ಆರೋಗ್ಯ ಜಾಗೃತಿಗೆ ಉಚಿತ ಶಿಬಿರಗಳು ಸಹಕಾರಿ
ಸಂಜೆವಾಣಿ ವಾರ್ತೆ
ಹುಮನಾಬಾದ್ :ಮಾ.31: ಚಿಟಗುಪ್ಪ ಗ್ರಾಮೀಣ ಭಾಗದ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನರು ಆರೋಗ್ಯ ಶಿಬಿರದ ಬಗ್ಗೆ ನಿರ್ಲಕ್ಷ ತೋರದೇ ಶಿಬಿರದಲ್ಲಿ ಪಾಲ್ಗೊಂಡು ವೈದ್ಯರ ಸಲಹೆ ಪಡೆಯಬೇಕು ಎಂದು ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ. ಆರ್. ಎಲ್. ಜಾಧವ ಹೇಳಿದರು.
ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಜುವಾರಿ ಫಾರ್ಮಹಬ್ ಹಾಗೂ ಜಯ್ ಕಿಸಾನ್ ಜಂಕ್ಷನ್ ವತಿಯಿಂದ ನಡೆದ ಉಚಿತ ಆರೋಗ್ಯ ಶಿಬಿರವ ಉದ್ಘಾಟಿಸಿ ಮಾತನಾಡಿದರು.
ಇಂದಿನ ಒತ್ತಡದ ಬದುಕಿನಲ್ಲಿ ಕೆಲವರು ಒಂದಲ್ಲ ಒಂದು ಕಾಯಿಲೆಯಲ್ಲಿ ಜೀವನ ಕಳೆಯುತ್ತಿದ್ದಾರೆ. ಸುಖಕರ ಜೀವನಕ್ಕಾಗಿ ಪ್ರತಿಯೊಬ್ಬರು ಮಾನಸಿಕ ನೆಮ್ಮದಿ ಕಾಯ್ದುಕೊಳ್ಳುವ ಮೂಲಕ ಆರೋಗ್ಯವಾಗಿರಲು ಪ್ರಯತ್ನಿಸಬೇಕು. ರೋಗಮುಕ್ತ ಜೀವನಕ್ಕಾಗಿ ಪ್ರತಿಯೊಬ್ಬರು ದಿನನಿತ್ಯ ಯೋಗಾಸನ ಸೇರಿ ದೈಹಿಕ ಕರಸತ್ತುಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಜುವಾರಿ ಫಾರ್ಮಹಬ್‍ನ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಕೊಟ್ಟರ್ಗಿ ಮಾತನಾಡಿ, ಎಲ್ಲರೂ ಆರೋಗ್ಯವಾಗಿರಲೂ ಪ್ರತಿನಿತ್ಯ ಊಟದಲ್ಲಿ ತರಕಾರಿ ಸೇವನೆ ಮಾಡಬೇಕು. ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವ ಮೂಲಕ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆದು ತಮ್ಮ ಆರ್ಥಿಕ ಸ್ಥಿತಿ ಬಲಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೀಪಕ ದೇವಾಬರಿ, ಚಂದ್ರಶೇಖರ ಸ್ವಾಮಿ, ಹಣಮಂತ ಸೇಡಮೆ, ಬಸವಕುಮಾರ ಹಳ್ಳಿಖೇಡ, ಪ್ರದೀಪ ಜಾಧವ, ಚನ್ನವೀರ ಮೇತ್ರೆ, ಚಂದ್ರಕಾಂತ ಸಿಂಧನಕೇರಾ, ವಿಜಯಕುಮಾರ, ಗೋಪಾಲಕೃಷ್ಣ, ಮಹಾದೇವ ಸೇರಿ ಅನೇಕರಿದ್ದರು.