ವೆಬ್ ಕಾಸ್ಟಿಂಗ್ ಸಿ ಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಕಲು ಮುಕ್ತ ಶಾಂತಿಯುತ ಪರೀಕ್ಷೆ : ಮೋರಟಗಿ
ಅಥಣಿ :ಮಾ.31: ವಲಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಜರುಗುತ್ತಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಶಾಂತಿಯುತವಾಗಿ ಜರುಗುತ್ತಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೋರಟಗಿ ಹೇಳಿದರು.
ಅವರು ಎಸ್ ಎಸ್ ಎಲ್ ಸಿ ಪರೀಕ್ಷೆ 3ನೇ ದಿನವಾದ ಶನಿವಾರ ವಿಜ್ಞಾನ ಪರೀಕ್ಷೆಯು ತಾಲೂಕಿನ 21 ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿಯುತವಾಗಿ ಜರುಗಿದ ದೃಶ್ಯಾವಳಿಗಳನ್ನು ತಮ್ಮ ಕಛೇರಿಯಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಸಿಸಿ ಕ್ಯಾಮೆರಾಗಳಲ್ಲಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಅಥಣಿ ವಲಯದ 21 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 672 ಕೊಠಡಿಗಳಲ್ಲಿ 6888 ವಿದ್ಯಾರ್ಥಿಗಳ ಪೈಕಿ 6843 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 45 ಜನ ವಿದ್ಯಾರ್ಥಿಗಳು ಗೈರಾಗಿದ್ದು, ಎಲ್ಲಾ ಕೇಂದ್ರಗಳಲ್ಲಿ ನಕಲು ತಡೆಗಟ್ಟುವ ಉದ್ದೇಶದಿಂದ ವೆಬ್ ಕಾಸ್ಟಿಂಗ್ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪರೀಕ್ಷಾ ಕೇಂದ್ರದಲ್ಲಿ ಹಾವು ಪ್ರತ್ಯಕ್ಷ :
ಪಟ್ಟಣದ ಜಾದವ್ ಜಿ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಪೂರ್ವದಲ್ಲಿಯೇ ಹಾವು ಪ್ರತ್ಯಕ್ಷವಾಗಿ ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಆತಂಕ ಉಂಟು ಮಾಡಿತು. ಶಾಲೆಯ ಸಿಬ್ಬಂದಿ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ನಂತರ ಪರೀಕ್ಷೆಗಳು ನಿರ್ಭೀತಿಯಿಂದ ಜರುಗಿದವು.
ಎಸ್ ಎಸ್ ಎಲ್ ಸಿ ಮೊದಲ ದಿನದ ಪರೀಕ್ಷೆಗೆ ಆಗಮಿಸಿದಂತೆ 3 ನೇ ದಿನವೂ ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದರು. ಶಾಲೆಯ ಶಿಕ್ಷಕರು ಮತ್ತು ಪಾಲಕರು ಮಕ್ಕಳನ್ನ ಕೊಠಡಿಗೆ ಕಳಿಸುವುದರ ಜೊತೆಗೆ ಚೆನ್ನಾಗಿ ಪರೀಕ್ಷೆಯನ್ನು ಬರೆಯುವಂತೆ ಶುಭ ಹಾರೈಸಿದರು. ಪರೀಕ್ಷೆ ಸಮಯದ ಹೊತ್ತಿಗೆ ಪರೀಕ್ಷಾ ಸುತ್ತ ಮುತ್ತಲಿನ ಜನರನ್ನ ಪೆÇಲೀಸ್ ಸಿಬ್ಬಂದಿ ಹೊರ ಹಾಕುವ ಮೂಲಕ ಶಾಂತಿಯುತ ಹಾಗೂ ಅತ್ಯಂತ ಕಟ್ಟುನಿಟ್ಟಿನಿಂದ ಪರೀಕ್ಷೆ ಜರುಗಿದವು.