ಸಿಡಿಲು ಬಡಿದು ಎರಡು ಎತ್ತುಗಳ ಸಾವು
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ.31 :ವಿಜಯಪುರ ತಾಲೂಕಿನ ಗುಣಕಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟಿವೆ.
ನಾನಾಗೌಡ ಮಲ್ಲಪ್ಪ ಬಿರಾದಾರ ಎಂಬುವರಿಗೆ ಸೇರಿದ ಎತ್ತುಗಳು ಸಿಡಿಲಿಗೆ ಬಲಿಯಾಗಿವೆ.
ರಾತ್ರಿ 8 ಗಂಟೆ ಸುಮಾರಿಗೆ ಗಾಳಿ, ಗುಡುಗು, ಸಿಡಿಲು ಸಮೇತ ಸುರಿದ ಮಳೆಯಲ್ಲಿ ಸಿಡಿಲು ಬಡಿದು ತೋಟದ ಮನೆ ಮುಂದೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಎತ್ತುಗಳ ಮೇಲೆ ಸಿಡಿಲು ಎರಗಿ ಕ್ಷಣಾರ್ಧದಲ್ಲಿ ?1,50,000 ಮೌಲ್ಯದ ಎರಡು ಎತ್ತುಗಳು ಸಾವನಪ್ಪಿವೆ.
ವ್ಯವಸಾಯಕ್ಕೆ ಆಸರೆಯಾಗಿದ್ದ ಎತ್ತುಗಳು ಮೃತಪಟ್ಟು ಅಪಾರ ಹಾನಿಯಾಗಿದೆ. ಸರಕಾರ ಸೂಕ್ತ ಪರಿಹಾರ ಧನ ನೀಡಬೇಕು ಎಂದು ಜಾನುವಾರುಗಳ ಮಾಲಿಕ ನಾನಾಗೌಡ ಬಿರಾದಾರ ಒತ್ತಾಯಿಸಿದ್ದಾರೆ.