ನಮ್ಮನ್ನು ಆಳುವುದು ಕಾನೂನೇ ಹೊರತು ರಾಜಕೀಯ ಪಕ್ಷಗಳಲ್ಲ: ಜ್ಞಾನಪ್ರಕಾಶ್ ಸ್ವಾಮೀಜಿ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.31:- ನಮ್ಮನ್ನು ಆಳುವುದು ಯಾವುದೋ ಒಂದು ಸರ್ಕಾರ ಅಲ್ಲ, ಸರ್ಕಾರ ಬರುತ್ತೆ ಹೋಗುತ್ತೆ. ನಮ್ಮನ್ನು ಆಳುವುದು ಈ ನೆಲೆದ ಕಾನೂನೇ ಹೊರತು ರಾಜಕೀಯ ಪಕ್ಷಗಳಲ್ಲ. ಪಕ್ಷಗಳು ಈದೇಶದ ಅಖಂಡತೆಗೆ ಅಪಾಯ, ಪಕ್ಷಗಳು ಸೋದರತೆ, ಸಮಗ್ರತೆಗೆ ಅಪಾಯ ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.
ನಗರದ ಕಲಾಮಂದಿರದಲ್ಲಿ ಶನಿವಾರ ಚಾರ್ವಾಕ ಪ್ರಸ್ಥುತಿಯ ವೈಚಾರಿಕ ಸಮ್ಮೇಳನದ ವತಿಯಿಂದ “ದಮನಿತರ ಬಂಗಾರದ ದಿನ” ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಕಾನೂನು ಬರುವ ಹಿಂದೆ ಇನ್ನೊಂದು ಕಾನೂನು ಇತ್ತು. ದಮನಿತರು, ಶೋಷಿತರು ಎನ್ನುವ ಪದಗಳನ್ನು ಇನ್ನು ಎಷ್ಟು ವರ್ಷಗಳ ಕಾಲ ಬಳಸಬೇಕು ಆದ್ದರಿಂದ ನಾವು ಈ ಪದಗಳನ್ನು ಬಳಸುವುದೇ ಬೇಡ ಎಂದು ಹೇಳಿದರು.
ಮತದಾರ ಪ್ರಭುಗಳು ಭ್ರಷ್ಟರಾಧರೆ ಈ ದೇಶದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಭ್ರಷ್ಟಾಚಾರದಲ್ಲಿ ಇರುತ್ತದೆ. ನಿಮ್ಮಲ್ಲರ ಹಕ್ಕು ಮತ್ತು ಅಧಿಕಾರ ಉತ್ತರ ಏನು ?. ಯಾವ ಸಮುದಾಯವು ಹಕ್ಕು ಮತ್ತು ಅಧಿಕಾರ ದಿಂದ ವಂಚಿರರಾಗುತ್ತಾರೋ ಅ ಸಮುದಾಯ ಶೋಷಣೆಗೆ ಒಳಗಾಗುತ್ತದೆ ಎಂದು ನುಡಿದರು.
ಚಿಂತಕ ವಾಸು ಮಾತನಾಡಿ, ರಾಜಕೀಯ ಸಂಗ್ರಾಮದ ಒಳಗಡೆ ಸಾಂಸ್ಕೃತಿಕ ಸಂಗ್ರಾಮ ಸಹ ನಡೆಯುತ್ತಿದೆ. ಮಹಾ ವಿಮೋಚನೆಯನ್ನು ಶೋಷಕ ಸಮುದಾಯ ಜೊತೆಗುಕೂಡ ಅವಲೋಕಿಸಬೇಕಾಗಿದೆ ಎಂದು ಹೇಳಿದರು.
ಹೊಸ ರೀತಿಯ ಸಾಂಸ್ಕೃತಿಕ ಚೌಕಟ್ಟು ನಿರ್ಮಾಣ ಮಾಡಲು ಇಂತಹ ನಾಟಕಗಳು ಉಪಯೋಗಕ್ಕೆ ಬರುತ್ತದೆ. ಸಿಎಎ ವಿರುದ್ದ ಆಂದೋಲನದಲ್ಲಿ ಸಂವಿಧಾನದ ಮುನ್ನುಡಿ ಸಹ ಜೊತೆಯಲ್ಲಿ ಬರುತ್ತಾ ಇತ್ತು ಎಂದು ಹೇಳಿದರು.
ಗಿರೀಶ್ ಮಾಚಳ್ಳಿ ಅವರ ರಚನೆ ಮತ್ತು ನಿರ್ದೇಶನದ ಭಾರತದ ಸಂವಿಧಾನ ವರಸಸ್ ಮನುಸ್ಮೃತಿ, ಮನುವಾದ ವರ್ಸ್ ಸ್ ಅಂಬೇಡ್ಕರ್ ವಾದ ಎಂಬ ಎರಡು ಕಿರು ನಾಟಕ ನಡೆಯಿತು.
ಕಾರ್ಯಕ್ರಮದಲ್ಲಿ ಅಹಿಂದ ಜವರಪ್ಪ, ಚಿಂತಕರಾದ ಅನಂತ್ ನಾಯಕ್, ಜಗದೀಶ್ ಜಾಣ ಜಾಣೆಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.