ಆಣದೂರ ಗ್ರಾಮಕ್ಕೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭೇಟಿ ಸ್ಥಳೀಯರೊಂದಿಗೆ ಸಮಾಲೋಚನೆ
ಬೀದರ್:ಮಾ.31: ಕುಡಿಯುವ ನೀರು ಸರಬರಾಜು ಮಾಡುವ ಓವರ್ ಹೆಡ್ ಟ್ಯಾಂಕ್ ನಲ್ಲಿ ವ್ಯಕ್ತಿಯೊಬ್ಬ ಬಿದ್ದು ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ
ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಶನಿವಾರ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೀದರ್ ತಾಲೂಕಿನ ಆಣದೂರ ಗ್ರಾಮಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ಓವರ್ ಹೆಡ್ ಟ್ಯಾಂಕ್ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಟ್ಯಾಂಕ್ ಪರಿಸರಕ್ಕೆ ಫೆನ್ಸಿಂಗ್ ಅಳವಡಿಸಬೇಕು. ಮೇಲೆ ಟ್ಯಾಂಕ್ ಗೆ ಮುಚ್ಚಳ ಹಾಕಿ, ಬೀಗ ಹಾಕಬೇಕು. ಎಂಟು ದಿನ ಈ ಟ್ಯಾಂಕ್ ಬಳಕೆ ಮಾಡಬಾರದು. ಟ್ಯಾಂಕ್ ಸಂಪೂರ್ಣವಾಗಿ ವೈಜ್ಞಾನಿಕ ರೀತಿಯಲ್ಲಿ ಶುದ್ಧೀಕರಣ (ಜಿumigಚಿಣioಟಿ) ಮಾಡಬೇಕು. ಸಾರ್ವಜನಿಕರಿಗೆ ಈ ಅವಧಿಯಲ್ಲಿ ತಕ್ಷಣದಿಂದಲೇ ಕೆಲ ದಿನಗಳಕಾಲ ಶುದ್ಧ ಕುಡಿಯುವ ನೀರಿನ ಕ್ಯಾನ್ ಮನೆಗೆ ತಲಪಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಕ್ಷಣವೇ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಿಡಿಒ ಅಧಿಕಾರಿಗಳಿಗೆ ಕರೆ ಮಾಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸೂಚನೆ ನೀಡಿದರು.
ಪರ್ಯಾಯ ವ್ಯವಸ್ಥೆಗಾಗಿ ಕೂಡಲೇ ಒಂದು ಬೋರ್ ವೆಲ್ ಕೊರೆಯಿಸುವಂತೆ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಗತ್ಯ ಕ್ರಮಕ್ಕಾಗಿ ಮೇಲಾಧಿಕಾರಿಗಳ ಜೊತೆಗೂ ದೂರವಾಣಿಯಲ್ಲಿ ಮಾತನಾಡಿ ಸೂಚನೆ ನೀಡಿದರು.
ಎರಡು ದಿನದ ಹಿಂದೆ ಈತ ಮೃತಪಟ್ಟ ಕಾರಣ ಮೃತದೇಹ ಡಿ-ಕಂಪೆÇೀಸ್( ಪೂರ್ಣ ಕೊಳೆತು ಒಡೆದಿಲ್ಲ) ಆಗಿಲ್ಲ. ನಲ್ಲಿಗೆ ಬರುವ ನೀರು ವಾಸನೆಯಾದ ಬಗ್ಗೆ ಗ್ರಾಮಸ್ಥರು ಗಮನಕ್ಕೆ ಬರುತ್ತಲೇ ಗ್ರಾಪಂನವರಿಗೆ ತಿಳಿಸಿದ ಕಾರಣ ಬೇಗ ವಿಷಯ ಗೊತ್ತಾಗಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಮೃತದೇಹ ಡಿ-ಕಂಪೆÇೀಸ್ ಆಗದಿದ್ದರಿಂದ ನೀರು ಬಳಸಿದ ಜನರು ಸಹ ಭಯಪಡುವ ಅಗತ್ಯವಿಲ್ಲ. ಸದ್ಯ ಯಾರಲ್ಲಿಯೂ ಆರೋಗ್ಯ ಸಮಸ್ಯೆ ಕಾಣದಿರುವುದು ಸಮಾಧಾನಕರ ಸಂಗತಿ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ವೈದ್ಯರು ಸೇರಿ ಆರೋಗ್ಯ ಸಿಬ್ಬಂದಿಗೆ ಎರಡು ಸ್ಥಳದಲ್ಲಿ ನಿಯೋಜಿಸಲಾಗಿದೆ. ಗ್ರಾಪಂನಲ್ಲಿ ತಾತ್ಕಾಲಿಕ ಶಿಬಿರ, ಆಸ್ಪತ್ರೆಯಲ್ಲಿ ಹಾಕಿದ್ದು, ಇನ್ನೊಂದು ವಾರ ಈ ಟೀಮ್ ಇಲ್ಲೇ ಉಳಿದು ಜನರ ಆರೋಗ್ಯದ ಮೇಲೆ ತೀವ್ರ ನಿಗಾ ಇಡುವಂತೆ ಹಾಗೂ ಎಲ್ಲ ತರಹದ ಔಷಧಿಗಳ ಸ್ಟಾಕ್ ಇಟ್ಟುಕೊಳ್ಳಬೇಕು ಶಾಸಕರು ವೈದ್ಯರಿಗೆ ಸೂಚಿಸಿದರು.
ಟ್ಯಾಂಕ್ ನಲ್ಲಿ ವ್ಯಕ್ತಿ ಸಾವನ್ನಪ್ಪಿದ ವಿಷಯ ಎರಡು ದಿನಗಳ ಬಳಿಕ ಸಾರ್ವಜನಿಕರಿಗೆ ಗೊತ್ತಾಗಿದೆ. ಹೀಗಾಗಿ ಎರಡು ದಿನ ಸ್ಥಳೀಯ ಎರಡ್ಮೂರು ಬಡಾವಣೆಗಳ ಸುಮಾರು 200 ಮನೆಗಳಿಗೆ ಈ ನೀರು ಸರಬರಾಜಾಗಿದೆ. ಈ ಘಟನೆ ಬೆಳಕಿಗೆ ಬಂದ ನಂತರ ತಮ್ಮ ಆರೋಗ್ಯದಲ್ಲಿ ಏರುಪೇರಾಗಲಿದೆ ಎಂಬ ಆತಂಕ ಗ್ರಾಮಸ್ಥರಲ್ಲಿ ಮೂಡಿದ್ದು ಸಹಜ. ಆದರೆ ಬಾಡಿ ಡಿ ಕಂಪೆÇೀಸ್ ಆಗದಿದ್ದರಿಂದ ಅಪಾಯ ಏನೂ ಇಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಹೀಗಾಗಿ ಯಾರೂ ಭಯಪಡುವ ಅಗತ್ಯವಿಲ್ಲ. ನಿಮಗೆ ಏನೇ ಆರೋಗ್ಯ ಸಮಸ್ಯೆ ಆದರೆ ಅದಕ್ಕೆ ಸರ್ಕಾರದಿಂದ ಸೂಕ್ತವಾದ ಚಿಕಿತ್ಸೆ ಕೊಡಿಸಲಾಗುವುದು. ವಿನಾಕಾರಣ ಯಾರೂ ಭಯಭೀತರಾಗದೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರಾಳ ತೊಡಗಲು ಮನವಿ ಮಾಡಿದರು.
ವೈದ್ಯರು ಪ್ರತಿಯೊಂದು ಮನೆಗೆ ಹೋಗಿ ಜನರಲ್ಲಿ ಧೈರ್ಯ ತುಂಬಬೇಕು. ಯಾರಿಗೂ ಯಾವುದೇ ಆರೋಗ್ಯ ಸಮಸ್ಯೆ ಆಗುವುದಿಲ್ಲ ಎಂದು ಹೇಳಿ ಅವರಲ್ಲಿ ಜಾಗೃತಿ ಮೂಡಿಸಬೇಕು. ಗ್ರಾಮದ ಪ್ರಮುಖರು ಸಹ ಈ ಬಗ್ಗೆ ಜನರಲ್ಲಿ ಜಾಗೃತಿ ಹಾಗೂ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಗ್ರಾಮದ ಜನರೆಲ್ಲರೂ ಒಂದಾಗಿ ಸಮಾಜದ ಹಿತದ ವಿರುದ್ಧವಿರುವರ ಮೇಲೆ ಕ್ರಮಕ್ಕೆ ಹೋರಾಡಬೇಕು. ಯಾರು ಸಹ ಯಾರಿಂದಲೂ ಕಿರಿಕಿರಿ ಅನುಭವಿಸಬಾರದು ಎಲ್ಲರೂ ಒಂದಾಗಿ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಮಾದಪ್ಪ, ಉಪಾಧ್ಯಕ್ಷೆ ಶ್ರೀದೇವಿ ಅಂಬಾದಾಸ,ಪಿಡಿಒ ಮಲ್ಲಿಕಾರ್ಜುನ ಡೋಣೆ, ವೈದ್ಯರಾದ ಡಾ.ಬಸವಪ್ರಸಾದ, ಪ್ರಮುಖರಾದ ಶ್ರೀನಿವಾಸರೆಡ್ಡಿ, ಸುರೇಶ ಮಾಶೆಟ್ಟಿ, ಬಸವರಾಜ ಸಿಂದಬಂದಗಿ, ಬಸವರಾಜ ಪಾಟೋದಿ, ಸಂತೋಷ ರೆಡ್ಡಿ, ಸಂತೋಷ ಸೋರಳ್ಳಿ, ಭೀಮಣ್ಣ ಸೋರಳ್ಳಿ, ರಾಜು ಪೆÇೀಳ, ಶಿವಶಂಕರ ಫುಲೆ, ಸಾಯಿಕುಮಾರ, ಮೋಯಿಜ್, ಕಿಶೋರ್, ಚಂದ್ರಾರೆಡ್ಡಿ, ಸಾಯಿನಾಥ, ಆಕಾಶರೆಡ್ಡಿ, ಈಶ್ವರ ಸಿಕೆನಪುರ, ಶಾದ್ರಕ್, ಗೋಪಾಲ, ಚೆನ್ನಪ್ಪ, ಪ್ರವೀಣ ಪಟೋದಿ
ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.