ಮತದಾನದಿಂದ ಯಾರು ಹೊರಗುಳಿಯಬಾರದು:ಅರವಿಂದ ಚವ್ಹಾಣ
ಕಲಬುರಗಿ:ಮಾ.31: ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅರವಿಂದ ಚವ್ಹಾಣ ಹೇಳಿದರು.
ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ 2024 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭೆ ಚುನಾವಣೆ ನಿಮಿತ್ತ ಹಮ್ಮಿಕೊಂಡಿರುವ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಮತದಾನ ನಮ್ಮ ಹಕ್ಕಾಗಿದ್ದು, ಮತದಾರ ಮತದಾನದಿಂದ ಹೊರಗುಳಿಯದೆ ಸಂವಿಧಾನ ತನಗೆ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಅವರು ತಿಳಿಸಿದರು.
ರಂಗೋಲಿ, ಮೆಹಂದಿ ಚಿತ್ರಗಳನ್ನು ಬಿಡಿಸಿ ಸ್ವೀಪ್ ಕಾರ್ಯಕ್ರಮದಕಡೆಗೆ ಸಾರ್ವಜನಿಕರ ಹೆಚ್ಚು ಗಮನ ಸೆಳೆಯಲಾಯಿತು.
ಇದಕ್ಕು ಮೊದಲು ಗ್ರಾಮದ ಬೀದಿಯಲ್ಲಿ ಜಾಥಾ ಹಮ್ಮಿಕೊಂಡು ಕೊನೆಗೆ ಗ್ರಾಮ ಪಂಚಾಯತಿ ಎದುರುಗಡೆ ಪ್ರತಿಜ್ಞೆ ವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಸಿಬ್ಬಂದಿಗಳು, ಎನ್ ಆರ್.ಎಲ್ ತಾಲೂಕ ಸಂಯೋಜಕರು,ಗ್ರಾಮ ಕಾಯಕ ಮಿತ್ರ, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಕೂಸಿನ ಮನೆ ಆರೈಕೆದಾರರು ಹಿರಿಯರು ಹಾಗೂ ಯುವಕರು ಭಾಗವಹಿಸಿದ್ದರು.