ದೇವಸ್ಥಾನಗಳು ಸಂಸ್ಕಾರ ನೀಡುವ ಕೇಂದ್ರಗಳಾಗಲಿ:ಕಡಗಂಚಿಯ ವೀರಭದ್ರ ಶಿವಾಚಾರ್ಯರು
ಕಲಬುರಗಿ:ಮಾ.31:ಭಾರತೀಯ ಸಂಸ್ಕøತಿಯಲ್ಲಿ ಧರ್ಮಕ್ಕೆ ಬಹಳಷ್ಟು ಮಹತ್ವವಿದೆ, ಬೆಳೆಯುತ್ತಿರುವ ಜನ ಸಮುದಾಯಕ್ಕೆ ಜಾಗ್ರತಿ ಮೂಡಿಸುವ ಜವಾಬ್ದಾರಿ ದೇವಸ್ಥಾನಗಳು ಹಾಗೂ ಮಠಗಳಮೇಲೆ ಇದೆ ಎಂದು ಕಡಗಂಚಿಯ ವೀರಭದ್ರಶಿವಾಚಾರ್ಯರು ನುಡಿದರು.
ಅವರು ಜೆ.ಆರ್. ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪ್ರಾಂಗಣದಲ್ಲಿ ಮಹಾಂತೇಶ್ವರ ಪುರಾಣ ಕಾರ್ಯಕ್ರವನ್ನು ಉದ್ಘಾಟಿಸಿ ಆಶೀರ್ವಚನದಲ್ಲಿ ಪುರಾಣ ಪುಣ್ಯ ಕತೆಗಳು ಕೇಳುವುದರಿಂದ ಆಧ್ಯಾತ್ಮದಲ್ಲಿ ಅದ್ಭುತ ಶಕ್ತಿ ಬೆಳೆಯುತ್ತದೆ. ಬದುಕು ಬದಲಾಗಬೇಕಾದರೆ, ಬದುಕುವ ದಾರಿ ಬದಲಗಬೇಕೆಂದು ಅವರು ನುಡಿದರು. ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ಬಸವರಾಜ ನೀಲೂರ, ಅರ್ಚಕರಾದ ರೇವಣಯ್ಯಸ್ವಾಮಿ ಸುಂಟನೂರ, ಪರಮೇಶ್ವರ ಹಳಿಜೋಳದ, ಶರಣಗೌಡ ಪಾಟೀಲ ನಿಂಬರ್ಗಾ, ಕಲ್ಯಾಣಿ ಕಾನಳ್ಳಿ, ಬಂಡೆಪ್ಪ ಪಂಚಾಳ, ಹಿರಸಂಗಪ್ಪ ಬುಳ್ಳಾ, ವರದಾನಿ ವೀರಭದ್ರಪ್ಪ, ಬಸವರಾಜ ಪಾಟೀಲ ಮಾಡ್ಯಾಳ, ಶಿವಪುತ್ರಪ್ಪ ಜೋಗೂರ, ವಿರುಪಾಕ್ಷಯ್ಯ ಹಿರೇಮಠ ಸರ್ವರನ್ನು ಸ್ವಾಗತಿಸಿದರು. ಪುರಾಣಿಕರಾದ ಷ.ಬ್ರ. ವೀರಮಹಾಂತ ಶಿವಾಚಾರ್ಯರು, ಸಂತೋಷ ಸಿಂದಗಿ, ಯೋಗಿರಾ ಕಣ್ಣಿ ಇವರಿಂದ ಸಂಗೀತ ಜರುಗಿತು. ಶಾಂತವೀರ ಪಾಟೀಲ ನಿರೂಪಿಸಿದರು.