ರಸ್ತೆಬದಿ ಹೋಟಲ್‌ಗಳ ಮೇಲೆ ಪುರಸಭಾ ಮುಖ್ಯಾಧಿಕಾರಿ ದಾಳಿ
ವಿಜಯಪುರ.ಮಾ೩೧:ಪಟ್ಟಣದ ಪುಟ್ಬಾತ್ ಹೋಟೆಲುಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದ ಅಂಗಡಿಗಳ ಮೇಲೆ ರಾತ್ರಿ ದಾಳಿ ನಡೆಸಿದ ಪುರಸಭಾ ಮುಖ್ಯಾಧಿಕಾರಿ ಸಂತೋಷ್ ಕುಮಾರ್ ಆ ಅಂಗಡಿಗಳಲ್ಲಿದ್ದ ಪ್ಲಾಸ್ಟಿಕ್ ವಶಪಡಿಸಿಕೊಂಡು ಮತ್ತೆ ಪ್ಲಾಸ್ಟಿಕ್ ಕವರನ್ನು ಬಳಸಬಾರದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಪಟ್ಟಣದಲ್ಲಿ ಈಗಾಗಲೇ ಪುರಸಭೆಯಿಂದ ದಿನಸಿ ಅಂಗಡಿಗಳು, ತರಕಾರಿ ಅಂಗಡಿಗಳು, ಹೋಟಲಗಳ ಮೇಲೆ ಪ್ಲಾಸ್ಟಿಕ್ ಕವರ್ ಗಳನ್ನು ಬಳಸದಂತೆ ಮನವರಿಕೆ ಮಾಡಿದ್ದೇವೆ. ಇಂದು ಫುಟ್ಬಾತ್ ಹೋಟೆಲ್ ಹಾಗೂ ಅಂಗಡಿಗಳು, ಕಲ್ಯಾಣ ಮಂಟಪಗಳ ಮೇಲೆ ದಾಳಿ ನಡೆಸಿ ಮತ್ತೆ ಪ್ಲಾಸ್ಟಿಕ್ ಕವರ್ ಗಳನ್ನು ಬಳಸದಂತೆ ತಿಳಿಸಿದ್ದೇವೆ ಮತ್ತೆ ಯಾರೇ ಪ್ಲಾಸ್ಟಿಕ್ ಮರುಬಳಕೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುರಸಭೆಯ ಅಧಿಕಾರಿಗಳು ವಾರದ ಸಂತೆಯಲ್ಲಿ ತರಕಾರಿ ಮಾರಟದ ಅಂಗಡಿಗಳಿಗೆ ವಾನಿಂಗ್ ನೀಡಿದ್ದು, ದಂಡವಸುಲಿ ಮಾಡಿದ್ದಾರೆ. ಪಟ್ಟಣದ ಜನತೆ ಪ್ಲಾಸ್ಟಿಕ್ ಕವರ್ ಬಳಸದೇ ಪರಿಸರವನ್ನು ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದರು.
