ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕಲಾವಿದೆ  ಜೋಗತಿ( ಗುರು ) ಗೌರಿ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮಾ.31 ಪಟ್ಟಣದ ಹಳೆ ಊರಿನ ಜಗಜ್ಯೋತಿ ನಗರದ ಮನೆಯಲ್ಲಿ ಜೋಗತಿ ಕಲಾವಿದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಸಂಜೆ  ನಡೆದಿದೆ
 ಮೃತ ಜೋಗತಿ ಗೌರಿ ಅಲಿಯಾಸ್ ಗುರು ರಾಜ್ ( 33) ತಂದೆ ಕರಿಯಪ್ಪ ಜಗಜ್ಯೋತಿ ನಗರದ ನಿವಾಸಿಯಾಗಿದ್ದು. ಯಾರು ಇಲ್ಲದ ಸಮಯದಲ್ಲಿ ಜೀವನದಲ್ಲಿ ಜಿಗಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಜೋಗತಿ ಗೌರಿ ಕಲಾವಿದೆಯಾಗಿದ್ದು. ಕುಡಿತದ ಅಭ್ಯಾಸ ಮಾಡಿಕೊಂಡಿದ್ದಳು ಎಂದು ಪಿ ಎಸ್ ಐ ಬಸವರಾಜ್ ಅಡವಿಬಾವಿ ತಿಳಿಸಿದ್ದಾರೆ . ಈ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ