ಅಮೆರಿಕಾದಲ್ಲಿ ಸ್ಪೆಲ್ ಬೀ! ಕರ್ನಾಟಕದಲ್ಲಿ ಕನೆಕ್ಟ್ ಕನ್ನಡ- ಅನ್ಲಾಕ್ ಕರ್ನಾಟಕ!
ಬೆಂಗಳೂರು, ಮಾ. ೩೦- ನೇಟಿವ್ ಡ್ರೀಮ್ ಟೆಕ್ನಾಲಜೀಸ್ ಸಂಸ್ಥೆಯಿಂದ ಮಾತೃಭಾಷಾ ಆಪ್‌ನಲ್ಲಿ ೫ನೇ ತರಗತಿಯಿಂದ ೧೦ನೇ ತರಗತಿ ಮಕ್ಕಳಿಗೆ ಕನೆಕ್ಟ್ ಕನ್ನಡ- ಅನ್ಲಾಕ್ ಕರ್ನಾಟಕ ಎಂಬ ಕಾರ್ಯಕ್ರಮವನ್ನು ೨೦೨೪, ಏಪ್ರಿಲ್ ೧ ರಿಂದ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ಮಕ್ಕಳಿಗೆ ನಮ್ಮ “ನಾಡು, ನುಡಿ, ಇತಿಹಾಸ”ದ ಅರಿವು ಮತ್ತು ಒಲವು ಮೂಡಿಸುವುದಾಗಿದ್ದು ಅದಕ್ಕಾಗಿ ಅವಶ್ಯವಿರುವ “ಪರಿಕರ, ಪರಿಸರ ಮತ್ತು ಪ್ರೋತ್ಸಾಹ” ನೀಡುವುದಾಗಿದೆ ಎಂದು ನೇಟಿವ್ ಡ್ರೀಮ್ ಟೆಕ್ನಾಲಜೀಸ್ ಸಂಸ್ಥೆಯ ಸಂಸ್ಥಾಪಕ ಚಂದನ್ ಪಿ.ಆರ್. ತಿಳಿಸಿದ್ದಾರೆ. ಏಪ್ರಿಲ್ ೧ ರಿಂದ ನವೆಂಬರ್‌ವರೆಗೂ ನಡೆಯುವ ಉಚಿತ ಕಾರ್ಯಕ್ರಮವಾಗಿದ್ದೂ, ಪ್ರತಿ ತಿಂಗಳು ಗೆಲ್ಲುವ ಮೊದಲ ಮೂರು ಮಕ್ಕಳು ರೂ. ೫೦೦೦, ರೂ. ೩೦೦೦, ರೂ. ೨೦೦೦ ಬಹುಮಾನವನ್ನು ಪಡೆಯುತ್ತಾರೆ ಮತ್ತು ನವೆಂಬರ್‌ನಲ್ಲಿ ರಾಜ್ಯ ಮಟ್ಟದ ಪ್ರಿ-ಫೈನಲ್‌ಗೆ ಅರ್ಹರಾಗುತ್ತಾರೆ. ಕನೆಕ್ಟ್ ಕನ್ನಡ- ಅನ್ಲಾಕ್ ಕರ್ನಾಟಕ ಫೈನಲ್‌ನ ನವೆಂಬರ್ ನಲ್ಲಿ ನಡೆಯಲಿದ್ದು ಅದರಲ್ಲಿ ಗೆಲ್ಲುವ ಮಗುವಿಗೆ ರೂ. ೫೧,೦೦೦ ಮತ್ತು ವಿದ್ಯಾ ಶ್ರೇಷ್ಠ ಪ್ರಶಸ್ತಿ, ಶಾಲೆಗೆ ರೂ. ೩,೧೦,೦೦೦ ಬಹುಮಾನವನ್ನು ಮತ್ತು ವಿದ್ಯಾ ವಿಭೂಷಣ ಪ್ರಶಸ್ತಿಗೆ ನಿಗದಿ ಪಡಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ನೋಂದಾಯಿಸಲು ಇಚ್ಛಿಸುವ ಶಾಲೆಗಳು ನಮ್ಮ ವಾಟ್ಸಾಪ್ ನಂಬರ್+೯೧ ೬೩೬೬೯೭೫೧೫೧ಗೆ ಸಂದೇಶ ಕಳುಹಿಸಿ ಅರ್ಜಿ ಪಡೆಯಬಹುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಮಕ್ಕಳು ಅಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ನಮ್ಮ ಮಾತೃಭಾಷಾ ಆಪ್ ಡೌನ್ಲೋಡ್ ಮಾಡಿ ನೋಂದಾಯಿಸಿಕೊಳ್ಳಬಹುದು.