ಬಿಸಿಲಿನ ತಾಪಮಾನಕ್ಕೂ ಕ್ಯಾರೇ ಎನ್ನದೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು
ಚಿಂಚೋಳಿ,ಮಾ.30- ತಾಲೂಕಿನ ತುಮಕುಂಟ ಚೆಕ್ ಪೆÇೀಸ್ಟ್ ನಲ್ಲಿ 2024ನೇ ಲೋಕಸಭೆ ಚುನಾವಣೆಯ ಕೆಲಸವನ್ನು ಬಿಸಿಲಿಗೆ ಕ್ಯಾರೇ ಎನ್ನದೆ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ.
ಚುನಾವಣಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಮತ್ತು ಅಂತಾರಾಜ್ಯ ಗಡಿಯಲ್ಲಿ ಚೆಕ್‍ಪೆÇೀಸ್ಟ್ ತೆರೆಯಲಾಗಿದ್ದು, ಬೀದರ್ ಹೋಗುವ ಮುಖ್ಯರಸ್ತೆಯ ತುಮಕುಂಟ ಬಳಿಯ ಚೆಕ್ ಪೆÇೀಸ್ಟ್ ನಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ ಚೆಕ್ ಪೆÇೀಸ್ಟ್ ಮೂಲಕ ಸಾಗುವ ಪ್ರತಿ ವಾಹನವನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ. ಸಂಚರಿಸುವ ವಾಹನಗಳ ಮೇಲೆ ನಿರಂತರ ನಿಗಾವಹಿಸುತ್ತಿರುವುದು ಕಂಡುಬಂದಿದೆ
ಚೆಕ್ ಪೆÇೀಸ್ಟ್ ಪೆÇೀಸ್ಟ್ ಅಧಿಕಾರಿಗಳಾದ ಅಬ್ದುಲ್ ರಶೀದ್ ಮತ್ತು ಪಂಚಾಯತ್ ಇಲಾಖೆಯ ಸಿಬಂದಿ, ಪೆÇಲೀಸ್ ಮತ್ತು ಗೃಹ ರಕ್ಷಣೆ ಸಿಬಂದಿಗಳು ಇದ್ದರು.