾಗೂ ಶ್ರೀ ಜಗದ್ಗುರು ವಿರಾಟ ವಿಶ್ವಕರ್ಮ ಜಯಂತಿ ಆಚರಿಸಲಾಯಿತು,
ಬಸವತೀರ್ಥ ವಿದ್ಯಾಪೀಠ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಕೇಶವರಾವ ತಳಘಟಕರ್ ಅವರು ಧ್ವಜಾರೋಹಣ ನೆರವೇರಿಸಿದರು ಬಳಿಕ ಮಾತನಾಡಿದ ಅವರು ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಉಕ್ಕಿನ ಮನುಷ್ಯ ಸರದಾರ ವಲ್ಲಭಾಯಿ ಪಟೇಲ್ ಅವರ ಕೋಡುಗೆ ಅಪಾರವಾಗಿದೆ ಎಂದು ಬಣ ??ಸಿದರು.
ಬಸವತೀರ್ಥ ವಿದ್ಯಾಪೀಠ ಸ್ಥಳಿಯ ಕಾರ್ಯದರ್ಶಿ ರಮೇಶ ಮಹೇಂದ್ರಕರ್, ಆಡಳಿತಾಧಿಕಾರಿ ಗುಂಡಯ್ಯಾ ತೀರ್ಥಾ, ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ ಪ್ರಭುರಾವ ದುರ್ಗದ, ಶಾಲಾ, ಕಾಲೇಜಿನ ಮುಖ್ಯಸ್ಥ ಬಸವರಾಜ ದುಬಲಗುಂಡಿಕರ್, ಪ್ರಮುಖರಾದ ಚಂದ್ರಕಾAತ ಬಿರಾದಾರ, ಮಸ್ತಾನ ಪಟೇಲ್, ನಿವೃತ್ತ ಶಿಕ್ಷಕ ಶಿವರಾಜ ಸಾಲಿ, ಇದ್ದರು.
ಈ ಸಂಧರ್ಭದಲ್ಲಿ ೨೦೨೪-೨೫ನೇ ಸಾಲಿನ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜಿನ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಯಲ್ಲಿ ವಿಜಯಿಗಳಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪಮಾಣಪತ್ರ ವಿತರಿಸಲಾಯಿತು.
ಭಾಗ್ಯಶ್ರೀ ಹಾಗೂ ಸಂಗಡಿಗರು ೧೦ನೇ ತರಗತಿ ವಿದ್ಯಾರ್ಥಿಗಳು ವಚನ ಪ್ರಾರ್ಥನೆ ಮಾಡಿದರು, ಮಾಣ ಕೇಶ್ವರಿ ಹಾಗೂ ಸಿದ್ದಮ್ಮ ಪಿಯುಸಿ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡಿದರು, ರೇವಪಯ್ಯಾ ಸ್ವಾಮಿ ಸ್ವಾಗತಿಸಿದರು, ಕುಮಾರ ದಿನೇಶಕುಮಾರ ಕೊಂಡಾ ಶೇಷ ಉಪನ್ಯಾಸ ನೀಡಿದರು, ಸಂಗಮೇಶ ಪಾಟೀಲ ನಿರೂಪಿಸಿದರು, ನರೇಂದ್ರ ಪಾಟೀಲ ವಂದಿಸಿದರು.