ಕಡ್ಡಾಯ ಮತದಾನದ ಪ್ರವೃತ್ತಿ ಬೆಳೆಸಿಕೊಳ್ಳಿ -ಬಿ.ಸದಾಶಿವ ಪ್ರಭುವಿಜಯನಗರದಲ್ಲಿ ಮತದಾನ ಜಾಗೃತಿಗೆ ಸಹಿ ಸಂಗ್ರಹ ಅಭಿಯಾನ
ಸಂಜೆವಾಣಿ ವಾರ್ತೆಹೊಸಪೇಟೆ:ಮಾ,31- ಪ್ರಪಂಚದಲ್ಲಿ ಹೆಚ್ಚು ಯುವ ಸಮೂಹ ಇರುವುದು ನಮ್ಮ ದೇಶದಲ್ಲಿಯೇ ಹೀಗಾಗಿ ಉತ್ತಮ ಸಮಾಜಕ್ಕಾಗಿ ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು, ಎಂದು ವಿದ್ಯಾರ್ಥಿಗಳಿಗೆ ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಣಾಧಿಕಾರಿ ಬಿ.ಸದಾಶಿವ ಪ್ರಭು ಕಿವಿಮಾತು ಹೇಳಿದರು.ನ್ಯಾಷನಲ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ತಾಲೂಕು ಹಾಗೂ ಜಿಲ್ಲಾಡಳಿತ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್, ನಗರಸಭೆ ಆಶ್ರಯದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಮತದಾರರ ಸಹಿ ಸಂಗ್ರಹಣಾ ಅಭಿಯಾನ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಕಡ್ಡಾಯ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಭಾರತದೇಶವು ಇಡೀ ಪ್ರಪಂಚದಲ್ಲೇ ಅತೀದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಆದರೆ, ಮತದಾನ ಮಾಡುವಲ್ಲಿ ಜನರು ನಿರ್ಲಕ್ಷ್ಯ, ಬೇಜವಾಬ್ದಾರಿ ತೋರುತ್ತಿರುವುದು,  ದೇಶದಲ್ಲಿ ಸಾಕಷ್ಟು ವಿದ್ಯಾವಂತರೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇಂದಿನ ಯುವ ಪೀಳಿಗೆ ಮತದಾನ ದಿಂದದೂರ ಉಳಿಯಬಾರದು. ಪ್ರಜ್ಞಾವಂತರು ಹಾಗೂ ವಿದ್ಯಾವಂತರೇ ಮತದಾನ ದಿನದಂದು ಬೇರೊಂದು ಊರುಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಇದು ಸರಿಯಲ್ಲ. ನಿಮ್ಮಂತ ವಿದ್ಯಾವಂತರೆ ತಪ್ಪು ಮಾಡಿದರೆ ಅನಕ್ಷರಸ್ಥರಿಗೆ ಇನ್ನೇನು ಹೇಳಬೇಕು.ಪ್ರತಿಜ್ಞಾ ವಿಧಿ ಬೋಧನೆ:ನಗರದ ಶ್ರೀಶಂಕರ್ ಆನಂದ್‍ಸಿಂಗ್ ಪ್ರಥಮ ದರ್ಜೆ ಕಾಲೇಜ್ ಹಾಗೂ ವಿಜಯನಗರ ಪದವಿ ಕಾಲೇಜ್‍ನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಕುರಿತು ಯುವ ಮತದಾರರ ಜವಾಬ್ದಾರಿ, ಮತದಾನ ಮಹತ್ವ ವಿಷಯದ ಕುರಿತು ಸ್ವೀಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಇಒ ಮಾತನಾಡಿದರು. ಇದೇ ವೇಳೆ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಈ ಸಂದರ್ಭದಲ್ಲಿ ನ್ಯಾಷನಲ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಅಯ್ಯುಬ್‍ಖಾನ್, ಕಾಲೇಜಿನ ಕಾರ್ಯದರ್ಶಿ ಕಾಕುಬಾಳು ಶ್ರೀನಿವಾಸ ಸೇರಿದಂತೆ ನಗರಸಭೆ ಆಯುಕ್ತ ಚಂದ್ರಪ್ಪ ಹಾಗೂ ಸಿಬ್ಬಂದಿಗಳು, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಇತರರು ಇದ್ದರು.ವೋಟರ್ ಹೆಲ್ಪ್‍ಲೈನ್ ಮೂಲಕ ನೋಂದಾಯಿಸಿವಿಜಯನಗರ ಜಿಲ್ಲೆಯ 6 ತಾಲೂಕಿನ 137 ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಸ್ವೀಪ್ ಕಾರ್ಯಕ್ರಮ ನಡೆಯುತ್ತಿದೆ. ಇನ್ನೂ ಕೆಲ ಗ್ರಾಪಂಗಳ ಮುಂಭಾಗ ಸ್ವೀಪ್ ಬ್ಯಾನರ್ ಅಳವಡಿಸಿಲ್ಲ. ಅಂತಹಗ್ರಾಪಂ ಪಿಡಿಒಗಳಿಗೆ ಕಟ್ಟನಿಟ್ಟಿನಆದೇಶ ನೀಡಲಾಗಿದೆ.ಯುವ ಮತದಾರರ ನೋಂದಣಿ, ಮತದಾನದಜಾಗೃತಿಕಾರ್ಯ ನಿರಂತರಆಗಬೇಕಿದೆ. ಇನ್ನೂ 18 ವರ್ಷ ಆದ ಎಲ್ಲ ಯುವಜನತೆ ಮೊಬೈಲ್‍ನಲ್ಲೇ ವೋಟರ್‍ಐಡಿ ಪಡೆಯಲು ಅವಕಾಶ ಇದೆ. ಪ್ಲೇಸ್ಟೋರ್‍ನಲ್ಲಿ “ವೋಟರ್ ಹೆಲ್ಪ್‍ಲೈನ್” ಎಂಬ ಆ್ಯಪ್‍ಡೌನ್‍ಲೋಡ್ ಮಾಡಿಕೊಂಡು ಅದರಲ್ಲಿ ಅಗತ್ಯದಾಖಲೆ ಸಲ್ಲಿಸಿ ಪೂರಕ ಮಾಹಿತಿ ನೀಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ಕೈಗೆ ವೋಟರ್‍ಐಡಿ ಸಿಗುವುದು ಎಂದು ಸಿಇಒ ಮಾಹಿತಿ ನೀಡಿದರು.ಯಾವುದೇ ಪಕ್ಷದ ಮುಖಂಡರು ಆಸೆ-ಆಮೀಷ ತೋರಿದರೆ ಅದಕ್ಕೆ ಯಾರೂ ಬಲಿಯಾಗದೇ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು. ಮತದಾರರೇ ಭ್ರಷ್ಟರಾದರೆ ಉತ್ತಮ ಪ್ರಜಾಪ್ರಭುತ್ವ ಹಾಗೂ ಭ್ರಷ್ಟರಹಿತ ಸರ್ಕಾರಗಳನ್ನು ನಿರೀಕ್ಷಿಸುವುದು ಅಸಾಧ್ಯ. ಹೀಗಾಗಿ ಎಲ್ಲಯುವ ಸಮೂಹವು ಭ್ರಷ್ಟಚಾರ ಮುಕ್ತವಾಗಿ ಚುನಾವಣೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ಹಬ್ಬವನ್ನು ಆಚರಿಸಿ ಯಶಸ್ವಿಗೊಳಿಸಬೇಕು.ಬಿ.ಸದಾಶಿವ ಪ್ರಭು,ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಿಲ್ಲಾ ಪಂಚಾಯಿತಿ, ವಿಜಯನಗರ31ಎಚ್‍ಪಿಟಿ3
