ಮಾತೃಧರ್ಮ ಪಾಲನೆ ಜೊತೆಗೆ ಪರಧರ್ಮ ಸಂಹಿಷ್ಣತೆಗೆ ಗೌರವಿಸಿ
ಬೀದರ್:ಮಾ.31: ಮಾತೃಧರ್ಮ ಅನುಪಾಲನೆ ಮಾಡಬೇಕು. ಪರಧರ್ಮವನ್ನು ಸಹಿಷ್ಣುತೆಯಿಂದ ಗೌರವಿಸಬೇಕೆಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ತಿಳಿಸಿದರು.
ನಗರದ ದರ್ಜಿಗಲ್ಲಿಯಲ್ಲಿರುವ ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ ಅವರ ಗೃಹದಲ್ಲಿ ಇಸ್ಲಾಂ ಬಾಂಧವರಿಗೆ ಹಮ್ಮಿಕೊಂಡ ಇಫ್ತೆಹಾರ್ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಚನ್ನಬಸವೇಶ್ವರ ಜ್ಞಾನಪೀಠ ಬೆಂಗಳೂರಿನ ಪೀಠಾಧ್ಯಕ್ಷ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ದೇವನೊಬ್ಬನೆ ತಂದೆ ಮನುಜರೆಲ್ಲರೂ ಒಂದೆ ಎಂದು ಸೌಹಾರ್ದತೆಯಿಂದ ಬದುಕುವ ಜಾತ್ಯಾತೀತ ರಾಷ್ಟ್ರ ನಮ್ಮದು. ಹೀಗಾಗಿ ಪವಿತ್ರ ರಮಜಾನ್ ಹಬ್ಬದ ಪ್ರಯುಕ್ತ ರೋಜಾ ಅನುಸರಿಸುತ್ತಿರುವ ಇಸ್ಲಾಂ ಬಂಧುಗಳಿಗೆ ರಮಜಾನ ಹಬ್ಬದ ಶುಭಾಶಯಗಳನ್ನು ಕೋರಿದರು. ನೇತೃತ್ವವನ್ನು ಬಸವ ಮಂಟಪದ ಮಾತೆ ಸತ್ಯಾದೇವಿ ವಹಿಸಿದ್ದರು.
ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಮಾತನಾಡಿದರು. ಸೂಫಿ ಸೈಯದ್ ಶಾ ಮಹಮ್ಮದ್ ಗೌಸ್ ಖಾದ್ರಿ ಅಶರಫಿ
ಸಂಸ್ಥಾಪಕರು ಖಾದ್ರಿ ವೇಲ್ಫಿ ಸೊಸೈಟಿ ಕರ್ನಾಟಕ ಇವರನ್ನು ಸನ್ಮಾನಿಸಲಾಯಿತು.
ಶಿವಶರಣಪ್ಪ ಪಾಟೀಲ ಹಾರೂರಗೇರಿ ಸ್ವಾಗತಿಸಿದರು. ಸಿದ್ಧವೀರ ಸಂಗಮದ ನಿರೂಪಿಸಿದರು. ಸತೀಶ ಪಾಟೀಲ ಹಾರೂರಗೇರಿ ವಂದಿಸಿದರು. ಇದೇ ವೇಳೆ ಪ್ರಮುಖರಾದ ಮಹ್ಮದ್ ರಶೀದ, ಡಾ. ರಾಜಶ್ರೀ, ಗಣಪತಿ ಬಿರಾದಾರ, ಬಸವಂತರಾವ ಬಿರಾದಾರ, ಸಂಜೀವಕುಮಾರ ಬುಕ್ಕಾ, ಪ್ರಭು ಪಾಟೀಲ, ಮಹಾರುದ್ರ ಡಾಕುಳಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.