ಜನರ ಮನದಲ್ಲಿನ ಶಾಂತಿ, ಸೌಹಾರ್ದತೆಯ ತುಡಿತ ಕೆಲಸ ಮಾಡಬೇಕಿದೆ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.31:ನಾವು ಮಾನವೀಯವಾದಂತಹ ಶಾಂತಿ, ಸೌಹಾರ್ದತೆಯ ವಾತಾವರಣ ಕಟ್ಟಲು ಆಗುತ್ತಿಲ್ಲ ಎನ್ನುವ ಪ್ರಜ್ಞಾವಂತ ಒಳಮನಸಿನ ತಳಮಳ, ಒದ್ದಾಟ ಇದು ತುಂಬಾ ಪ್ರಮುಖವಾಗಿ ಈಗ ಕೆಲಸ ಮಾಡಬೇಕು ಎಂದು ಖ್ಯಾತ ಲೇಖಕರು ಹಾಗೂ ಸಾಮಾಜಿಕ ಹೋರಾಟಗಾರ್ತಿ ರೂಪ ಹಾಸನ ಅವರು ಅಭಿಪ್ರಾಯಪಟ್ಟರು.
ಆವಿಷ್ಕಾರ, ಎಐಡಿಎಸ್‍ಒ, ಎಐಡಿವೈಒ ಹಾಗೂ ಎಐಎಮ್‍ಎಸ್‍ಎಸ್ ಸಂಘಟನೆಗಳ ನೇತೃತ್ವದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ 13ನೇ ವಿಜಯಪುರ ಸಾಂಸ್ಕøತಿಕ ಜನೋತ್ಸವ’À ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಈ ಸಾಂಸ್ಕøತಿಕ ಜನೋತ್ಸವ ಕಾರ್ಯಕ್ರಮವನ್ನು ಹಲವು ಜಾತಿ ಧರ್ಮಗಳ ಸೌಹಾರ್ದತೆಗೆ ಪ್ರತೀಕವಾದಂತಹ ವಿಜಯಪುರ ನೆಲದಲ್ಲಿ ಮತ್ತೊಮ್ಮೆ ಆಚರಿಸುತ್ತಿರುವುದು ಸಂತಸ ತಂದಿದೆ. ನಿಜವಾದ ಸಾಂಸ್ಕೃತಿಕ ಮಟ್ಟವನ್ನು ನಾವು ಜಾಗೃತಗೊಳಿಸಿಕೊಳ್ಳಲಿಕ್ಕೆ ಈ ಸಂದರ್ಭ ಕೂಡಿ ಬಂದಿದೆ. ನಾವು ಇವತ್ತು ವಿಷಮ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ ಎಂದರು.
ಸಂಸ್ಕೃತಿ ಅನ್ನುವಂತಹದ್ದು ನಿಂತ ನೀರಲ್ಲ, ಅದು ಹರಿಯುವ ನೀರು. ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮದು ಬಹುಭಾμÉ, ಬಹು ಸಂಸ್ಕಾರ ಮತ್ತು ಬಹು ಆಚರಣೆಯನ್ನೊಳಗೊಂಡ ಬಹು ದೊಡ್ಡ ದೇಶ, ಇಲ್ಲಿ ಅನೇಕ ಜಾತಿ, ಧರ್ಮ, ಜನಾಂಗವನ್ನೊಳಗೊಂಡ ಜನರು ತಲೆತಲಾಂತರದಿಂದ ಅವರವರ ದೇವರು, ಧರ್ಮ, ಸಂಪ್ರದಾಯ ಆಚರಣೆಗಳನ್ನು ನಂಬಿ ಬದುಕುತ್ತಾ ಬಂದಿದ್ದಾರೆ, ಅದರಲ್ಲಿ ಅವೈಜ್ಞಾನಿಕವಾಗಿರುವಂತಹದ್ದು, ಅವೈಚಾರಿಕವಾಗಿರುವಂತದ್ದು ಮತ್ತು ಅಸಮಾನತೆಯನ್ನು ಆಧರಿಸಿದ್ದು ಕೂಡ ಇರಬಹುದು, ನಂತರ ಕಾಲಾಂತರದಲ್ಲಿ ಅದೆಲ್ಲ ಕೂಡ ನಿರ್ಮೂಲನೆ ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಕಥೆಗಾರರು ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನೂತನ ಅಧ್ಯಕ್ಷ ಡಾ. ಚೆನ್ನಪ್ಪ ಕಟ್ಟಿ ಅವರು ಮಾತನಾಡಿ, ಯಾವ ದೇಶ ಸೌಹಾರ್ದತೆಯಿಂದ ಬದುಕಲು ಸಾಧ್ಯವಿಲ್ಲವೋ ಆ ದೇಶ ಎμÉ್ಷೀ ಮುಂದುವರೆದಿದ್ದರೂ ಕೂಡ ಆ ದೇಶ ಆರ್ಥಿಕವಾಗಿ ಖಂಡಿತವಾಗಿಯೂ ಮುಂದುವರಿದಿರುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು ಎಂದರು.
ಎಐಡಿಎಸ್‍ಒನ ಅಖಿಲ ಭಾರತ ಉಪಾಧ್ಯಕ್ಷÀ ಡಾ.ಎನ್. ಪ್ರಮೋದ ಅವರು ಮಾತನಾಡಿ, ಪ್ರಶ್ನೆ ಮಾಡುವ ಸಂಸ್ಕøತಿಯನ್ನೇ ಬಲವಂತವಾಗಿ ಹತ್ತಿಕ್ಕುವ ವಾತಾವರಣ ಸೃಷ್ಠಿಯಾಗುತ್ತಿದೆ. ಪ್ರಶ್ನೆ ಮಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ಟ್ರೋಲ್ ಸಂಸ್ಕೃತಿ ಮೂಲಕ ಪ್ರಶ್ನೆ ಮಾಡುವವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದರು.
ಸಾಹಿತಿ ಶರತಚಂದ್ರ ಚಟರ್ಜಿ ಅವರು ಅನೇಕ ವೈಜ್ಞಾನಿಕ ಗ್ರಂಥಗಳನ್ನು ಅಧ್ಯಯನ ಮಾಡುತ್ತಿದ್ದರು. ಅವರ ಸಾಹಿತ್ಯವನ್ನು ಬ್ರಿಟಿಷರು ಕೂಡ ನಿμÉೀಧಿಸಿದ್ದರು. ಮಹಿಳಾ ದೌರ್ಜನ್ಯದ ಕುರಿತು ಅವರು ಸಾಕಷ್ಟು ಗ್ರಂಥ ಬರೆದಿದ್ದರು. ಅವರ ಆದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕೆಂದರು ಎಂದು ಕರೆ ನೀಡಿದರು.
ರಂಗಮಂದಿರದ ಆವರಣದಲ್ಲಿಯ ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಅವರು ಉದ್ಘಾಟಿಸಿದರು.
ಆವಿಷ್ಕಾರದ ಮುಖಂಡ ಅಶೋಕ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಐ.ಡಿ.ವೈ.ಒ. ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಂತರ ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯಿಂದ ಸಮೂಹ ಗಾಯನ, ಗೀತಾಂಜಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಂದ ಸಮೂಹ ನೃತ್ಯ, ಕಲಾವಿದರಾದ ಸಿದ್ದಣ್ಣ ಬಿಜ್ಜರಗಿ ಅವರಿಂದ ತತ್ವ ಪದಗಳು, ವಿದೂಷಿ ಲಕ್ಷ್ಮೀ ತೇರದಾಳಮಠ ಅವರ ನಾಟ್ಯಕಲಾ ಡಾನ್ಸ್ ಕ್ಲಾಸ್‍ನವರಿಂದ ನೃತ್ಯ ರೂಪಕ, ಕಾವ್ಯ-ಕುಂಚ-ನೃತ್ಯ ಎಂಬ ವಿಶಿಷ್ಠ ಕಾರ್ಯಕ್ರಮದಲ್ಲಿ ಅಕ್ಕ ಮಹಾದೇವಿ ಮಹಿಳಾ ವಿವಿ ಸಂಗೀತ ಉಪನ್ಯಾಸಕ ಹರೀಶ ಹೆಗಡೆ ಮತ್ತು ತಂಡದವರಿಂದ ಕಾವ್ಯ, ಮಹಾಲ(ಐನಾಪುರ)ನ ಚಿತ್ರ ಕಲಾವಿದರಾದ ಪರಶುರಾಮ ಇಂಚಗೇರಿ ಹಾಗೂ ನಂದ್ಯಾಳ ಗ್ರಾಮದ ಚಿತ್ರ ಕಲಾವಿದÀ ಮಲ್ಲು ಹಡಪದ ಅವರಿಂದ ಕುಂಚ ಹಾಗೂ ಬಳ್ಳಾರಿಯ ಜಾನಪದ ಕಲಾವಿದರಾದ ತಿರುಮಲ ಡಿ. ಜಿ. ಮತ್ತು ವಿಜಯಪುರದ ಸ್ಮಿತಾ ರೂಡಗಿ ಅವರಿಂದ ನೃತ್ಯ ಕಾಯಕ್ರಮಗಳು ಜನರ ಮನ ಸೆಳೆದವು..
ಚಾಮರಾಜನಗರದ ಶಾಂತಲಾ ಕಲಾವಿದರು ಪ್ರಸ್ತುತ ಪಡಿಸಿದ, ಹೆನ್ರಿಕ್ ಇಬ್ಸೆನ್ ಅವರ ನಾಟಕವನ್ನು ಆಧÀರಿಸಿ ಎಸ್. ಸುರೇಂದ್ರನಾಥ ಅವರು ರಚಿಸಿ, ನಿರ್ದೇಶಿಸಿರುವ ಜನ ಶತ್ರು ಎಂಬ ನಾಟಕವು ಪ್ರಸಕ್ತ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿತು.