ಲೋಕಾಗೆ ನಾನು ಸ್ಪರ್ಧಿಸುವೆನೆಂದ ಡಿ.ರಾಮಯ್ಯ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.31:- ಕೆ.ಆರ್. ನಗರ ಮೂಲದವರಾದ ತಾವು ಕರ್ನಾಟಕ ಆದಿ ಕರ್ನಾಟಕ ಯುವ ಜನ ಜಾಗೃತಿ ಮಹಾಸಭಾ ಅಧ್ಯಕ್ಷರೂ ಆಗಿದ್ದು, ಈ ಬಾರಿಯ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸ್ಪರ್ಧಿಸಿರುವುದಾಗಿ ಡಿ.ರಾಮಯ್ಯ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ಕ್ಷೇತ್ರದ ಮತದಾರರು ತಮಗೆ ಮತ ನೀಡಬೇಕೆಂದು ಕೋರುವುದಾಗಿ ತಿಳಿಸಿ, ಈ ಚುನಾವಣೆಯಲ್ಲಿ ದಲಿತ ಸಮುದಾಯದವರು ತಮ್ಮ ಮತ ಯಾರಿಗೆ ಹಾಕಬೇಕೆಂಬ ಬಗ್ಗೆ ತಾವೇ ನಿರ್ಧಾರ ಮಾಡಿಕೊಳ್ಳಬೇಕು.
ಜಾಗೃತರಾಗಿ ಮತ ಚಲಾಯಿಸಬೇಕು. ಇನ್ನು, ತಾವು ದಲಿತರ ಅಭಿವೃದ್ಧಿಗಾಗಿ ಶ್ರಮಿಸಲಿದ್ದು, ಈ ಸಮುದಾಯದವರು ತಮ್ಮನ್ನು ಬೆಂಬಲಿಸಬೇಕೆಂದು ಕೋರಿದರು.
ಇನ್ನಿತರ ಮುಖಂಡರಾದ ಟಿ. ರಾಮಸ್ವಾಮಿ, ಕುಮಾರಸ್ವಾಮಿ, ಕೆ.ಆರ್. ಮಂಜು ಹಾಜರಿದ್ದರು.