ಗುಲಗಂಜಿಕೊಪ್ಪದಲ್ಲಿ ಮತದಾನ ಜಾಗೃತಿ
ಧಾರವಾಡ,ಮಾ30: ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಅತೀ ಕಡಿಮೆ ಮತದಾನವಾಗಿರುವ ಗುಲಗಂಜಿಕೊಪ್ಪದ ಎರಡು ಮತ ಕೇಂದ್ರಗಳ ವ್ಯಾಪ್ತಿಯ ಮತದಾರರಲ್ಲಿ ತಪ್ಪದೇ ಮತ ಚಲಾತಯಿಸುವಂತೆ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸ್ವರೂಪ ಟಿ.ಕೆ ಅವರು ಕರೆ ನಿಡಿದರು.
ಭಾರತದ ಸಂವಿಧಾನವು ರಾ?À್ಟ್ರದ ನಾಗರಿಕರಿಗೆ ನೀಡಿರುವ ಅಮೂಲ್ಯವಾದ ಹಕ್ಕು ಮತದಾನವಾಗಿದೆ. ಮತ್ತು ತಪ್ಪದೇ ಮತದಾನ ಮಾಡುವುದು ಪ್ರತಿಯೊಬ್ಬ ವಯಸ್ಕ ಪ್ರಜೆಯ ಕರ್ತವ್ಯವು ಆಗಿದೆ. ಆದ್ದರಿಂದ ಅರ್ಹ ಪ್ರತಿಯೊಬ್ಬರು ಬರುವ ಮೇ 7 ರಂದು ತಪ್ಪದೇ ಮತದಾನ ಮಾಡುವಂತೆ ಅವರು ಕರೆ ನೀಡಿದರು.
ಸರಕಾರಿ ಮಾದರಿ ಕನ್ನಡ ಶಾಲೆಯ ಹತ್ತಿರ ಮಾನವ ಸಎಅಪಳಿ ನಿರ್ಮಿಸಿ ಮತದಾನದ ಘೋಷಣೆಗಳನ್ನು ಕೂಗುವ ಮೂಲಕ ಮಾಳಾಪೂರ ಬಸ್ ನಿಲ್ದಾಣದಲ್ಲಿ ಎಲ್ಲರೂ ಸೇರಿ ಮತದಾನ ಪ್ರತಿಜ್ಞಾ ವಿದಿ ಭೋದಿಸಿ, ಮನೆ ಮನೆಗೆ ತೆರಳಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು ನಂತರ ಎಲ್ಲ ಬೂತಿನ ಮತಗಟ್ಟೆಗಳನ್ನು ಪರಿಶೀಲಿಸಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಲು ಹಾಗೂ ಮೇ 7, 2024 ರಂದು ತಪ್ಪದೆ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ) ತಾ.ಪಂ ಧಾರವಾಡ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬಿ.ಎಲ್.ಓಗಳು, ತಾಲೂಕ ಪಂಚಾಯತಿಯ ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.