ಓದು ಸಂವಹನ ಕೌಶಲ್ಯ ಸುಧಾರಿಸುವ ಕೆಲಸ ಮಾಡುತ್ತದೆ
ಧಾರವಾಡ,ಮಾ.31: ಓದುಅನ್ನಮಯಕೋಶದಿಂದಆನಂದಮಯಕೋಶವನ್ನು ಹೊಂದುತ್ತದೆ. ಹಿಂದೆ ಪುರಾಣ, ನಾಟಕಗಳ ಮೂಲಕ ಜನರುರಸಾನುಭವವನ್ನು ಹೊಂದುತ್ತಿದ್ದರು.ನಿಜವಾದಓದು ಮನಸ್ಸಿನ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ.ನಿಜ ನೆಲೆಯಓದು ನಮ್ಮಜೀವನದ ಮುಖ್ಯಅಂಶವಾಗಿದೆಎಂದು ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಕನ್ನಡ ವಿಭಾಗದಉಪನ್ಯಾಸಕಿಡಾ.ಶೋಭಾ ನಾಯಕಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ಪ್ರೊ.ಎಸ್.ಎಲ್. ಸಂಗಮ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಮಾಲಿಕ-8ರಲ್ಲಿ `ನಿಜದ ನೆಲೆಯಲ್ಲಿಓದು’ ವಿಷಯಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಜಾಗತೀಕರಣೋತ್ತರದ ಸಂದರ್ಭದಲ್ಲಿ ಯುವಪೀಳಿಗೆ ಓದನ್ನು ಹೇಗೆ ಸ್ವೀಕರಿಸುತ್ತಾರೆಂಬುದು ಒಂದುಜಿಜ್ಞಾಸೆಯಾಗಿದೆ.ಪುಸ್ತಕವನ್ನುಓದುವಅಭ್ಯಾಸವನ್ನೇ ಕಳೆದುಕೊಂಡ ಈ ಸಂದರ್ಭದಲ್ಲಿಓದು ನಿಜದ ನೆಲೆಯಲ್ಲಿ ಆಗಬೇಕು.ಅದು ತನ್ನೊಳಗಿನ ಅರಿವಿನಿಂದಓದಬೇಕು.ಓದುವಿಕೆ ಅನುಭವಗಳನ್ನು ಕಲಿಸುತ್ತದೆ. ಹೊಸ ಜನರನ್ನು ಪರಿಚಯಿಸುತ್ತದೆ. ಕೇವಲ ಕಲಿಕೆಗಾಗಿ ಓದದೆಆಸ್ತಕಿಯಿಂದಜ್ಞಾನಾರ್ಜನೆಗಾಗಿಓದಬೇಕು.
ಕೆಲ ವರ್ಗದಓದುಗರು ಮೇಲ್ವರ್ಗದ ಲೇಖಕರನ್ನು ಒಪ್ಪಿಕೊಳ್ಳದೆ ಇರುವುದು, ಮೇಲ್ವರ್ಗದಓದುಗರು ಕೆಳವರ್ಗದ ಲೇಖಕರನ್ನು ಒಪ್ಪಿಕೊಳ್ಳದೇ ಇರುವುದುಅವರವರ ಲೇಖಕರನ್ನುಅವರವರಜಾತಿಗೆ ಸೀಮಿತಗೊಳಿಸುತ್ತಿರುವುದು ದುರಂತ.ಬರಹಗಾರರು ಸಂಪಾದನೆ ಹೆಸರಿನಲ್ಲಿ ಕೇವಲ ಪುಸ್ತಕ ಪ್ರಕಟಗೊಳಿಸುತ್ತಾರೆ.ಆದರೆಓದುಗನಿಗೆಅದುರುಚಿಸದೇಇದ್ದಾಗಓದುವುದಾದರೂ ಹೇಗೆ?ಓದು ನಿಜಾರ್ಥದ ನೆಲೆಯಲ್ಲಿಓದಬೇಕು.ಕೆಲವು ಸಲ ವಿಮರ್ಶಾ ವಲಯಓದುಗನ ದಿಕ್ಕು ತಪ್ಪಿಸುವ ಸಾಧ್ಯತೆಇದೆ.ಓದು ಕೇವಲ ಹಾಳೆಯ ಮೇಲಿರದೆ ಪರದೆಯ ಮೇಲೆ ಬಂದಿದೆ.ಓದುವಿನಲ್ಲಿಅರಿವುಜಿಜ್ಞಾಸೆ ಅನುಭವಗಳು ಪ್ರಮುಖ ಪಾತ್ರವಹಿಸುತ್ತವೆ. ಪ್ರಕೃತಿಕೂಡಾ ಓದಿನ ಒಂದು ಭಾಗವಾಗಿದೆ.ಭೂಮಿಯೊಳಗೆ ಲಾವಾಗ್ನಿಇರುವಂತೆ ನಮ್ಮೊಳಗೆ ಒಂದುಅನುಭಾವಇದೆ.ಅದೇ ನಿಜದ ನೆಲೆಯಓದುಎಂದುಡಾ.ಶೋಭಾ ನಾಯಕ ಹೇಳಿದರು.
ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತ್ಯಾಗರಾಜ ಮತ್ತುಧಾರವಾಡಕರ್ನಾಟಕ ವಿಶ್ವವಿದ್ಯಾಲಯದಗ್ರಂಥಾಲಯ ವಿಜ್ಞಾನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಸ್.ಎಲ್. ಸಂಗಮ ಉಪಸ್ಥಿತರಿದ್ದು ಮಾತನಾಡಿದರು.ವೇದಿಕೆಯಲ್ಲಿಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಮಹೇಶ ಹೊರಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಶಂಕರ ಕುಂಬಿ ನಿರೂಪಿಸಿದರು.ಡಾ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ.ಶೈಲಜಾಅಮರಶೆಟ್ಟಿ, ಶಿವಾನಂದ ಭಾವಿಕಟ್ಟಿ, ಶ್ರೀನಿವಾಸ ವಾಡಪ್ಪಿ, ಜಯದೇವ ಹಿರೇಮಠ, ಎಸ್.ಸಿ. ಪಾಟೀಲ, ಎಸ್.ಬಿ. ಪಾಟೀಲ, ಸತ್ಯಾ ಸವಣೂರ, ಶಶಿಕಲಾ ಸಂಗಮ, ಇಂದು ಹಿರೇಮಠ, ಡಿ.ಬಿ. ಬಿರಾದಾರ, ಬಂಕಾಪುರ ಸೇರಿದಂತೆ ಮುಂತಾದವರಿದ್ದರು.