ಆರ್‍ಡೊರ್ ಸಿಡ್ಸ್ ವಿರಾಟ್ ಕಲಂಗಡಿ ಬೆಳೆ, ಬೆಳೆದು ಅಧಿಕ ಲಾಭಗಳಿಸಿ: ಗುರುಸಂಗಮೇಶ
ಹುಮನಾಬಾದ್: ಮಾ.31:ತಾಲ್ಲೂಕಿನ ಸೋನಕೇರಾ ಗ್ರಾಮದ ಹೋರವಲಯದ ಪ್ರಗತಿಪರ ಯುವ ರೈತ ಆನಂದ ಕಾಂಬಳೆ ಅವರ ತೋಟದಲ್ಲಿ ಆರ್‍ಡೊರ್ ಸಿಡ್ಸ್ ಇಂಡಿಯಾ ಪ್ರಾವೇಟ್ ಲಿಮಿಟೆಡ್ ಕಂಪನಿಯಿಂದ, ಅಪಾರ ರೈತ ಸಮೋಹದ ಮದ್ಯೆ ಶನಿವಾರ ಆರ್‍ಡೊರ್ ಸಿಡ್ಸ್ನ, ವಿರಾಟ್ ಕಲಂಗಡಿ ಕ್ಷೇತ್ರೋತ್ಸವ ಕಾರ್ಯಕ್ರಮ ಜರುಗಿತು.
ಆರ್‍ಡೊರ್ ಸಿಡ್ಸ್ ಇಂಡಿಯಾ ಪ್ರಾವೇಟ್ ಲಿಮಿಟೆಡ್ ಕಂಪನಿ ವಿಭಾಗದ ವ್ಯವಸ್ಥಾಪಕ ಗುರುಸಂಗಮೇಶ ಘರಸಂಗಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಆರ್‍ಡೊರ್ ಸಿಡ್ಸ್ ಇಂಡಿಯಾ ಪ್ರಾವೇಟ್ ಲಿಮಿಟೆಡ್ ಕಂಪನಿಯ ವಿರಾಟ್ ಕಲಂಗಡಿ ಬೆಳೆ, ಬೆಳೆದು ಅಧಿಕ ಲಾಭಗಳಿಸಬೇಕು, ಇದರಿಂದ ತಾವು ಸ್ವಾವಲಂಬಿ ಜೀವನ ನಡೆಸಲು ಹೆಚ್ಚಿನ ಅಕುಲವಾಗಲಿದೆ ಎಂದ ಅವರು ಕಡಿಮೆ ಬಂಡವಾಳದಲ್ಲಿ ಆರ್‍ಡೊರ್ ಸಿಡ್ಸ್ ವಿರಾಟ್ ಕಲಂಗಡಿ ಬೆಳೆ, ಬೆಳೆದು ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದರು.
ಬೀದರ್ ಜಿಲ್ಲೆಯಲ್ಲಿ ಸುಮಾರ 1500 ಏಕ್ಕರೆ ಜಮೀನಿನಲ್ಲಿ ವಿವಿಧ ರೈತರು ಆರ್‍ಡೊರ್ ಸಿಡ್ಸ್ ಇಂಡಿಯಾ ಪ್ರಾವೇಟ್ ಲಿಮಿಟೆಡ್ ಕಂಪನಿ ಬೆಳೆಯನ್ನು ಬೆಳೆದು ಇಂದು ಹೆಚ್ಚಿನ ಲಾಭವನ್ನು ಕಂಡಿದ್ದಾರೆ. ಆರ್‍ಡೊರ್ ಸಿಡ್ಸ್ ವಿರಾಟ್ ಕಲಂಗಡಿ ಬೆಳೆಯೂ ಸುಮಾರು 55 ರಿಂದ 60 ದಿನಗಳಲ್ಲಿ ಹಣ್ಣು ಪಕ್ವವಾಗುತ್ತವೆ. ಹಣ್ಣುಗಳು ಸರಾಸರಿ 4 ರಿಂದ 5 ಕಿಲೋ ಗ್ರಾಮ ತೂಕ ಹೊಂದಿದ್ದು ಉದ್ದನೇಯ ಆಕಾರ ಮತ್ತು ಏಕ ಪ್ರಕಾರದ ಕಲಂಗಡಿ ಹಣ್ಣು ಇದೆ. ರೈತರು ಹೆಚ್ಚಾಗಿ ಆರ್‍ಡೊರ್ ಸಿಡ್ಸ್ ವಿರಾಟ್ ಕಲಂಗಡಿ ಬೆಳೆ, ಬೆಳೆದು ಉತ್ತಮ ಲಾಭ ಪಡೆದು ಸ್ವಾವಲಂಬಿ ಬದುಕು ಸಾಗಿಸಬೇಕು, ಎಂದು ಸಲಹೆ ನೀಡಿದರು.
ಆರ್‍ಡೊರ್ ಸಿಡ್ಸ್ ಇಂಡಿಯಾ ಪ್ರಾವೇಟ್ ಲಿಮಿಟೆಡ್ ಕಂಪನಿ ಪವನ ಜಬಾಡೆ, ಪವನ ಪಾಟೀಲ, ಪ್ರಗತಿಪರ ಯುವ ರೈತ ಆನಂದ ಕಾಂಬಳೆ, ಪ್ರಮುಖರಾದ ವಿಶ್ವನಾಥ ಕಾಡಗೊಂಡ, ಮಹಾದೇವ ಪುಜಾರಿ, ಅಭಿಮಾನ ನಿರಗುಡೆ, ವಿನೋದ ಮೇತ್ರೆ, ಸತೀಶ ಸ್ವಾಮಿ, ಗೋವಿಂದ ನಿರಗುಡೆ, ಸೋಮನಾಥ ಧನ್ನೆ, ಸೇರಿದಂತೆ ಅನೇಕ ರೈತರು ಇದ್ದರು.