ಪುರಾಣ ಪ್ರವಚನಗಳಿಂದ ಜನ್ಮ ಪಾವನ:ಭೋರಗಿ ಶ್ರೀ
ಯಡ್ರಾಮಿ:ಮಾ.31:ಪುರಾಣ ಪ್ರವಚನಗಳಿಂದ ಜನ್ಮ ಪಾವನವಾಗುವುದು ಎಂದು ಪೂಜ್ಯ ಮಹಾಲಿಂಗಸ್ವಾಮಿಗಳು ಭೀಮಾಶಂಕರ ಮಠ ಭೋರಗಿ ಅವರು ತಾಲ್ಲೂಕಿನ ಅಣಜಗಿ ಗ್ರಾಮದ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪುರಾಣ ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದ್ದಾರೆ.
ಜಾತ್ರೆ ಪುರಾಣ ಕೇವಲ ಸಾಮಾಜಿಕ ಶಾಂತಿ ನೀಡದೇ ಮಾನವ ಜೀವನದ ಮೌಲ್ಯಗಳು ತಿಳಿಸುವ ಕಾರ್ಯ ಈ ಜಾತ್ರೆ ಮತ್ತು ಪುರಾಣಗಳು ಮಾಡುತ್ತವೆ.
ಪ್ರಪಂಚದಲ್ಲಿ ಹುಟ್ಟಿದ ಜೀವಿಗಳು ಕೂಡ ಮೌಲ್ಯಗಳ ಆದಾರದ ಮೇಲೆ ಜೀವನ ಮಾಡುತ್ತವೆ.ಆದರೆ ಮಾನವನು ಮಾತ್ರ ತಮ್ಮ ಜೀವನದ ಮೌಲ್ಯಗಳು ಮರೆತ್ತಿದ್ದಾನೆ.
ನಾಯಿ ತನ್ನ ನಿಯತ್ತನ್ನು ಕಾಪಾಡಿಕೊಂಡಿದೆ ಇರುವೆ ತನ್ನ ಗುರಿಯನ್ನು ಕಾಪಾಡಿಕೊಂಡಿದೆ.ಆದರೆ ಮಾನವನು ಮಾತ್ರ ಗುರಿ ಮತ್ತು ನಿಯತ್ತು ಕಾಪಾಡಿಕೊಳ್ಳಲು ಆಗಲ್ಲ ಎಂದರು.
ಹಿಂತಹ ಕಾರ್ಯಕ್ರಮಗಳಿಂದ ಮಾನವರು ಪುರಾಣ ಪ್ರವಚನಗಳಲ್ಲಿ ಬರುವ ಒಳ್ಳೆಯ ಸಂದೇಶಗಳು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮಾನವರಾಗಿ ಬಾಳಬೇಕು ಎಂದು ನುಡಿದರು.
ಈ ವೇಳೆಯಲ್ಲಿ ಪೂಜ್ಯ ಸತ್ಯಾನಂದ ಮುತ್ಯಾರ ಪೀಠಾಧಿಪತಿಗಳು ಅಣಜಿಗಿ ಸಾನಿಧ್ಯವಹಿಸಿದ್ದರು. ಪುರಾಣ ರತ್ನ ಪೂಜ್ಯ ಮಡಿವಾಳಯ್ಯ ಶಾಸ್ತ್ರೀಗಳು ಗದ್ದುಗೆಮಠ ಜೇರಟಗಿ ಅವರಿಂದ ಮಹಾತ್ಮ ಶ್ರೀ ಪರಮಾನಂದೇಶ್ವರ ಪುರಾಣ ಕಾರ್ಯಕ್ರಮ ಜರುಗಿತ್ತು.
ಏ:8 ರಂದು ಸಾಯಂಕಾಲ 5 ಗಂಟೆಗೆ ಶ್ರೀ ಜಗದ್ಗುರು ರೇವಣಸಿದ್ದೇಶರರಿಗೆ ಗಂಗಾಸ್ಥಾನ ಹಾಗೂ ಪುರಾಣ ಮಂಗಲ ಮತ್ತು ಲಕ್ಷ ದೀಪೆÇೀತ್ಸವ ಸನ್ಮಾನ ಸಮಾರಂಭ.
ಏ 9 ರಂದು ಶ್ರೀ ಜಗದ್ಗುರು ರೇವಣಸಿದ್ಧೇಶ್ವರ (ಯುಗಾದಿ ಪಾಡ್ಯ) ಜಾತ್ರಾಮಹೋತ್ಸವ,ದೇವರ ಹೇಳಿಕೆ ಹಾಗೂ ಪಲ್ಲಕ್ಕಿ ಉತ್ಸವ ಸಕಲವಾದ್ಯಗಳೊಡನೆ ಜರಗುವುದು.