ರವಿ ಬೋಸರಾಜು ನೇತೃತ್ವದಲ್ಲಿ ಕುಮಾರ್ ನಾಯಕರಿಗೆ ಅದ್ದೂರಿ ಸ್ವಾಗತ
ರಾಯಚೂರು,ಮಾ.೩೧- ರಾಯಚೂರು ಲೋಕಸಭೆ ಕ್ಷೇತ್ರದ ರಾಯಚೂರು ನಗರ ವಿಧಾನಸಭೆ ಕ್ಷೇತ್ರದ ಪ್ರಮೂಖ ಕಾರ್ಯಕರ್ತರ ಸಮಾವೇಶ ಹಾಗೂ ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ್ ಅವರನ್ನು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ನೇತೃತ್ವದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಗಂಜ್ ವೃತ್ತದಿಂದ ಪ್ರಾರಂಭವಾದ ಜನಸಂಕಲ್ಪ ಯಾತ್ರೆ, ಅಂಬೇಡ್ಕರ್ ವೃತ್ತ, ವಾಲ್ಮಕಿ ವೃತ್ತ, ಬಸವೇಶ್ವರ ವೃತ್ತಬಸೇರಿ ನಗರದ ಪ್ರಮೂಖ ರಸ್ತೆಗಳಿಗೆ ಸಂಚರಿಸಿ ಬಸವೇಶ್ವರ ಪುತ್ಥಳಿಗೆ, ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿಗೆ, ವಾಲ್ಮಿಕಿ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾಹಾನ್ ನಾಯಕರ ಆಶೀರ್ವಾದ ಪಡೆದು ನಂತರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಾಯಿತು.
ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತಿನಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ. ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಜಿ.ಕುಮಾರ ನಾಯಕರಿಗೆ ಬೆಂಬಲಿಸುವಂತೆ ನಗರದ ಪ್ರಮೂಖ ರಸ್ತೆಗಳಲ್ಲಿ ಜನಸಂಕಲ್ಪ ಯಾತ್ರೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಮೊಹ್ಮದ್ ಶಾಲಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ರೆಡ್ಡಿ, ಕುರಬದೊಡ್ಡಿ ಆಂಜನೇಯ್ಯ, ಜಯಣ್ಣ, ಕೆ.ಶಾಂತಪ್ಪ, ಬಶೀರುದ್ದೀನ್, ಅರುಣ ದೋತರಬಂಡಿ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ, ಬಿ.ರಮೇಶ್, ಅಫ್ಜಲ್, ವಾಹೀದ್, ಸಮೀರ್ ಸೇರಿದಂತೆ ಅನೇಕರು ಇದ್ದರು.