ಎ.1ರಿಂದ ಅಭಿನಂದನಾ ಸಮಾರಂಭ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.31:- ವಿದ್ಯಾರಣ್ಯಪುರಂನ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ವತಿಯಿಂದ ಬರುವ ಏ.1 ಸಂ.5.30 ರಿಂದ ರಾತ್ರಿ 8.30ರವೆಗೆ ನಗರದ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಎಸ್.ರವಿಕುಮಾರ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ವಿಶ್ವಪ್ರಸನ್ನ ತೀರ್ಥರು ಅಯೋಧ್ಯೆಯಲ್ಲಿ ಬಾಲ ರಾಮಚಂದ್ರ ದೇವರನ್ನು ಪ್ರತಿಷ್ಠಾಪನೆ ಮಾಡಿ, 48 ದಿನಗಳ ಕಾಲ ಮಂಡಲೋತ್ಸವ ಹಾಗೂ ಮಂಗಳೋತ್ಸವ ಮುಗಿಸಿಕೊಂಡು ಏ. ಒಂದರಂದು ನಗರಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಇವರನ್ನು ಅಭಿನಂದಿಸಲಾಗುವುದು. ಅಲ್ದಲೆ, ಬಾಲರಾಮನ ಮೂರ್ತಿ ಕೆತ್ತಿದ ನಗರದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಹಾಗೂ ಅಯೋಧ್ಯೆಯಲ್ಲಿ ಸುಧಾ ಮಂಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 14 ಮಂದಿ ಯುವ ವಿದ್ವಾಂಸರನ್ನೂ ಸನ್ಮಾನಿಸಲಾಗುವುದೆಂದರು. ಖಜಾಂಚಿ ಜಯಶ್ರೀ ಇದ್ದರು.