ಅಪೆÇೀಲೋ ಫಾರ್ಮಸಿಯ 6ಸಾವಿರ ಮಳಿಗೆ ಲೋಕಾರ್ಪಣೆ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.31:- ದೇಶದ ಹಲವೆಡೆ ತನ್ನ ಶಾಖೆ ಒಳಗೊಂಡಿರುವ ಅಪೆÇೀಲೋ ಫಾರ್ಮಸಿ ತನ್ನ 6000ನೇ ಮಳಿಗೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿನ ಕುವೆಂಪುನಗರದ ಬಸ್ ನಿಲ್ದಾಣದ ಎದುರು ಶನಿವಾರ ಲೋಕಾರ್ಪಣೆಗೊಳಿಸಿತು.
ಕುವೆಂಪುನಗರದ ಬಸ್ ನಿಲ್ದಾಣದ ಎದುರಿನ ನೂತನ ಮಳಿಗೆಯನ್ನು ಆದಿಚುಂಚನಗರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮತ್ತು ಶಿಲ್ಪಿ ಅರುಣ್ ಯೋಗಿರಾಜ್ ಉದ್ಘಾಟಿಸಿದರು.
ಅಪೆÇಲೊ ಫಾರ್ಮಸೀಸ್ ಲಿಮಿಟೆಡ್ನ ಸಿಇಒ ಪಿ.ಜಯಕುಮಾರ್ ಮಾತನಾಡಿ, ಮೈಸೂರಿನಲ್ಲಿ 6ಸಾವಿರನೇ ಮಳಿಗೆ ತೆರೆದಿರುವುದು ಸ್ವಾಗತಾರ್ಹ. ಅಪೆÇಲೊ 24 ತಾಸುಗಳು ಅಪ್ಲಿಕೇಶನ್ ಮೂಲಕ ಪರಿಣಾಮಕಾರಿಯಾಗಿ 19,000 ಪಿನ್ ಕೋಡ್‍ಗಳನ್ನು ಒಳಗೊಂಡಿದೆ. ಈ ವಿಸ್ತರಣೆಯು 60ಕೋಟಿಗೂ ಹೆಚ್ಚು ಭಾರತೀಯರಿಗೆ ಆರೋಗ್ಯ ಸೇವೆಗಳಿಗೆ ತಡೆರಹಿತ ಪ್ರವೇಶವನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.
ಅಪೆÇಲೊ ಬಿಜಿಎಸ್ ಆಸ್ಪತ್ರೆಯ ಮೈಸೂರು ವಿಭಾಗದ ಮುಖ್ಯಸ್ಥ ಹಾಗೂ ಅಪರೇಷನ್ ವಿಭಾಗದ ಉಪಾಧ್ಯಕ್ಷ ಎನ್.ಜಿ.ಭರತೀಶ್ ರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.