ಬಸವಲಿಂಗ ಅವಧೂತರ ಜಾತ್ರೆ 2 ರಂದು
ಬೀದರ್:ಮಾ.31: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ದೇಗಲಮಡಿಯ ಬಸವಲಿಂಗ ಅವಧೂತ ಆಶ್ರಮದಲ್ಲಿ ಏಪ್ರಿಲ್ 2 ಮತ್ತು 3 ರಂದು ಡಾ. ಬಸವಲಿಂಗ ಅವಧೂತರ 12ನೇ ಜಾತ್ರಾ ಮಹೋತ್ಸವ ಹಾಗೂ ಜಗನ್ಮಾತೆ ಅಕ್ಕಮಹಾದೇವಿ ತೊಟ್ಟಿಲು ಕಾರ್ಯಕ್ರಮ ನಡೆಯಲಿದೆ.
ಏ. 2 ರಂದು ಸಂಜೆ 5.30ಕ್ಕೆ ಹಾರಕೂಡದ ಚನ್ನವೀರ ಶಿವಾಚಾರ್ಯರು ಜಾತ್ರೆಗೆ ಚಾಲನೆ ನೀಡುವರು. ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ದಿವ್ಯ ಸಾನಿಧ್ಯ ವಹಿಸುವರು. ಶಾಸಕ ಡಾ. ಅವಿನಾಶ ಜಾಧವ್, ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಮುಖ್ಯ ಅತಿಥಿ, ಮುಖಂಡ ಲಕ್ಷ್ಮಣ ಅವಟೆ ಹಾಗೂ ವಕೀಲರ ಸಂಘದ ಚಿಂಚೋಳಿ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಏ. 3 ರಂದು ಸಂಜೆ 5.30ಕ್ಕೆ ನಡೆಯುವ ಸಮಾರಂಭದ ಸಾನಿಧ್ಯವನ್ನು ಮಲ್ಲಯ್ಯಗಿರಿ ಹಾಗೂ ದೇಗಲಮಗಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ವಹಿಸುವರು. ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಡಾ. ಹವಾ ಮಲ್ಲಿನಾಥ ಮಹಾರಾಜ, ಖೇಳಗಿ ಮಠದ ಶಿವಲಿಂಗ ಸ್ವಾಮೀಜಿ, ಯರನಾಳದ ಶಿವಪ್ರಸಾದ ದೇವರು, ಸಿಂಧನಕೇರಾದ ಹೊನ್ನಲಿಂಗ ಸ್ವಾಮೀಜಿ ದಿವ್ಯ ನೇತೃತ್ವ ವಹಿಸುವರು.
ದೇಗಲಮಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧುಮತಿ ಮಾರುತಿ ಘಾಳನೋರ ಹಾಗೂ ಚಿಂಚೋಳಿ ಡಿವೈಎಸ್‍ಪಿ ಸಂಗಮನಾಥ ಎಸ್. ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ರಾತ್ರಿ 8.30ಕ್ಕೆ ವೀರಭದ್ರೇಶ್ವರ ದೇವಸ್ಥಾನದಿಂದ ಬಸವಲಿಂಗ ಅವಧೂತ ಆಶ್ರಮದ ವರೆಗೆ ಕುಂಭ ಕಳಸದೊಂದಿಗೆ ಡಾ. ಬಸವಲಿಂಗ ಅವಧೂತರು ಹಾಗೂ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಭವ್ಯ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ. ಆಶ್ರಮದಲ್ಲಿ ಈಗಾಗಲೇ ಆರಂಭವಾಗಿರುವ ಸಪ್ತಾಹ ಭಜನೆ ಏ. 2ಕ್ಕೆ ಮುಕ್ತಾಯಗೊಳ್ಳಲಿದೆ.
ಜಾತ್ರಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಸವಲಿಂಗ ಅವಧೂತ ಆಶ್ರಮದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.