ಬಸಾಪಟ್ಟಣ : ಶರಣಬಸವೇಶ್ವರರ ರಥೋತ್ಸವ
ಸಂಜೆವಾಣಿ ವಾರ್ತೆ
ಗಂಗಾವತಿ ಮಾ 31 : ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ಶ್ರೀ ಶರಣ ಬಸವೇಶ್ವರರ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಜರುಗಿತು.
ಶ್ರೀ ಶರಣಬಸವೇಶ್ವರರ 31 ನೇ ವರ್ಷದ ಪುರಾಣ ಮತ್ತು ಜಾತ್ರೆಯ ಅಂಗವಾಗಿ ಬೆಳಿಗ್ಗೆ ಶರಣರ ಮೂರ್ತಿಗೆ ಅಭಿಷೇಕ, ಮಹಾರುದ್ರಾಭಿಷೇಕ, ಕುಂಭ ಕಳಸದೊಂದಿಗೆ ಗಂಗೆ ಸ್ಥಳಕ್ಕೆ ಹೋಗಿ ಬರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮದ್ಯಾಹ್ನ ಅನ್ನಸಂತರ್ಪಣೆ ಜರುಗಿತು. ಸಂಜೆ 5 ಗಂಟೆಗೆ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಮಭಣೆಯಿಂದ ರಥೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಗುರುವಿನ ಮಠ, ಶಿವಮೂರ್ತಿಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷ ಆಂಜನೇಯ ನಾಯಕ, ಮುಖಂಡರಾದ ಬಸವನಗೌಡ, ಮಲ್ಲಪ್ಪ ಬಾಳಿಕಾಯಿ, ವಿರುಪಾಕ್ಷಿಗೌಡ, ಗ್ರಾ.ಪಂ. ಸದಸ್ಯರಾದ, ಮಲ್ಲಯ್ಯಸ್ವಾಮಿ, ಶ್ರೀಕಾಂತ, ಗುರಯ್ಯ, ಶಿವಮೂರ್ತಯ್ಯಸ್ವಾಮಿ, ಪ್ರುರಾಣ ಪ್ರವಚನಕಾರರಾದ ಶಿವಲಿಂಗಯ್ಯ ಶಾಸ್ತ್ರಿಗಳು, ಹನುಮಂತರಾಯ ಗವಾಯಿ, ಮಹ್ಮದ ರಿಜ್ವಾನ್ ಮುದ್ದಾಬಳ್ಳಿ, ಭೀಮಣ್ಣ ಬಿ.ಎನ್ ಹಳ್ಳಿ, ತಿಮ್ಮಣ್ಣ, ಚೆನ್ನಯ್ಯಸ್ವಾಮಿ, ಸೇರಿದಂತೆ ಇತರರು ಇದ್ದರು.