ಸರ್ಕಾರದ ನಿಯಮಾವಳಿಗಳ ಪ್ರಕಾರ ಜಯಂತಿ ಆಚರಣೆ
ಚನ್ನಮ್ಮನ ಕಿತ್ತೂರು,ಮಾ.31: ಈ ವ?ರ್À ಲೋಕಸಭೆ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ಸರ್ಕಾರದ ನಿಯಮಾವಳಿಗಳ ಪ್ರಕಾರ ಡಾ ಬಾಬು ಜಗಜೀವನರಾಂ ಅವರ 117ನೇ ಜಯಂತಿ ಹಾಗೂ ಏ. 14 ರಂದು ನಡೆಯುವ ಡಾ ಬಿ. ಆರ್. ಅಂಬೇಡ್ಕರ ಅವರ 133ನೇ ಜಯಂತ್ಯೋತ್ಸವ ಆಚರಿಸಲಾಗುವು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ. ಬಿ. ಯಮನೂರ ಹೇಳಿದರು.
ಪಪಂ ಆವರಣದ ಡಾ ಬಿ. ಆರ್. ಅಂಬೇಡ್ಕರ ಸಭಾ ಭವನದಲ್ಲಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆಯಾ ಇಲಾಖೆ ಅಧಿಕಾರಿಗಳಿಗೆ ಒಂದೊಂದು ಜವಾಬ್ದಾರಿ ನೀಡಲಾಗುವುದು. ಕುಂಭ ಮೇಳ, ಜಗ್ಗಲಗಿ, ಕರಡಿ ಮಜಲು ಸೇರಿದಂತೆ ಇನ್ನೂ ಅನೇಕ ಕಲಾ ತಂಡಗಳನ್ನೊಳಗೊಂಡ ಮೆರವಣಿಗೆ ಹಮ್ಮಿಕೊಂಡು ಉಭಯ ಮಹಾನಾಯಕರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಪೂರ್ವಭಾವಿ ಸಭೆಗೆ ವಿವಿಧ ಇಲಾಖೆಗಳಿಂದ ಅಧಿಕಾರಿಗಳು ಹಾಜರಾಗದ ಹಿನ್ನಲೆಯಲ್ಲಿ ಕೆಲವು ದಲಿತ ಮುಖಂಡರು ಬೇಸರ ವ್ಯಕ್ತ ಪಡಿಸಿ ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ದಲಿತ ಸಮಾಜದ ಅನೇಕರು ಸಾಧನೆ ಮಾಡಿದ್ದಾರೆ ಅಂತವರನ್ನು ಗುರುತಿಸಿ ಸನ್ಮಾನ ಮಾಡಬೇಕು. ಜನೇವರಿ 10ರಂದು ಪಂಜಾಬ್ ಗಡಿ ಭದ್ರತಾ ಪಡೆಯಲ್ಲಿ(ಬಿಎಸ್‍ಎಫ್) ಸೇವೆ ಸಲ್ಲಿಸುವ ಸಮಯದಲ್ಲಿ ಉದಯ.ಪುಂ.ಗಾಳಿ ಮೃತ ಪಟ್ಟಿದ್ದಾರೆ ಅವರ ಕುಟುಂಬದ ಸದಸ್ಯರನ್ನು ಕರೆದು ಗೌರವ ಸಲ್ಲಿಸಬೇಕೆಂದು ದಲಿತ ಮುಖಂಡ ಫಕ್ಕೀರಪ್ಪ ಜಾಗಂಟಿ ಹೇಳಿದರು.
ಈ ವೇಳೆ ಸಂಜು ಲೋಕಾಪೂರ, ರಾಜು ಜಾಂಗಟಿ, ಬಸವರಾಜ ಕೆಳಗಡೆ, ಕಿತ್ತೂರು ಪ.ಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಎಂ.ಕೆ. ಹುಬ್ಬಳ್ಳಿ ಪ.ಪಂ ಮುಖ್ಯಾಧಿಕಾರಿ ರವಿ ಭಾಗಲಕೋಟೆ ಮತ್ತು ಸಿಬ್ಬಂದಿ, ಕಂದಾಯ, ಪೆÇಲೀಸ್, ಲೋಕೋಪಯೋಗಿ, ತಾಲೂಕಾ ಪಂಚಾಯತ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ನಾನಾ ದಲಿತ ಸಂಘಗಳ ಪದಾಧಿಕಾರಿಗಳು ಸರ್ವ ಸದಸ್ಯರು ಸೇರಿದಂತೆ ಪಟ್ಟಣದ ನಾಗರಿಕರು ಇದ್ದರು.