ನೀರಿಗಾಗಿ ರಾಷ್ಟ್ರಪತಿಗೆ ಮನವಿ ಪತ್ರದ ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.31:- ಕಾವೇರಿ ವಿಚಾರದಲ್ಲಿ ರಾಷ್ಟ್ರಪತಿ ದ್ರೌಪತಿ ಮರ್ಮು ಮಧ್ಯಸ್ಥಿತಿಕೆ ವಹಿಸಿ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಕಾವೇರಿ ಕ್ರಿಯಾ ಸಮಿತಿಯ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು.
ನಗರದ ಮೈಸೂರಿನ ಅಶೋಕ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿ ಮುಂಭಾಗ ಕಾವೇರಿ ನೀರಿನ ಸಮಸ್ಯೆಯನ್ನು ಬರೆದು ರಾಷ್ಟ್ರಪತಿಗಳಿಗೆ ಅಂಚೆಪತ್ರವನ್ನು ಪೆÇೀಸ್ಟ್ ಮಾಡಿದರು.
ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ಈ ಬಾರಿ ಹಿಂದೆಂದೂ ಕಂಡರಿಯದಂತಹ ಬೀಕರ ಬರ ರಾಜ್ಯದಲ್ಲಿ ಉದ್ಬವಿಸಿದೆ. ರಾಜ್ಯದಲ್ಲಿ ಕುಡಿಯಲು ನೀರಿಲ್ಲ. ಇಂತ ಸಮಯದಲ್ಲೂ ಕಾವೇರಿ ನ್ಯಾಯ ಮಂಡಳಿ, ತಮಿಳುನಾಡಿನ ಅಣೆಕಟ್ಟೆಗಳಲ್ಲಿ ನೀರು ಬಹಳ ತುಂಬಿದ್ದರು ನೀರು ಹರಿಸಲು ಆದೇಶಿಸುತ್ತಿರುವುದು ಅತ್ಯಂತ ಖಂಡನೀಯ
ಈಗಾಗಲೇ ರಾಜ್ಯದ ಕಾವೇರಿ ಕೊಳ್ಳಗಳಲ್ಲಿ ನೀರು ಬರಿದಾಗಿ ಕುಡಿಯಲು ನೀರಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕು. ಈ ಕೂಡಲೇ ರಾಷ್ಟ್ರಪತಿಗಳು ಮಧ್ಯಸ್ಥಿಕೆಯನ್ನು ವಹಿಸಿ ಅಲ್ಪಸ್ವಲ್ಪ ಉಳಿದಿರುವ ನೀರನ್ನು ಕುಡಿಯಲು ಅನುವು ಮಾಡಿಕೊಡಬೇಕು. ಜೊತೆಗೆ ಕಾವೇರಿ ವಿಚಾರದಲ್ಲಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅಂಚೆಪತ್ರ ಚಳುವಳಿ ನಡೆಸಿದರು.
ಸಮಿತಿಯ ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್ ಗೌಡ, ಬೋಗಾದಿ ಸಿದ್ದೇಗೌಡ, ಸಿಂದುವಳ್ಳಿ ಶಿವಕುಮಾರ್, ಕೃಷ್ಣಪ್ಪ, ನೇಹಾ, ಮಹದೇವ ಸ್ವಾಮಿ, ಶಿವಲಿಂಗಯ್ಯ, ಪ್ರಭುಶಂಕರ್, ರವೀಶ್, ಬಾಲಕೃಷ್ಣ, ಮಂಜುಳಾ, ಸೋಮೇಗೌಡ, ಅಶೋಕ್, ಹನುಮಂತಯ್ಯ, ಪ್ರಭಾಕರ, ಆಟೋ ಮಹಾದೇವ, ವಿಷ್ಣು, ರಮೇಶ್ ಇನ್ನೂ ಮುಂತಾದವರು ಹಾಜರಿದ್ದರು.