ಗುರುವರ್ಯರ ಶ್ರೀರಕ್ಷೆ ಸದಾ….ಸದಾ.ದಿಶಾ ಕಾಲೇಜು ಜ್ಞಾನ ಅಷ್ಟೇ ಅಲ್ಲ, ಸಾಕ್ಷಾತ್ ಅನ್ನಪೂರ್ಣೇಶ್ವರಿ..!ಧನರಾಜ ರಾಠೋಡ ಮುತ್ತಕೋಡ
ಕಲಬುರಗಿ: ಇಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿದೆ. ಆದರೆ, ಮಾನವೀಯ ಮೌಲ್ಯಗಳು,ಸಂಸ್ಕಾರಗಳು ಹಾಗೂ ಜ್ಞಾನ ದಾಸೋಹ ಕಾಣಬೇಕಾದರೆ,ದಿಶಾ ವಿಜ್ಞಾನ ಕಾಲೇಜಿಗೆ ಬನ್ನಿ.
ಹೌದು. ಕಲಬುರಗಿ ಮಹಾನಗರದ ಕೂಟನೂರು ಡಿ,ಬಳಿಯ ಜೇವರ್ಗಿ ರಸ್ತೆಯಲ್ಲಿ ಇರುವ, ದಿಶಾ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯವೈಖರಿಗೆ ಈ ಪದ ಪುಂಜಗಳು ಬಳಸಬೇಕಾಗಿದೆ..
ಅನ್ನ ದಾಸೋಹ ಮಾಡುತ್ತಿರುವ ದಿಶಾ ಕಾಲೇಜು
ದ್ವೀತಿಯ ಪಿಯುಸಿ ಪರೀಕ್ಷೆ1ರ ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯದ ಮೌಲ್ಯಮಾಪನವು ನಡೆಯುತ್ತಿದೆ.ಸುಮಾರು 350ಕ್ಕೂ ಹೆಚ್ಚು ಮೌಲ್ಯಮಾಪನ ಮಾಡುತ್ತಿರುವ ಸಹಾಯಕ ಹಾಗೂ ಉಪ ಮೌಲ್ಯಮಾಪಕರಿಗೆ, ದಿನಂಪ್ರತಿ ಬಗೆ ಬಗೆಯ ಮೃಷ್ಠಾನ್ನ ಭೋಜನವನ್ನು ನೀಡಿ,ಸಾಕ್ಷಾತ್ ಅನ್ನಪೂರ್ಣೇಶ್ವರಿಯಂತೆ ದಿಶಾ ಕಾಲೇಜು ಆಡಳಿತ ಮಂಡಳಿ ಇದೆ ಎಂದು ಗುರುವರ್ಯ ಉವಾಚ.
ಆಟಕ್ಕೂ ಸೈ,ಪಾಠಕ್ಕೂ ಸೈ ದಿಶಾ ಕಾಲೇಜು ಮಾನವೀಯತೆಗೂ ಸೈ..!!
ಹೌದು.ಪ್ರತಿಯೊಬ್ಬ ದಿಶಾ ಕಾಲೇಜಿನ ಸಿಬ್ಬಂದಿ ವರ್ಗದವರು,ಮುದ್ದು ಮಕ್ಕಳಿಗೆ ಆಟದ ಜೊತೆ,ಪಾಠದಲ್ಲು ಸಹ ಎತ್ತಿದ ಕೈ.ಅಷ್ಟೇ ಅಲ್ಲ.ಇಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯ,ಸಂಸ್ಕಾರಗಳು ಕಲಿಯಬೇಕಾದರೆ ದಿಶಾ ಕಾಲೇಜಿಗೆ ಬಂದು ನೋಡಬೇಕು ಎಂದು ಮೌಲ್ಯಮಾಪನ ಮಾಡಲು ಬಂದಿರುವ ಗುರುವರ್ಯರಿಂದ ಕೇಳಿ ಬಂದ ಮಾತುಗಳು.ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಪುಣ್ಯವಂತರೆಂದೆ ಹೇಳಬೇಕಾಗಿದೆ.
ಶಿಸ್ತು, ಸಂಯಮ,ಸಮಯ ಪಾಲನೆ
ಹೌದು. ದಿಶಾ ಕಾಲೇಜಿನ ಹೊರಾಂಗಣ ಮತ್ತು ಒಳಾಂಗಣದಲ್ಲಿ ಹೋಗಿ ನೋಡಿದರೆ, ಇಲ್ಲಿ ಶಿಸ್ತು,ಸಂಯಮ,ಸಮಯ ಪಾಲನೆ ಹಾಗೂ ಮಾನವೀಯ ಗುಣಗಳು ಎದ್ದು ಕಾಣುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಗುಣಮಟ್ಟದ ಶಿಕ್ಷಣದ ಜೊತೆ ಈ ಮೂರ್ನಾಲ್ಕು ಗುಣಗಳು ಮುದ್ದು ಮಕ್ಕಳು ಅಳವಡಿಸಿಕೊಂಡರೆ,ಆ ಮಕ್ಕಳು ಬಾನೆತ್ತರಕ್ಕೆ ಹೋಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳುತ್ತಾರೆ ಹಿರಿಯ ಉಪನ್ಯಾಸಕರು ಹಾಗೂ ಮೌಲ್ಯಮಾಪಕರು.
ಗುರುವರ್ಯರ ಶ್ರೀರಕ್ಷೆ…ಸದಾ…ಸದಾ..
ಹೌದು. ಈ ಮಾತು ಕಟು ಸತ್ಯ.ದಿಶಾ ವಿಜ್ಞಾನ ಕಾಲೇಜಿನಲ್ಲಿ ಮೌಲ್ಯಮಾಪನಕ್ಕೆ ಬಂದ,ಸಹಾಯಕ ಮತ್ತು ಹಿರಿಯ ಮೌಲ್ಯಮಾಪಕರಿಂದ ಕೇಳಿ ಬರುತ್ತಿರುವ ಮಾತುಗಳು.ದಿಶಾ ಕಾಲೇಜಿನಿಂದ ಚಹಾ ಹಾಗೂ ಭೋಜನ ಮಾಡಲು ಕನಿಷ್ಠ ಎರಡು ಕಿಲೋಮೀಟರ್ ದೂರದಲ್ಲಿರುವ ರಾಮ ಮಂದಿರ ಬಳಿ ಹೋಗಬೇಕಾಗಿತ್ತು.ಆದರೆ,ದಿಶಾ ಸಂಸ್ಥೆ ದಿನಕ್ಕೆ ಎರಡು ಮೂರು ಬಾರಿ ಚಹಾ,ಕಾಫಿ ಹಾಗೂ ಮಧ್ಯಾನ್ಹದ ಭೋಜನ ವ್ಯವಸ್ಥೆಗೆ ಟೆಂಟ್ ನಿರ್ಮಾಣ ಮಾಡಿ ರುಚಿ ಮತ್ತು ಶುಚಿ ಭೋಜನ ಚಪ್ಪರಿಸಿದ ಪ್ರತಿ ಗುರು ವರ್ಯರು,ದಿಶಾ ಕಾಲೇಜು ರಾಜ್ಯಮಟ್ಟದಲ್ಲಿ ಹೆಸರು ವಾಸಿಯಾಗಲಿ ಎಂದು ಹಾರೈಸುತ್ತಿದ್ದಾರೆ.
ಅತಿಥಿ ದೇವೋಭವ ನಮ್ಮ ಸಂಸ್ಕøತಿ
ನಮ್ಮ ಭಾರತ ಸಮಾಜದಲ್ಲಿ ಅತಿಥಿಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ.ನಮಗೆ ಅತಿಥಿಗಳ ಸೇವೆ ಮಾಡಲು ಇದೊಂದು ನಮ್ಮ ಸೌಭಾಗ್ಯ. ನಾವು ಅದನ್ನೆ ಮಾಡಿದ್ದು.ಅದರಲ್ಲಿ ಏನು ವಿಶೇಷ ಇಲ್ಲ.ನಮ್ಮದು ಅತಿಥಿ ದೇವೋಭವ ಸಂಸ್ಕೃತಿ.
ಶಿವಾನಂದ ಕಜುರ್ಗಿ ಜವಳಿ.
ಅಧ್ಯಕ್ಷರು,ದಿಶಾ ಕಾಲೇಜು
ಸಾಕ್ಷಾತ್ ಅನ್ನಪೂರ್ಣೇಶ್ವರಿ ದಿಶಾ ಸಂಸ್ಥೆ
ನಮ್ಮ ಸಹಾಯಕ ಹಾಗೂ ಉಪ ಮೌಲ್ಯಮಾಪಕರಿಗೆ ಶುಚಿ ರುಚಿಯಾದ ಭೋಜನ ವ್ಯವಸ್ಥೆ ಅಚ್ಚು ಕಟ್ಟಾಗಿ ಮಾಡಿದ ದಿಶಾ ಕಾಲೇಜು ನಿಜಕ್ಕೂ ಸಾಕ್ಷಾತ್ ಅನ್ನಪೂರ್ಣೇಶ್ವರಿಯಂತೆ ಕಂಡಿದೆ.ಅಡಳಿತ ಮಂಡಳಿಗೆ ಧನ್ಯವಾದಗಳು.
ಮಾಳಗೆ ಬಾಬುರಾವ್
ಮುಖ್ಯ ಪರೀಕ್ಷಕರು,ಸಮಾಜಶಾಸ್ತ್ರ ಮೌಲ್ಯಮಾಪನ ಕೇಂದ್ರ.
ದಿಶಾ ಕಾಲೇಜಿನ ಸೇವೆ ಅನುಕರಣಿಯ
ದಿಶಾ ಕಾಲೇಜು ನಮಗೆಲ್ಲರಿಗೂ ಅನುಕರಣೀಯ. ನಮ್ಮ30 ವರ್ಷದ ಮೌಲ್ಯಮಾಪನ ಅನುಭವದಿಂದ ಈ ರೀತಿಯ ಅನುಕೂಲತೆ ಎಲ್ಲೂ ಕಂಡಿಲ್ಲ. ಅವರ ಅತಿಥಿ ಸರ್ಕಾರಕ್ಕೆ ನಾವು ತಿಳಿಸುವ ಧನ್ಯವಾದಕ್ಕೆ ಪರ ಪುಂಜಗಳೇ ಇಲ್ಲ.
ಮಲ್ಲಮ್ಮ ಆರ್ ಪಾಟೀಲ್
ಅರ್ಥಶಾಸ್ತ್ರ ಮೌಲ್ಯಮಾಪನ ಕೇಂದ್ರ ಮುಖ್ಯಸ್ಥರು.