ಮಹಿಳೆಯರಲ್ಲಿ ಹೂಡಿಕೆ ಮಾಡಿ, ಪ್ರಗತಿಯಲ್ಲಿ ವೇಗಗೊಳಿಸಿ: ಪೂರ್ಣಿಮಾ ಜಾರ್ಜ್
ಬೀದರ್:ಮಾ.31: ಮಹಿಳೆಯರಲ್ಲಿ ಹೂಡಿಕೆ ಮಾಡುವ ಮೂಲಕ ಶಿಕ್ಷಣ, ಉದ್ಯೋಗ, ಆರೋಗ್ಯ, ಮತ್ತು ನಾಯಕತ್ವ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಲಿಂಗ ಸಮಾನತೆಯನ್ನು ವೇಗಗೊಳಿಸಬಹುದು ‘ ಎಂದು ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ ಪೂರ್ಣಿಮಾ ಜಿ
ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿಯ ಆಯ್ ಎಂ ಎ ಹಾಲ್ ನಲ್ಲಿ ರೋಟರಿ ಕ್ಲಬ್ ಬೀದರ್ ನವರು ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ ಅದೊಂದು ಕಾಲದಲ್ಲಿ ಹೆಣ್ಣು, ಹೊನ್ನು,ಮಣ್ಣು ಮಾಯೆಯೆಂದು ಪರಿಗಣಿಸಿ ಅವಳನ್ನು ನಾಲ್ಕು ಗೋಡೆಗಳ ಮಥ್ಯೆ ಬಂದಿಯಾಗಿಸಿದರು. ಅವಳಿಗೆ ವಿರಕ್ತ ಅಥವಾ ನಿವೃತ್ತಿ ಮಾಗ9 ಕುರಿತು ಚಿಂತಿಸಲು ಅವಕಾಶವೇ ಇರಲಿಲ್ಲ. ಇವತ್ತಿನ ಮುಂದುವರಿದ ಜಗತ್ತಿನಲ್ಲಿ ಹೆಣ್ಣು ಮಗಳು ನಾಲ್ಕು ಗೋಡೆ ಗಳನ್ನೂ ದಾಟಿ ಹೊರಬಂದಿದಾಳೆ,ಮೊದಲಿನ ಹಾಗೆ ತನ್ನಲ್ಲಿರುವ ಸಾಮಥ್ರ್ಯವನ್ನು ತೋರಿಸಿಸಲು ಹಿಂಜರಿಯುತಿಲ್ಲ’ ಎಂದು ತಿಳಿಸಿದರು.
‘ ಬದುಕಿನ ವಿವಿಧ ರಂಗಗಳಲ್ಲಿ ತಾನು ಮುಂದುವರಿದು, ಗಂಡಸಿಗೆ ಸಮನಾಗಿ ಹೆಗಲಿಗೆ -ಹೆಗಲು ಕೊಟ್ಟು ದುಡಿದು ತನ್ನ ಅಸ್ಥಿತ್ವವನ್ನು ತೋರಿಸಿಕೊಂಡಿದಾಳೆ. ಕೆಲವೊಂದು ಸಲ ಈ ಸಂಸಾರದೋಳಗೆ ಹೆಣ್ಣು ಮಗಳು ಅಬಲೆಯಾದಾಗ ಸಬಲೆಯರಂತೆ ಈ ಸಮಾಜದೊಳಗ ದಿಟ್ಟ ನಿಲುವಿನಿಂದ ಸರಿಯಾದ ಹೆಜ್ಜೆಗಳನ್ನ ಇಟ್ಟು ತಮ್ಮನೆ ತಾವು ಗುರುತಿಸಿ ಕೊಂಡವರು ಅನೇಕರು,ಈ ವೇದಿಕೆಯಲ್ಲಿ ಉಪಸ್ಥಿತರಿದ್ದಾರೆ ಎಂದು ನುಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಶಾರದಾ ಮಾಳಗೆ ಪೆÇೀಲಿಸ್ ಇಲಾಖೆಯ ಆರಕ್ಷಕ ಉಪ ನಿರಿಕ್ಷಕರಾದ ಶ್ರೀಮತಿ ಶೀಲಾದೇವಿ ಎಸ್ ಎನ್ ಸಮಾಜ ಸೇವಕರಾದ ಕುಮಾರಿ ಕವಿತಾ ಹುಷಾರೆ ಡಿಸಿಸಿ ಬ್ಯಾಂಕ್ ನ ಎಜಿಮ್ ಗಳಾದ ಉಮಾದೇವಿ ಚಿಲ್ಲರ್ಗಿ ಭಾಗವಹಿಸಿ ಮಾತನಾಡಿದರು
ಇದೆ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹೀಳೆಯರಾದ ಉದ್ಯಮ ಕ್ಷೇತ್ರದ ಶ್ರೀಮತಿ ವಿಜಯಲಕ್ಷ್ಮಿ ಚೊಂಡೆ , ಶ್ರೀಮತಿ ಸಾಯಿಪ್ರಿಯಾ ಚಿದ್ರಿ , ನಾಗವೇಣಿ ಕೊಳಾರ ಸಂಗೀತ ಕ್ಷೇತ್ರದ ಶ್ರೀಮತಿ ಭಾನುಪ್ರಿಯ ಅರಳಿ , ನೃತ್ಯ ಕ್ಷೇತ್ರದ ಶ್ರೀಮತಿ ಉಷಾ ಪ್ತಭಾಕರ ನೀಲಗಿರಿ ಉದ್ಯೋಗ ಸಂಸ್ಥೆಯ ಶ್ರೀಮತಿ ಆಶಾರಾಣಿ ಸಾಗರ ಅಂಚೆ ಪೆದೆ ಶ್ರೀಮತಿ ಶ್ವೇತಾ ಗೌಡ , ಕೆಕೆಆರ್ಟಿಸಿಯ ನಿರ್ವಾಹಕಿ ಶ್ರೀಮತಿ ವಿಮಲಾ ದುರ್ಗೆ ಶುಶ್ರೂಷಕಿ ಶ್ರೀಮತಿ ಕಪಿಲಾ ಮಡಿವಾಳ ಅವರಿಗೆ ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಕಾಂತ ಕಾಡಾದಿ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ನ ಮಾಜಿ ಅಧ್ಯಕ್ಷ ರವಿ ಮೂಲಗೆ ಪ್ರಾಸ್ತಾವಿಕ ಮಾತನಾಡಿದರು. ಕ್ಲಬ್ ನ ಕಾರ್ಯದರ್ಶಿ ಸೋಮಶೇಖರ ಪಾಟೀಲ ಸ್ವಾಗತಿಸಿದರು. ಸುರೇಶ ಚನಶೆಟ್ಟಿ ನಿರೂಪಿಸಿದರು. ಅನೀಲ ಮಸೂದಿ ವಂದಿಸಿದರು.