ಎಲ್ಲರಲ್ಲಿ ಹೃದಯ ಶ್ರೀಮಂತಿಕೆ ಹೆಚ್ಚಾಗಲಿ:ಬಂಡಯ್ಯಶಾಸ್ತಿçÃ
ತಾಳಿಕೋಟೆ:ಸೆ.೧೯: ಮನುಷ್ಯನಾಗಿ ಹುಟ್ಟಿದ ಮೇಲೆ ಜಗತ್ತಿಗೆ ಏನಾದರೂ ಒಂದು ಕೊಡುಗೆ ಕೊಡಬೇಕು ಜ್ಞಾನಿಗಳು ಹೇಳಿದಂತೆ ೮೪ ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವೆಂದು ಹೇಳಿದ್ದಾರೆಂದು ಪುರಾಣ ಪ್ರವಚನಕಾರರಾದ ಪ್ರವಚನ ರತ್ನ ಕಲ್ಬುರ್ಗಿ ಜಿಲ್ಲೆಯ ಸುಂಟನೂರ ಸಂಸ್ಥಾನ ಹಿರೇಮಠದ ಶ್ರೀ ಬಂಡಯ್ಯ ಶಾಸ್ತಿçÃಗಳು ನುಡಿದರು.
ಬುಧವಾರರಂದು ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಪೂಜ್ಯ ಶ್ರೀ ಖಾಸ್ಗತ ಮಹಾಶಿವಯೋಗಿಗಳ ೧೨೮ನೇ ಹಾಗೂ ಶ್ರೀ ವಿರಕ್ತ ಮಹಾ ಶಿವಯೋಗಿಗಳ ೧೦ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ೨೨ರ ವರೆಗೆ ನಡೆಯಲಿರುವ ಆದ್ಯಾತ್ಮೀಕ ಪ್ರವಚನದ ೨ನೇ ದಿನದಂದು ಮಾತನಾಡುತ್ತಿದ್ದ ಅವರು ಅಕ್ಕಮಹಾದೇವಿ ಹೇಳಿದಂತೆ ಮನುಷ್ಯನ ಜೀವನ ಸಾರ್ಥಕತೆಯಾಗಬೇಕಾದರೆ ಪರೋಪಕಾರಿಯಾಗಬೇಕು ಭೂಮಿಯ ಮೇಲಿರುವ ಸಕಲ ಜೀವರಾಶಿಗಳು ಪರೋಪಕಾರಿಯಾಗಿವೆ ಅಕ್ಕಮಹಾದೇವಿ ಹೇಳಿದಂತೆ ಮರವಿದ್ದರೂ ಫಲವೇನು ನೆರಳಿಲ್ಲದನ್ನಕ್ಕಾ ಧನವಿದ್ದು ಫಲವೇನು ದಾನವಿಲ್ಲದನ್ನಕ್ಕಾ ಎಂಬ ವಚನವನ್ನು ಪ್ರಸ್ಥಾಪಿಸಿದ ಶಾಸ್ತಿçÃಗಳು ಹಿಂದೆ ಬರಗಾಲ ಬಂದAತಹ ಸಮಯದಲ್ಲಿ ಶ್ರೀ ವಿರಕ್ತ, ಶ್ರೀ ಖಾಸ್ಗತೇಶ್ವರ ಸಜ್ಜನಪ್ಪನವರು ಅಂದುಗೈದ ತನುಮನ ಧನವು ಬಡ ಜನತೆಗೆ ನೀಡಿದ್ದು ಪರೋಪಕಾರವಾಗಿತ್ತೆಂದರು. ಈ ಶಿವಯೋಗಿಗಳಂತೆ ಬಂಥನಾಳದ ಸಂಗನಬಸವ ಶ್ರೀಗಳು ಸಹ ಬಡ ಜನತೆಯ ವಿದ್ಯಾಬುದ್ದಿಗಾಗಿ ಶಿಕ್ಷಣಕ್ಕಾಗಿ ಜ್ಞಾನ ಮಾಡಿಸಿಕೊಳ್ಳಲು ಗ್ರಾಮಗಳಲ್ಲಿ ಹಾಗೂ ಪಟ್ಟಣಗಳಿಗೆ ತೆರಳಿ ಪುರಾಣ ಪ್ರವಚನಗಳನ್ನು ವಸತಿ ಶಾಲೆಗಳನ್ನು ಪ್ರಾರಂಬಿಸಿ ನಮ್ಮ ಭಾಗದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿ ಪರೋಪಕಾರದ ಕಾರ್ಯ ಮಾಡಿರುವದು ಇನ್ನೂ ಜೀವಂತವಾಗಿದೆ ಎಂದರು.
ಇದು ಅಲ್ಲದೇ ಹಾನಗಲ್ಲ ಕುಮಾರಸ್ವಾಮಿಗಳು ಶಿರಸಂಗಿ ಲಿಂಗರಾಜರು, ಗಧುಗಿನ ಬಸರಿಗಿಡದ ಭೀರಪ್ಪನವರು, ಹಾಗೂ ಬಳ್ಳಾರಿ ಸಕ್ಕರಿ ಕಠಡಪ್ಪನವರು ಈ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಪರೋಪಕಾರ ಕಾರ್ಯ ಮಾಡಿ ಬಡ ಮಕ್ಕಳನ್ನು ಅವರ ಬಧುಕನ್ನು ಬಂಗಾರವಾಗಿಸಿದ್ದಾರೆAದ ಅವರು ಏಷ್ಟೇ ಗಳಿಕೆಯಾಗಲಿ ಶ್ರೀಮಂತತನವೆAಬುದು ನಿರ್ಮಾಣವಾಗಿದ್ದರೂ ಸಹ ಹೃದಯ ಶ್ರೀಮಂತಿಕೆ ಎಂಬುದನ್ನು ಹೆಚ್ಚಿಸಿಕೊಂಡು ನಿರ್ಗತಿಕರಿಗೆ, ಬಡವರಿಗೆ ಉದ್ದರಿಸುವ ಕಾರ್ಯ ಮಾಡಬೇಕೆಂದು ಹೇಳಿದ ಶಾಸ್ತಿçÃಗಳು ಈ ಭಾಗದ ಕೋರೋನಾ ಉಲ್ಬಣಗೊಂಡಾಗ ಶ್ರೀ ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ಪ್ರತಿ ಗ್ರಾಮಗಳಿಗೆ ತೆರಳಿ ಅಲ್ಲಿಯ ಜನತೆಗೆ ದವಸ ದಾನ್ಯಗಳ ಕಿಟ್ಟ್ಗಳನ್ನು ಕೊಟ್ಟು ಅನ್ನದಾಸೋಹಿ ಎನ್ನಿಸಿಕೊಂಡಿರುವದು ಎಲ್ಲರಿಗೆ ಗೊತ್ತಿರುವ ವಿಷಯವಾಗಿದೆ ಎಂದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ವೇ.ವಿಶ್ವನಾಥ ವಿರಕ್ತಮಠ, ವೇ.ಮಹಾಂತಯ್ಯ ವಿರಕ್ತಮಠ, ಗವಾಯಿಗಳಾದ ರಾಜಶೇಖರ ಗುಬ್ಬೇವಾಡ, ಬಸನಗೌಡ ಬಿರಾದಾರ, ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.