ಉಪನ್ಯಾಸ ಕಾರ್ಯಕ್ರಮ

ಧಾರವಾಡ,ಮಾ.31: ವರ್ಷಗಳ ಆಡಳಿತ ನಡೆಸಿದ ರಾಣಿಚೆನ್ನಭೈರಾದೇವಿ ಅವ್ವರಸೆ' ಎಂದೇ ಖ್ಯಾತಳಾಗಿದ್ದಳು. ಕನ್ನಡ ನಾಡು ಸದಾಕಾಲ ನೆನಪಿಟ್ಟುಕೊಳ್ಳಬಹುದಾದ ವ್ಯಕ್ತಿತ್ವ ಅವಳದಾಗಿತ್ತು.ಅವಳ ಹೆಸರಿನಲ್ಲಿಯೇಅವ್ವರಸಿ’ ಎಂಬ ಊರು ಪ್ರಸಿದ್ಧವಾಗಿದ್ದನ್ನು ಕಾಣುತ್ತೇವೆಎಂದು ಬೆಂಗಳೂರಿನ ಹೆಸರಾಂತ ಸಾಹಿತಿಡಾ.ಗಜಾನನ ಶರ್ಮಾ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಶ್ರೀಮತಿ ಮಹಾಲಿಂಗಮ್ಮ ನಿಂಗಪ್ಪ ಸಾವಳಗಿ ದತ್ತಿ ಅಂಗವಾಗಿ ಆಯೋಜಿಸಿದ್ದ `ಮಹಾನ್ ಮಹಿಳೆ ಕರಿಮೆಣಸಿನ ರಾಣಿಚೆನ್ನಭೈರಾದೇವಿ’ ಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಕ್ರಿ.ಶ. 1550 ರಲ್ಲಿಏಕಾಂಗಿಯಾಗಿದ್ದ ಇವಳು 18ನೇ ವಯಸ್ಸಿಗೆ ಪಟ್ಟಕ್ಕೇರಿದವಳು.ತಾಯಿ ಬೈರಾಂಬಿ ಹಾಗೂ ಇವಳ ಅಕ್ಕ ಚಿನ್ನಾದೇವಿ ಭಟ್ಕಳದಿಂದ ಸಾಂಬಾರ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದರು.ಸಾಂಬಾರ ಪದಾರ್ಥಗಳ ವ್ಯಾಪಾರ ಮಾಡಲು ಪೋರ್ಚುಗೀಸರಅನುಮತಿ ಪಡೆಯಬೇಕಿತ್ತು.ಪೋರ್ಚುಗೀಸರ ಬದ್ಧ ವೈರಿಗಳಾಗಿದ್ದ ಮುಸಲ್ಮಾನರಜೊತೆ ಸಾಮರಸ್ಯ ಸಾಧಿಸಿದ ಇವಳು ಪೋರ್ಚಗೀಸರಅನುಮತಿಇಲ್ಲದೆ ಮುಸಲ್ಮಾನರ ಹಡಗುಗಳಲ್ಲಿ ಸಾಂಬಾರ ಪದಾರ್ಥಗಳನ್ನು ಕಳುಹಿಸಿ ಪೋರ್ಚುಗೀಸರ ವಿರುದ್ಧ ಹೋರಾಟ ಮಾಡಿದವಳು.ಇವಳ ತಾಯಿಚೆನ್ನಭೈರಾದೇವಿಯನ್ನು ಕೇರಳಕ್ಕೆ ಕಳಿಸಿ ಸಮುದ್ರದಲ್ಲಿ ಹೋರಾಡುವಕಲೆಯನ್ನು ಶಸ್ತ್ರಾಸ್ತ್ರಗಳ ಮೂಲಕ ಕಲಿಸಿಕೊಟ್ಟಿದ್ದರು. ಹೀಗಾಗಿ ಚೆನ್ನಭೈರಾದೇವಿ ತಮ್ಮನ್ನುತಾವು ರಕ್ಷಿಸಿಕೊಳ್ಳುವ ಕಲೆಯನ್ನು, ಸಮರ ತಂತ್ರಗಳನ್ನು ಮಹಿಳೆಯರಿಗೆ ಕಲಿಸಿಕೊಟ್ಟಿದ್ದರು.ಆ ಕಾಲಘಟ್ಟದಲ್ಲಿಯುದ್ಧದಲ್ಲಿಗೆದ್ದ ಸೈನಿಕರ ಮತ್ತುಅರಸರಿಂದ ಮಹಿಳೆಯರ ಮೇಲೆ ಆಕ್ರಮಣಗಳು ನಡೆಯುತ್ತಿದ್ದವು.ಇದನ್ನುತಪ್ಪಿಸುವುದಕ್ಕಾಗಿಚೆನ್ನಭೈರಾದೇವಿ ಸಾಕಷ್ಟು ಶ್ರಮವಹಿಸಿದ್ದಳು.ರಾಣಿಚೆನ್ನಭೈರಾದೇವಿ ಅಕ್ಬರ ಹಾಗೂ ಟಿಪ್ಪು ಸುಲ್ತಾನರ ವಿರುದ್ಧ ಹೋರಾಟ ಮಾಡಿದವಳು.
ಸದಾಕಾಲ ಜನರ ಮಧ್ಯದಲ್ಲಿಯೇ ವಾಸಿಸುತ್ತಿದ್ದ ಇವಳು ಅರಮನೆಯಲ್ಲಿ ವಾಸಿಸುತ್ತಿರಲಿಲ್ಲ. ಇವಳು ಮಹಾಮಂಗಳೇಶ್ವರಿ ಎಂಬ ಖ್ಯಾತಿಯನ್ನು ಪಡೆದಿದ್ದಳು.ಸರ್ವಜನಾಂಗದವರಿಗೂತನ್ನರಾಜ್ಯದಲ್ಲಿ ಪ್ರಾಧಾನ್ಯತೆಯನ್ನು ಕೊಟ್ಟಿದ್ದಳು.ಕರಿಮೆಣಸಿನ ಜೊತೆಯಲ್ಲಿ ಬಿಳಿ ಮೆಣಸುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಳು.ಇವಳ ವ್ಯಾಪಾರದಲ್ಲಿ ಬೆಳ್ಳಿಯ ವಿನಿಮಯವಾಗುತ್ತಿತ್ತು.ಅಂತರಂಗದ ಒಳಜಗಳಗಳಿಂದ ಇವಳಿಗೆ ಜಿಗುಪ್ಸೆಯುಂಟಾಯಿತು. ಹಾಗಾಗಿ ಜೈನಧರ್ಮದ ಅನುವೃತಗಳನ್ನು ಪಾಲಿಸುತ್ತಾಇಕ್ಕೇರಿಯ ಸೆರೆಮನೆಯಲ್ಲಿ ಸಲ್ಲೇಖನಾ ವೃತದಿಂದ ಮರಣ ಹೊಂದಿದಳು. ಈ ರೀತಿಯ ನೈಜವಾದಇತಿಹಾಸವನ್ನುಇವತ್ತಿನಜನಾಂಗಕ್ಕೆಕಟ್ಟಿಕೊಡಬೇಕಾದಅಗತ್ಯವಿದೆ. ವಿದೇಶಿ ಪ್ರವಾಸಿಗರು ಬರೆದಕನ್ನಡ ನಾಡಿನ ಪ್ರವಾಸ ಕಥನಗಳು ಎಷ್ಟೋ ಸಂದರ್ಭದಲ್ಲಿ ಸತ್ಯವನ್ನುಕಟ್ಟಿಕೊಡುವಲ್ಲಿ ಸೋತಿವೆ. ಇವಳ ವ್ಯಕ್ತಿತ್ವವನ್ನುಎಲಿಜಾಬೆತ್‍ರಾಣಿಗೆ ಹೋಲಿಸಿ ಅಮೇರಿಕೆಯ ಮಹಿಳೆ ಓರಿಯಾಸ್ಕಿ ಲೇಖನ ಬರೆದದ್ದನ್ನುಕಾಣುತ್ತೇವೆಎಂದರು.
ಮುಖ್ಯಅತಿಥಿಯಾಗಿ ಬೆಂಗಳೂರಿನ ಸೆಲ್ಕೊ ಸೋಲಾರ ಲೈಟ್ ಪ್ರೈ ಲಿಮಿಟೆಡ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಹೆಣ್ಣು ಅಬಲೆಯಲ್ಲ, ಪರಾವಲಂಬಿಯಲ್ಲ. ಸತ್ವ,,ರಜ ಇವುಗಳ ಹಿನ್ನೆಲೆಯಲ್ಲಿತಾಯಿ ಸ್ವಭಾವ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಆ ಹಿನ್ನೆಲೆಯಲ್ಲಿಕಾರುಣ್ಯ, ವಾತ್ಸಲ್ಯಇವೆರಡು ಸ್ವಭಾವಗಳು ತಾಯಿಯಲ್ಲಿಕಾಣುತ್ತೇವೆ. ಇಂತಹ ಸ್ತ್ರೀ ದೈವಾಂಶದ ಶಕ್ತಿಯಾಗಿದ್ದಾರೆಎಂದರು.
ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿ, ಚೆನ್ನಭೈರಾದೇವಿ ಕುರಿತು ಇಂದಿನ ಉಪನ್ಯಾಸಇತಿಹಾಸದತ್ತ ಮುಖಮಾಡುವಂತೆ ಮಾಡಿದೆ. ನೈಜಇತಿಹಾಸವನ್ನುಕಟ್ಟಿಕೊಟ್ಟಿದೆ. ತೆರೆಯ ಮರೆಯಲ್ಲಿಇದ್ದು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಅನೇಕ ಮಹಿಳೆಯರು ಇದ್ದಾರೆ. ಅವರನ್ನುಗುರುತಿಸುವ ಪ್ರಕ್ರಿಯೆ ಸಂಶೋಧಕರಿಂದ ನಡೆಯಬೇಕಿದೆಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಎ.ಐ.ಸಿ.ಆರ್.ಪಿ ಹಿರಿಯ ವಿಜ್ಞಾನಿ ಡಾ.ಸುರೇಖಾ ಸಂಕನಗೌಡರಕಲ್ಲು ಮಣ್ಣುಗಳಿಂದ ವಾತ್ಸವ್ಯದ ಮನೆ ಕಟ್ಟಬಹುದು.ಆದರೆ.ವಾತ್ಸಲ್ಯತುಂಬಿದ ಮನೆ ಕಟ್ಟಬೇಕಾದರೆ ಪ್ರೀತಿ, ಕರುಣೆ, ಸಂತೋಷಗಳು ಅಲ್ಲಿತುಂಬಿರಬೇಕು.ಈ ಹಿನ್ನೆಲೆಯಲ್ಲಿ ಮಹಾಲಿಂಗಮ್ಮ ಸಾವಳಗಿಯವರ ವ್ಯಕ್ತಿತ್ವಇತ್ತು ಎಂಬ ಅಭಿಪ್ರಾಯವ್ಯಕ್ತಪಡಿಸಿದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ರಾಜೇಂದ್ರ ಸಾವಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶತುರಮರಿ, ವೀರಣ್ಣಒಡ್ಡೀನ, ಡಾ.ಮಹೇಶ ಹೊರಕೇರಿ, ಡಾ.ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಈಶ್ವರಚಂದ ಹೊಸಮನಿ, ಶಂಭುಲಿಮಗ ಶಿವಳ್ಳಿ, ನಿಂಗಣ್ಣಕುಂಟಿ, ಶಾಂತವೀರ ಬೆಟಗೇರಿ, ವೀಣಾ ಸಂಕಣಗೌಡರ, ಸಿ.ಎಸ್. ಪಾಟೀಲ, ಪಾರ್ವತಿ ಹಾಲಭಾವಿ, ಅರವಿಂದ ಯಾಳಗಿ, ಎಸ್.ವ್ಹಿ. ಅಯ್ಯನಗೌಡರ, ಶಕುಂತಲಾಅಯ್ಯನಗೌಡರ, ಅರುಣಾ ನಾಡಗೀರ, ಎಸ್.ಕೆ. ಕುಂದರಗಿ, ಮಹಾಂತೇಶ ನರೇಗಲ್, ಮಾರ್ತಾಂಡಪ್ಪಕತ್ತಿ, ಸರೋಜಿನಿ ದೇವಮಾನೆ, ಎಸ್.ಜಿ. ಪಾಟೀಲ ಸೇರಿದಂತೆ ಸಾವಳಗಿ ಕುಟುಂಬದವರು ಉಪಸ್ಥಿತರಿದ್ದರು.