ವಿಧಾನ ಪರಿಷತ್ ಚುನಾವಣೆ ಆಪ್ ಜೊತೆ ಸಿಪಿಎಂ ಸಹ ಬೆಂಬಲ: ಪ್ರತಾಪ್ ರೆಡ್ಡಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಮಾ 31 : ಬರುವ ಜೂನ್ ತಿಂಗಳಲ್ಲಿ ನಡೆಯುವ  ಈಶಾನ್ಯ ಪದವೀಧರರ ಮತ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾನು  ಸ್ಪರ್ಧಿಸುತ್ತಿರುವೆ. ನನಗೆ ಆಮ್ ಆದ್ಮಿ ಪಕ್ಷ ಈಗಾಗಲೇ ಬೆಂಬಲ ಘೋಷಣೆ ಮಾಡಿದೆ. ಈಗ ಸಿಪಿಎಂ ಪಕ್ಷವೂ ಬೆಂಬಲ ನೀಡಿದೆ ಎಂದು ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಅವರಿಂದು ನಗರದಲ್ಲಿನ ತಮ್ಮ ಕಚೇರಿಯಲ್ಲಿಂದು  ಸುದ್ದಿಗೋಷ್ಟಿ ನಡೆಸಿ ಈ ವಿಷಯ ತಿಳಿಸಿದರು. 2018 ರಲ್ಲಿ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದೆ. ಪ್ರಥಮ ಪ್ರಾಶಸ್ತ್ಯ ಮತಗಳು ಹೆಚ್ಚಾಗಿ ಬಂದರೂ ಸಾವಿರಾರು ಸಂಖ್ಯೆಯ ಕುಲಗೆಟ್ಟ ಮತಗಳಿಂದಾಗಿ ನಾನು ಪರಾಭವಗೊಂಡೆನು. ಆದರೂ ನಾನು ಈ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರವಾಗಿ ಪದವೀಧರರ, ಶೈಕ್ಷಣಿಕ ಮತ್ತು ಸಾಮಾಜಿಕ ಸಂಘಟನೆಗಳೊಂದಿಗೆ ನಿಕಟ ಸಂಪರ್ಕಹೊಂದಿರುವೆ.
ಈ ಬಾರಿ ಚುನಾವಣೆಯಲ್ಲಿ  ನನಗೆ ಪ್ರಥಮ ಪ್ರಾಶಸ್ತ್ರದ
ಮತವನ್ನು ನೀಡುವ ಬಯಕೆ ಮತದಾರರದ್ದಾಗಿದೆಂದ ಅವರಿ. ಈ ಕ್ಷೇತ್ರದ ಶೈಕ್ಷಣಿಕ ಮತ್ತು ಔದ್ಯೋಗಿಕ ಸೇವೆಗೆ ಅವಕಾಶ
ಕಲ್ಪಿಸಿಕೊಡಬೇಕೆಂದಿದ್ದಾರೆ.
ಅತಿಥಿ ಶಿಕ್ಷಕರಿಗೆ ನೀಡುವ ವೇತನ ಮತ್ತು ನೌಕರಿಯ ಅಭದ್ರತೆ ಬಗ್ಗೆ ಹೋರಾಟ ನಡೆಸಲಿದೆಂದರು.
ವೆಬ್ ಕ್ಯಾಮ್ ಏಕೆ:
ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆದಾಗ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಮಾತ್ರ ವಿಶೇಷವಾಗಿ ವೆಬ್ ಕ್ಯಾಮ್ ಗಳನ್ನು ಹಾಕಲಾಗಿದೆ. ಇದು ಮೌಖಿಕ ಆದೇಶವಂತೆ ಇದು ಯಾಕೆ, ಬೇರಡೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ವಿಚಾರಣೆಯಾಗಿದೆ:
ಇಡಿ ಅವರು ತಮ್ಮ ಕರ್ತವ್ಯ ಮಾಡಿದ್ದಾರೆ. ಅವರು ಕರೆದಿದ್ದರು ಹೋಗಿ ವಿಚಾರಣೆ ಎದುರಿಸಿ ಬಂದಿರುವೆನೆಂದರು.
ಸುದ್ದಿಗೋಷ್ಟಿಯಲ್ಲಿದ್ದ ಸಿಪಿಎಂ ಪಕ್ಷದ ಮುಖಂಡ ಎಸ್ ವೈ.ಗುರುಶಾಂತ ಅವರು. ಈ ವರೆಗೆ ಕಲ್ಯಾಣ ಕರ್ನಾಟಕ ಭಾಗದಿಂದ ಆಯ್ಕೆಯಾದ ಎಂಎಲ್ ಸಿಗಳು ಏನು ಮಾಡಿದ್ದಾರೆಂಬ ಪ್ರಶ್ನೆ ಸದಾ ಕಾಡುತ್ತಿದೆ. ಸ್ಥಳೀಯರಿಗೆ ಉದ್ಯೋಗಮೊದಲಾದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಪ್ರಯಾಪ್ ರೆಡ್ಡಿ ಸಮರ್ಥರಾಗಿದ್ದಾರೆ.
ತಮ್ಮ ಪಕ್ಷ ಪ್ರತಾಪ್ ರೆಡ್ಡಿ ಅವರ ಈ ಹಿಂದಿನ ಕಾರ್ಯಚಟುವಟಿಕೆಗಳನ್ನು ಗಮನಿಸಿ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ. ಜಂಟಿಯಾಗಿ ಪ್ರಚಾರ ಮಾಡುವುದಷ್ಟೇ ಅಲ್ಲದೆ ಕಾರ್ಮಿಕ ಸಂಘಟನೆಗಳಲ್ಲಿ ಇರುವ ಪದವೀಧರರಿಂದ ಮತ ಕೊಡಿಸುವ ಪ್ರಯತ್ನ ಮಾಡಲಿದೆಂದು ಹೇಳಿದರು.
ಮೋದಿ ಅವರ ಸರ್ಕಾರದ ಹಗರಣಗಳನ್ನು ಬಿಚ್ಚಿಡುವ ಶಕ್ತಿ ಕ್ರೇಜಿವಾಲ ಅವರನ್ನು ಟಾರ್ಗೆಟ್ ಮಾಡಿಯೇ ಬಂಧಿಸಿದೆಂದು ಗುರುಶಾಂತ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಪಕ್ಷದ ಮುಖಂಡ ಜೆ.ಸತ್ಯಬಾಬು, ಚಂದ್ರಕುಮಾರಿ ಇದ್ದರು.